ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಪುಟ್ಟಕ್ಕ ಚಿಕಿತ್ಸೆಗೆ ಸ್ಪಂದಿಸದೆ ಉಸಿರಾಟ ಸಾವನ್ನಪ್ಪಿದ್ದಾಳೆ. ಸ್ನೇಹಾ ಸಾವಿನ ನಂತರ ಪುಟ್ಟಕ್ಕನ ಸಾವು ಧಾರಾವಾಹಿ ಅಂತ್ಯ ಸೂಚಿಸುತ್ತದೆಯೇ ಎಂಬ ಚರ್ಚೆ ವೀಕ್ಷಕರಲ್ಲಿದೆ. ಪುಟ್ಟಕ್ಕನ ಸಾವಿನಿಂದ ವೀಕ್ಷಕರು ನಿರಾಶೆ ವ್ಯಕ್ತಪಡಿಸಿದ್ದಾರೆ.
ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳನ್ನು ನೀಡುತ್ತಾ, ವೀಕ್ಷಕರು ಮುಂದೇನಾಗುತ್ತೆ ಎಂದು ಕಾಯುವಂತೆ ಮಾಡುತ್ತಿದೆ. ಸದ್ಯ ಸೀರಿಯಲ್ ಕಥೆಯನ್ನು ನೋಡೊದಾದ್ರೆ ಕಂಠಿ ಮನೆಗೆ ಮಗಳು ಸ್ನೇಹಾ ಹೆಸರಿನಲ್ಲಿ ನಡೆಯುವ ಪೂಜೆಗೆ ತೆರಳಿದ್ದ ಪುಟ್ಟಕ್ಕನ ಮೇಲೆ ರೌಡಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಪುಟ್ಟಕ್ಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಪುಟ್ಟಕ್ಕನಿಗೆ ಚಿಕಿತ್ಸೆ ನಡೆಯುತ್ತಿದ್ದು, ಸಹನಾ ತನ್ನ ರಕ್ತವನ್ನು ಕೊಟ್ಟು ಅಮ್ಮನನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸ್ನೇಹಾ ಸತ್ತ ವಿಷ್ಯ ಕೇಳಿ ಶಾಕ್ನಿಂದ ಬಿದ್ದ ಬಂಗಾರಮ್ಮನಿಗೆ ಶೂಟಿಂಗ್ ವೇಳೆ ಆಗಿದ್ದೇನು? ವಿಡಿಯೋ ವೈರಲ್
ಇದೀಗ ಬಿಡುಗಡೆಯಾದ ಪ್ರೊಮೊ ನೋಡಿದ್ರೆ, ಅದರಲ್ಲಿ ಪುಟ್ಟಕ್ಕ ಚಿಕಿತ್ಸೆಗೆ ಸ್ಪಂಧಿಸದೇ ಉಸಿರಾಟದಲ್ಲಿ ಏರು ಪೇರಾಗಿ ಉಸಿರನ್ನೇ (death of Puttakka) ನಿಲ್ಲಿಸಿರುವುದನ್ನು ಕಾಣಬಹುದು. ಈ ಪ್ರೊಮೋದಲ್ಲಿ ಕಾಣುತ್ತಿರುವುದು ಅದೆಷ್ಟು ನಿಜಾ? ಅದೆಷ್ಟು ಸುಳ್ಳು ಅನ್ನೋದು ಗೊತ್ತಿಲ್ಲ. ಆದರೆ ಒಂದು ವೇಳೆ ಇದು ನಿಜವೇ ಆದರೆ ಪುಟ್ಟಕ್ಕನ ಮಕ್ಕಳು ಎಂದು ಹೆಸರಿರುವ ಧಾರಾವಾಹಿಯಲ್ಲಿ ಪುಟ್ಟಕ್ಕನೇ ಇಲ್ಲದಿದ್ದರೆ ಹೇಗೆ? ಸ್ನೇಹಾ ಸಾವಿನಿಂದ ವೀಕ್ಷಕರಿಗೆ ಭಾರಿ ಆಘಾತವಾಗಿತ್ತು, ಸ್ನೇಹಾ ಇಲ್ಲದೇ ಇದ್ದರೆ ಇನ್ನು ಮುಂದೆ ಸೀರಿಯಲ್ (serial) ನೋಡೋದೆ ಇಲ್ಲ ಎಂದೇ ಜನ ಹೇಳುತ್ತಿದ್ದರು. ಅಷ್ಟೇ ಅಲ್ಲ, ಸ್ನೇಹಾ ಇಲ್ಲದೇ ಕಥೆ ಹಳ್ಳ ಹಿಡಿಯುತ್ತಿದೆ ಅಂತ ಕಿಡಿ ಕಾರಿದ್ದರು ಜನ, ಆದರೆ ಈಗ ಸ್ನೇಹಾ ಹಿಂದೆ ಪುಟ್ಟಕ್ಕನ ಸಾವು ಆದ್ರೆ ಧಾರಾವಾಹಿಯಲ್ಲಿ ಮುಂದೆ ಏನಿದೆ? ಅಂದ್ರೆ ಶೀಘ್ರದಲ್ಲೇ ಸೀರಿಯಲ್ ಮುಕ್ತಾಯ ಕಾಣುವ ಹಿನ್ನೆಲೆಯಲ್ಲಿ ಪುಟ್ಟಕ್ಕನ ಪಾತ್ರವನ್ನು ಈ ರೀತಿಯಾಗಿ ಕೊನೆ ಮಾಡಲಾಯಿತೇ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಸೀರಿಯಲ್ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್ ಶಾಕ್
ಈ ಪ್ರೊಮೋ ನೋಡಿದ ವೀಕ್ಷಕರು ಸೀರಿಯಲ್ ಹಾಗೂ ನಿರ್ದೇಶಕರ ವಿರುದ್ಧ ಕಿಡಿ (angry on director)ಕಾರಿದ್ದಾರೆ. ಸ್ನೇಹ ಸತ್ತಾಗ್ಲೇ ಧಾರಾವಾಹಿ ಹೋಯ್ತು , ಈವಾಗ ಮಣ್ಣಾಯ್ತು ಅಷ್ಟೇ ಬೈ ಬೈ ಪುಟ್ಟಕ್ಕನ ಮಕ್ಕಳು, ಚೆನ್ನಾಗಿರೋ ಸೀರಿಯಲ್ ನ ಹಾಳು ಮಾಡೋದು ಅಂದ್ರೆ ಇದೆ. ಅಯ್ಯೋ ಪುಟ್ಟಕ್ಕನ್ನೇ ಸಾಯಿಸ್ಬಿಟ್ರ? ಏನ್ ಸೀರಿಯಲ್ ಇದು, ನೋಡೋಕೆ ಬೇಜಾರು ಅವ್ರು ಇಲ್ದೇ ಹೊದ್ರೆ , ಪುಟ್ಟಕನೇ ಸತ್ತ ಮೇಲೆ ಈ ಧಾರಾವಾಹಿ ಯಾಕೆ ನಿಲ್ಲಿಸಿ , ಆಯ್ತು ಸ್ನೇಹಾ, ಆಯ್ತು ಈಗ ಪುಟ್ಟಕ್ಕ, ಹೀಗೆ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಸಾಯಿಸಿ ಕಥೆಯನ್ನೇ ಮುಗಿಸಿ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ,, ಪುಟ್ಟಕ್ಕ ಹೋದರೆ ಧಾರವಾಹಿ ಮತ್ತು zee ಕನ್ನಡ ತಬ್ಬಲಿಯಾದಂತೆ., ಎಂದು ಹಲವು ಅಭಿಮಾನಿ ವೀಕ್ಷಕರು ತಮ್ಮ ಬೇಸರವನ್ನು ತೋರಿಸಿಕೊಂಡಿದ್ದಾರೆ. ಇನ್ನೂ ಕೆಲವರು ಇದು ರಾಜಿ ಕಾಣುತ್ತಿರುವ ಕನಸು ಇರಬೇಕು. ಪುಟ್ಟಕ್ಕನಿಗೆ ಏನು ಆಗಲ್ಲ ಎಂದು ಹೇಳಿದ್ದಾರೆ. ಮುಂದೆ ಏನಾಗುತ್ತೆ? ಪುಟ್ಟಕ್ಕ ಎದ್ದು ಬರುತ್ತಾಳ? ಅಥವಾ ಸೀರಿಯಲ್ ಶೀಘ್ರದಲ್ಲೆ (end of Puttakkana Makkalu) ಮುಗಿಯುತ್ತಾ? ಮುಂದೆ ಏನು ಅನ್ನೋದನ್ನು ಕಾದು ನೋಡೋಣ.
