ಪಕ್ಕದಲ್ಲೇ ಇರ್ತಾಳೆ ಸಿಗಲ್ಲ.. ಒಂದೇ ಜಾಗಕ್ಕೆ ಹೋಗ್ತಾರೆ ಕಾಣಲ್ಲ... ನೆಟ್ಟಿಗರಾದ್ರು ನಿರ್ದೇಶಕರು!
ಮಗಳು ಸಹನಾಳನ್ನು ಹುಡುಕಿ ಪುಟ್ಟಕ್ಕ ಕಂಠಿ ಜೊತೆ ಬೆಂಗಳೂರಿಗೆ ಹೋಗಿದ್ದಾಳೆ. ಅಲ್ಲಿ ಅಮ್ಮ-ಮಗಳ ಮಿಲನ ಆಗುವುದೇ?
ಮಗಳು ಸಹನಾ ಬದುಕಿದ್ದಾಳೆ ಎನ್ನುವ ಸತ್ಯ ಗೊತ್ತಿಲ್ಲದಿದ್ದರೂ ಹೆತ್ತ ಕರುಳು ಪುಟ್ಟಕ್ಕನಿಗೆ ಅವಳು ಬದುಕಿದ್ದಾಳೆ ಎಂದು ಎನಿಸುತ್ತಿದೆ. ಸಹನಾ ಬದುಕಿದ್ದರೂ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆಕೆ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದಾರೆ. ಆದರೆ ಸಹನಾ ದೇವಸ್ಥಾನ ಒಂದರಲ್ಲಿ ಕೆಲಸಕ್ಕಿದ್ದುಕೊಂಡು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಸತ್ತಿದ್ದು ಸಹನಾ ಅಲ್ಲ, ಆದರೆ ಅವಳ ಬ್ಯಾಗ್ ಕದ್ದುಕೊಂಡು ಹೋಗಿದ್ದ ಕಳ್ಳಿ. ಮನೆ ಬಿಟ್ಟ ಸಹನಾ ಬಸ್ನಲ್ಲಿ ಹೋಗುವಾಗ ಪಕ್ಕದಲ್ಲಿಯೇ ಇದ್ದಳು ಈ ಕಳ್ಳಿ. ಸಹನಾ ನಿದ್ದೆಗೆ ಜಾರಿದಾಗ ಅವಳ ಎಲ್ಲಾ ಬ್ಯಾಗ್ ಸೇರಿದಂತೆ ಎಲ್ಲಾ ಸಾಮಾನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಓಡಿ ಹೋಗುವ ಸಮಯದಲ್ಲಿ ಅಪಘಾತವಾಗಿ ಅವಳು ಸತ್ತುಹೋಗಿದ್ದಾಳೆ. ಮುಖ ಚಚ್ಚಿದ್ದರಿಂದ ಅವಳ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳ ಬಳಿ ಸಹನಾಗೆ ಸೇರಿದ ಎಲ್ಲಾ ವಸ್ತುಗಳು ಇದ್ದುದರಿಂದ ಪೊಲೀಸರು ಇದು ಸಹನಾ ಇರಬಹುದು ಎಂದಾಗ, ಖುದ್ದು ಪುಟ್ಟಕ್ಕನೇ ಸಹನಾ ಎಂದು ಗುರುತಿಸಿ, ಅಂತ್ಯಕ್ರಿಯೆ ಮಾಡಲಾಗಿದೆ.
ಮನೆಯಲ್ಲಿ ಸಹನಾಳ ಶ್ರಾದ್ಧಕಾರ್ಯವೂ ನಡೆಯುತ್ತಿತ್ತು. ಆದರೆ ಪುಟ್ಟಕ್ಕನಿಗೆ ಸಹನಾ ಬದುಕಿದ್ದಾಳೆ ಅನಿಸುತ್ತಿದೆ. ಅದೇ ಇನ್ನೊಂದೆಡೆ ಕೊರವಂಜಿ ಬಂದು ಸಹನಾ ಬದುಕಿರುವ ಬಗ್ಗೆ ಹಿಂಟ್ ಕೊಟ್ಟು ಹೋಗಿದ್ದೂ ಆಗಿದೆ. ಮಗಳು ಬೆಂಗಳೂರಿನಲ್ಲಿಯೇ ಇದ್ದಿರಬೇಕು ಎಂದು ಪುಟ್ಟಕ್ಕನಿಗೆ ಎನ್ನಿಸಿದೆ. ಮಗಳನ್ನು ಹುಡುಕಿ ಕೊಡಲು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಕಂಠಿಯಲ್ಲಿ ಪುಟ್ಟಕ್ಕ ಕೇಳಿಕೊಂಡಿದ್ದಾಳೆ. ಮಾತು ಕೊಡುವಂತೆ ಹೇಳಿದ್ದಾಳೆ. ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಕಂಠಿ ಹೇಳಿದ್ದಾನೆ.
ಕಸವನ್ನು ಹೀಗೆಲ್ಲಾ ಹೆಕ್ಕಿ ಹಾಕ್ತಾರಾ? ಪೋಸ್ ಕೊಡಲು ಹೋಗಿ ಮಲೈಕಾ ಅರೋರಾ ಸಕತ್ ಟ್ರೋಲ್!
ಅದರಂತೆ ಪುಟ್ಟಕ್ಕ ಮತ್ತು ಕಂಠಿ ಬೆಂಗಳೂರಿಗೆ ಹೊರಟಿದ್ದಾರೆ. ಇವರಿಗೆ ಸಹನಾ ಸಿಗುವಳೇ ಎನ್ನುವುದು ಈಗಿರುವ ಪ್ರಶ್ನೆ. ಬೆಂಗಳೂರಿನಲ್ಲಿಯೇ ಇರುವ ಸಹನಾ ಚಿತ್ರಕಾರರೊಬ್ಬ ಬಳಿಯಿಂದ ತನ್ನ ಅಮ್ಮನ ಚಿತ್ರ ಬಿಡಿಸಿಕೊಂಡಿದ್ದಾಳೆ. ಅವ್ವನೇ ಅವಳಿಗೆ ಸರ್ವಸ್ವ. ಆದರೆ ಗಂಡನ ಮನೆಬಿಟ್ಟು ಬಂದ ತಾವು ಅವ್ವಮ ಮನೆಯಲ್ಲಿ ಇರುವುದು ಬೇಡ ಎಂದು ಮನೆ ಬಿಟ್ಟು ಬಂದಿದ್ದಾಳೆ. ಆದರೆ ಇದರಿಂದ ಮನೆಯವರಿಗೆ ಆಗುತ್ತಿರುವ ಸಂಕಟ ಆಕೆಗೆ ಗೊತ್ತಿಲ್ಲ. ಇಲ್ಲಿ ಪುಟ್ಟಕ್ಕನಿಗೆ ಸಹನಾ ಅವ್ವ ಅವ್ವ ಎಂದು ಕರೆದಂತೆ ಕೇಳಿಸುತ್ತಿದೆ. ಹೆತ್ತ ಕರುಳು ಮಗಳಿಗಾಗಿ ಮಿಡಿಯುತ್ತಿದೆ. ಶ್ರಾದ್ಧಾ ಕಾರ್ಯ ನಡೆಯುತ್ತಿರುವಾಗಲೇ ಸಹನಾ ಸಹನಾ ಎನ್ನುತ್ತಾ ಕುಸಿದು ಬಿದ್ದಿದ್ದಾಳೆ ಪುಟ್ಟಕ್ಕ.
ಈಗ ಪುಟ್ಟಕ್ಕ ಮತ್ತು ಕಂಠಿಗೆ ಸಹನಾ ಸಿಗುವಳೇ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಜೀ ಕನ್ನಡ ವಾಹಿನಿ ಪ್ರೊಮೋ ಬಿಡುಗಡೆ ಮಾಡಿದೆ. ಇದಕ್ಕೆ ಥಹರೇವಾರಿ ಕಮೆಂಟುಗಳು ಬಂದಿವೆ. ಹಲವರು ತಾವೇ ನಿರ್ದೇಶಕರೂ ಆಗಿದ್ದಾರೆ. ಮುಂದೆ ಏನಾಗುತ್ತದೆ ಎಂದು ತಾವೇ ಹೇಳಿದ್ದಾರೆ. ಪಕ್ಕದಲ್ಲೇ ಇರ್ತಾಳೆ ಸಿಗಲ್ಲ.. ಒಂದೇ ಜಾಗಕ್ಕೆ ಹೋಗ್ತಾರೆ ಕಾಣಲ್ಲ... ಅವಳು ದಾರಿಯ ಆ ಕಡೆ ಇರ್ತಾಳೆ, ಇವರು ಈ ಕಡೆ ಇರ್ತಾರೆ, ಒಬ್ಬರನ್ನೊಬ್ಬರು ನೋಡಬೇಕು ಎನ್ನುವಷ್ಟರಲ್ಲಿ ಮಧ್ಯೆ ಒಂದು ಗಾಡಿ ಹಾದು ಹೋಗುತ್ತದೆ. ಇವರು ಬಸ್ ಹತ್ತುತ್ತಾರೆ, ಅವಳು ಬಸ್ ಇಳಿಯುತ್ತಾಳೆ... ಎಂದೆಲ್ಲಾ ಸೀರಿಯಲ್ ನಿರ್ದೇಶನ ಮಾಡಿದ್ದಾರೆ. ಅತ್ತ ಸೀರಿಯಲ್‌ನ ಬಹು ಮುಖ್ಯ ಭಾಗ ಎನಿಸಿದ್ದ ಬಂಗಾರಮ್ಮ ಮತ್ತು ಸ್ನೇಹಾ ಒಂದಾಗಿಬಿಟ್ಟಿದ್ದಾರೆ. ಇನ್ನು ಸ್ನೇಹಾ ಇಷ್ಟು ಬೇಗ ಸಿಕ್ಕರೆ ಸೀರಿಯಲ್‌ನಲ್ಲಿ ಕಥೆ ಏನು ಉಳಿಯಲಿದೆ, ಅದಕ್ಕಾಗಿಯೇ ಇಷ್ಟು ಬೇಗ ಸಿಗಲ್ಲ ಎನ್ನುವುದು ಸೀರಿಯಲ್ ಪ್ರೇಮಿಗಳ ಅಭಿಮತ.
ಪೆದ್ದು ಮಲ್ಲಿಯ ಅದ್ಭುತ ಕಂಠಸಿರಿಗೆ ಮನಸೋತ ಫ್ಯಾನ್ಸ್: ನಟನೆಯಷ್ಟೇ ಮುದ್ದಾಗಿದೆ ದನಿ ಅಂತಿದ್ದಾರೆ...