ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಹೊಸ ಮುಖವೊಂದು ತೆರೆದುಕೊಳ್ಳುತ್ತಿದೆ. ಪುಟ್ಟಕ್ಕ ತನ್ನ ಮಗಳು ಸುಮಾ ಕಾಲೇಜಿನ ಹುಡುಗಿಯರಿಗೆ ಖೋ ಖೋ ಕೋಚ್ ಆಗುತ್ತಿದ್ದಾಳೆ. ಆದರೆ ಈ ಸಂಗತಿಯನ್ನು ಮಗಳ ಮುಂದೆ ಬಾಯಿ ಬಿಟ್ಟಿಲ್ಲ. ಪುಟ್ಟಕ್ಕನಾಗಿ ಉಮಾಶ್ರೀ ನಟನೆಗೆ ವೀಕ್ಷಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅತ್ಯಧಿಕ ವೀಕ್ಷಣೆ ದಾಖಲಿಸಿರುವ ಸೀರಿಯಲ್ ಪುಟ್ಟಕ್ಕನ ಮಕ್ಕಳು. ಯಾವ ಪಾತ್ರಕ್ಕೂ ಸೈ ಅನಿಸುವ ನಟನೆ ಉಮಾಶ್ರೀ ಅವರದು. ಈ ಸೀರಿಯಲ್‌ನಲ್ಲಂತೂ ಪುಟ್ಟಕ್ಕನ ಪಾತ್ರದಲ್ಲಿ ಅವರ ನಟನೆ ಕಂಡು ಫಿದಾ ಆಗದವರೇ ಇಲ್ಲ. ಪಕ್ಕಾ ಹಳ್ಳಿ ಹೆಂಗಸಿನಂತಾ ಮ್ಯಾನರಿಸಂ, ಮಾತು, ನಡೆ ಎಲ್ಲವನ್ನೂ ಅವರು ಲೀಲಾಜಾಲವಾಗಿ ನಟಿಸಿದ್ದಾರೆ. ಇನ್ನೇನು ಅವರ ಪ್ರತಿಭೆಯ ಮತ್ತೊಂದು ಮುಖವೂ ಅನಾವರಣವಾಗಲಿದೆ. ಅವರು ಖೋ ಖೋ ಕೋಚ್ ಪಾತ್ರದಲ್ಲಿ ಮಿಂಚಲಿದ್ದಾರೆ. ಊರಲ್ಲಿ ಸಣ್ಣ ಹೊಟೇಲಿಟ್ಟುಕೊಂಡಿರುವ ಮೂವರು ಹೆಣ್ಣುಮಕ್ಕಳನ್ನು ಶಿಸ್ತಿನಿಂದ, ಪ್ರೀತಿಯಿಂದ ಸಾಕಿರುವ ಗಟ್ಟಿಗಿತ್ತಿ ಮಹಿಳೆ ಪುಟ್ಟಕ್ಕ. ಈಗಾಗಲೇ ಅವಳ ಶಕ್ತಿ, ಗಟ್ಟಿತನ, ಒಳ್ಳೆ ಮನಸ್ಸಿನ ಪರಿಚಯ ಎಲ್ಲರಿಗೂ ಆಗಿದೆ. ಆದರೆ ಕತೆ ಅಷ್ಟಕ್ಕೇ ಮುಗಿದಿಲ್ಲ. ಅವರ ಇನ್ನೊಂದು ಪ್ರತಿಭೆಯನ್ನೂ ಹೊರತರಲಿದೆ. ಗ್ರಾಮೀಣ ಭಾಗದ ಕ್ರೀಡೆ ಖೋ ಖೋ ಕೋಚ್ ಆಗಿ ಅವರು ಕಾಲೇಜು ಹುಡುಗಿಯರಿಗೆ ಗೈಡ್ ಮಾಡಲಿದ್ದಾರೆ. ಹಳೆ ಬೇರು, ಹೊಸ ಚಿಗುರುಗಳ ಈ ಪ್ರತಿಭಾ ಪ್ರದರ್ಶನಕ್ಕೆ ವೀಕ್ಷಕರು ಎದುರು ನೋಡುತ್ತಿದ್ದಾರೆ.
ಪುಟ್ಟಕ್ಕನ ಮಗಳು ಸುಮಾಗೆ ಖೊ-ಖೊ ಸ್ಪರ್ಧೆಯಲ್ಲಿ ಏನಾದರು ಸಾಧನೆ ಮಾಡಬೇಕು ಹಂಬಲ. ಆದರೆ ಅವರ ಕಾಲೇಜಿನಲ್ಲಿ ಕೋಚ್ ವಿಚಾರಕ್ಕೆ ದೊಡ್ಡ ಅವಾಂತರವಾಗಿದೆ. ಕೊನೆಯ ಕ್ಷಣದಲ್ಲಿ ಈಗ ಆಕೆಗೆ ಕೋಚ್ ಆಗಿ ಪುಟ್ಟಕ್ಕ ಬಂದಿದ್ದಾಳೆ. ಪುಟ್ಟಕ್ಕ ಸಣ್ಣ ವಯಸ್ಸಿನಿಂದಲೂ ಖೊ-ಖೊ ಆಟಗಾರ್ತಿ ಆದರೆ ಈ ವಿಚಾರ ಸ್ವತಃ ಆಕೆಯ ಮಕ್ಕಳಿಗೆ ತಿಳಿದಿಲ್ಲ. ಆದರೆ ಈಗ ಸತ್ಯ ತಿಳಿದುಕೊಳ್ಳುವ ಸಮಯ ಬಂದಿದೆ. ಈ ಹಿಂದೆ ಮಕ್ಕಳಿಗೆ ಸಿಕ್ಕ ಪ್ರಶಸ್ತಿ ಪತ್ರ ಪುಟ್ಟಕ್ಕನದ್ದೇ ಎಂದು ಸುಮಾಗೆ ತಿಳಿಯುವ ದಿನ ಬಂದಿದೆ.
ಇತ್ತ ಮುರಳಿ ಮೇಷ್ಟ್ರ ಮೇಲೆ ಸಹನಾಗೆ ಲವ್ ಆಗಿದೆ. ಪ್ರೀತಿ ಮಾಡೋದು ಮಾಡಿ ಆಗಿದೆ ಆದರೆ ಇದನ್ನು ಮನೆಯವರ ಬಳಿ ಹೇಳಲು ಸಹನಾಗೆ ಭಯ. ಮನೆಯಲ್ಲಿ ಅಮ್ಮ ತಂಗಿಯಂದಿರು ಏನನ್ನುತ್ತಾರೆ ಎಂದು ಯೋಚಿಸುತ್ತಾ ಭಯ ಅವಳು ಭಯಪಡುತ್ತಿದ್ದಾಳೆ.
ಇದನ್ನೆಲ್ಲ ಗಮನಿಸಿದ ಸುಮಾ ಮುರಳಿ ಮೇಷ್ಟ್ರು ಹಳ್ಳಿ ರಸ್ತೆಯಲ್ಲಿ ಕಾಣ ಸಿಕ್ಕಾಗ ಹೇಳುತ್ತಾಳೆ. 'ಸರ್ ನೀವು ಮಾಡಿದ್ದು ಚೂರು ಸರಿ ಇಲ್ಲ. ಸಹನಾ ಅಕ್ಕನ ಮನಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಬೇಕು. ನೀವು ಮೊದಲಿಗೆ ಅಮ್ಮನ ಬಳಿ ಸ್ನೇಹಾ ಅಕ್ಕನ ಬಳಿ ಮದುವೆಯ ಬಗ್ಗೆ ಮಾತುಕತೆ ನಡೆಸಿ ಬಳಿಕ ಸಹನಾ ಅಕ್ಕನ ಬಳಿ ಮಾತನಾಡಿ' ಎಂದು ಹೇಳುತ್ತಾಳೆ. ತನ್ನ ತಪ್ಪಿನ ಅರಿವಾಗಿ ಮೇಷ್ಟ್ರಿಗೆ ಪಶ್ಚಾತ್ತಾಪ ಆಗುತ್ತದೆ. ತಪ್ಪಾಯಿತು ಎಂದು ಕ್ಷಮೆಯನ್ನು ಕೇಳುತ್ತಾರೆ ಆದರೆ ಏನು ಪ್ರಯೋಜನ ಕ್ಷಮಿಸಲು ಸಹನಾ ಅಲ್ಲಿಲ್ಲ. ಆದರೆ ಮದುವೆಯ ಮಾತುಕತೆಗೆ ಮುರಳಿ ಮೇಷ್ಟ್ರು ರೆಡಿ ಆಗಿರುವ ರೀತಿಯನ್ನು ಸುಮಾ ನೋಡುತ್ತಾಳೆ.
ಹಿಟ್ಲರ್ ಕಲ್ಯಾಣ: ಪವಿತ್ರಾಗೆ ಮಾತು ಬಂತು, ಆಮೇಲೆ ನಡೆದದ್ದು ಶಾಕಿಂಗ್ ಘಟನೆ!
ಇನ್ನೊಂದೆಡೆ ಕಂಠಿ ಸಮಸ್ಯೆಯಲ್ಲಿ ಸಿಕ್ಕಾಕಿಕೊಂಡಿದ್ದಾನೆ. ಆತನ ಮಾವನ ಮಗಳ ಪೂರ್ವಿ ವಿದೇಶದಿಂದ ಬಂದ ಅಪ್ಪನನ್ನು ಸಿಟಿಯಿಂದ ಕರೆತಂದಿದ್ದಾಳೆ. ಪೂರ್ವಿಗೆ ಕಂಠಿ ಅಂದರೆ ಪ್ರಾಣ ಆದರೆ. ಕಂಠಿ ಮನಸ್ಸು ಮಾತ್ರ ಸ್ನೇಹಾ ಕಡೆ ವಾಲುತ್ತಿದೆ. ಈ ಬಗ್ಗೆ ಪೂರ್ವಿಗೆ ಈ ಬಗ್ಗೆ ಕೊಂಚ ಅನುಮಾನ ಮೂಡಿರುವುದಂತು ಸತ್ಯ. ಪೂರ್ವಿ ತಂದೆ ವಿದೇಶದಿಂದ ಬರುವ ಖುಷಿಯಲ್ಲಿ ಪೂರ್ವಿ ಹಿರಿ ಹಿರಿ ಹಿಗ್ಗುತ್ತಾ ಇದ್ದಾಳೆ. ಆದರೆ ಕಂಠಿ ಮಾತ್ರ ಮುಖ ಸಪ್ಪಗೆ ಮಾಡಿಕೊಂಡಿದ್ದಾನೆ. ಪೂರ್ವಿಯನ್ನೂ ನೋಡಿದರೆ ಮಾರುದ್ದ ಹೋಗುತ್ತಿದ್ದ ಕಂಠಿ ಇದೀಗ ಪೂರ್ವಿ ಬಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅಮ್ಮನ ಮಾತನ್ನು ಮೀರಲಾಗದೆ ಪೂರ್ವಿ ಜೊತೆ ಆಕೆಯ ತಂದೆಯನ್ನು ಕರೆತರಲು ಬೆಂಗಳೂರಿಗೆ ಹೋಗಿದ್ದಾನೆ. ಆತ ಅದೆಷ್ಟು ಬಾರಿ ಪೂರ್ವಿ ಕೈ ಯಲ್ಲಿ ತಪ್ಪಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರು ಪೂರ್ವಿ ಮಾತ್ರ ಆತನ ಬೆನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಇತ್ತ ಕಂಠಿ ಹಾಗೂ ಪೂರ್ವಿನ ಒಟ್ಟಿಗೆ ನೋಡಿದ ಸ್ನೇಹಾಗೆ ಅರ್ಥವಾಗದೆ ನೋಡುತ್ತಾಳೆ. ಕಂಠಿ ಇಕ್ಕಟಿಗೆ ಬಿದ್ದಿದ್ದಾನೆ.
ಕಿರುತೆರೆ ಅಭಿಮಾನಿಗಳಿಗೆ ಬೇಸರ ಸುದ್ದಿ: ಪ್ರಸಾರ ನಿಲ್ಲಿಸುತ್ತಿದೆ 'ದೊರೆಸಾನಿ'?
