ರಾಜರತ್ನ, ಪವರ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಅವರ ಹುಟ್ಟುಹಬ್ಬದ ದಿನದಂದು ಅಂದರೆ ಮಾರ್ಚ್ 17ಕ್ಕೆ ರಿಲೀಸ್ ಆಗಿ ಅಭಿಮಾನಿಗಳ ನೋವವನ್ನು ಮರೆಸಿತ್ತು. ಬೆಳ್ಳಿತೆರೆಯ ಮೇಲಿನ ಪುನೀತ್ ರಾಜ್ ಕುಮಾರ್ ದರ್ಶನ ಅವರ ಅಗಲಿಕೆಯನ್ನು ದೂರಾಗಿಸಿತ್ತು. ಮತ್ತೀಗ ಕಿರುತೆರೆಯಲ್ಲಿ ರಾಜರತ್ನ ವೈಭವವನ್ನು ಕಣ್ತುಂಬಿಕೊಳ್ಳಬಹುದು.
• ಪುನೀತ್ ರಾಜ್ ಕುಮಾರ್ ವಾಯ್ಸ್ ನಲ್ಲೇ ನೋಡಿ ಜೇಮ್ಸ್
• ಮಾ.17ಕ್ಕೆ ಪುನಿತ್ ಜನ್ಮದಿನ, ಜು.17ಕ್ಕೆ ಮರುಜನ್ಮದಿನ
• ಅಭಿಮಾನಿ ದೇವರುಗಳ ಮನಗೆ ಬರುತ್ತಿದ್ದಾರೆ ರಾಜರತ್ನ
ರಾಜರತ್ನ, ಪವರ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಅವರ ಹುಟ್ಟುಹಬ್ಬದ ದಿನದಂದು ಅಂದರೆ ಮಾರ್ಚ್ 17ಕ್ಕೆ ರಿಲೀಸ್ ಆಗಿ ಅಭಿಮಾನಿಗಳ ನೋವವನ್ನು ಮರೆಸಿತ್ತು. ಬೆಳ್ಳಿತೆರೆಯ ಮೇಲಿನ ಪುನೀತ್ ರಾಜ್ ಕುಮಾರ್ ದರ್ಶನ ಅವರ ಅಗಲಿಕೆಯನ್ನು ದೂರಾಗಿಸಿತ್ತು. ಮತ್ತೀಗ ಕಿರುತೆರೆಯಲ್ಲಿ ರಾಜರತ್ನ ವೈಭವವನ್ನು ಕಣ್ತುಂಬಿಕೊಳ್ಳಬಹುದು.
ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ವಾಹಿನಿಯಲ್ಲಿ ಜೇಮ್ಸ್ ಸಿನಿಮಾ ಇದೇ ಜುಲೈ 17ರಂದು ಭಾನುವಾರ ಸಂಜೆ 5.30ಕ್ಕೆ ವರ್ಲ್ಡ್ ಪ್ರಿಮಿಯರ್ ಆಗುತ್ತಿದೆ. ಈ ಪ್ರಸಾರದಲ್ಲಿ ಅಭಿಮಾನಿಗಳಿಗೊಂದು ಅಚ್ಚರಿಯ ವಿಷಯ ಇದೆ. ಅಭಿಮಾನಿಗಳು ಇಲ್ಲಿಯವರೆಗೂ ಜೇಮ್ಸ್ ಸಿನಿಮಾವನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಧ್ವನಿಯಲ್ಲಿ ನೋಡಿ ಭಾವುಕರಾಗಿ, ಖುಷಿ ಪಟ್ಟರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದೇ ಧ್ವನಿಯಲ್ಲಿ ಸಿನಿಮಾ ನೋಡಬಹುದಾಗಿದೆ.
ಈ ಬಾರಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ರಾರಾಜಿಸಲಿದ್ದಾರೆ ರಾಜ್ ಕುಮಾರ್, ಪುನೀತ್
ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿರುವ ಬಹುದ್ದೂರ್ ಚೇತನ್ ಕುಮಾರ್ ನಿರ್ದೇಶನ ಮಾಡಿರುವ, ಚರಣ್ ರಾಜ್ ಸಂಗೀತ ಸಂಯೋಜನೆಯ ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಯೋಧನ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಶರತ್ ಕುಮಾರ್, ಶ್ರೀಕಾಂತ್, ಚಿಕ್ಕಣ್ಣ ರಂಗಾಯಣ ರಘು, ಸಾಧು ಕೋಕಿಲಾ, ಅವಿನಾಶ್, ಆದಿತ್ಯ ಮೆನನ್ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಈಗಾಗಲೇ ಜೇಮ್ಸ್ ಸಿನಿಮಾವನ್ನು ಮನೆಮಂದಿ ಜೊತೆಗೆ ಥಿಯೇಟರ್ ನಲ್ಲಿ ನೋಡಿ ಖುಷಿ ಪಟ್ಟಿರುವ ಅಭಿಮಾನಿಗಳು ಟಿವಿಯಲ್ಲಿ ನೋಡಲು ಕಾರತರಾಗಿದ್ದರು, ಆ ಸಮಯದಲ್ಲಿ ಈಗ ಸನ್ನಿಹಿತವಾಗಿದೆ.