ರಾಜಾ ರಾಣಿ ರೀಲೋಡೆಡ್​ಗೆ ಹೇಗೆ ನಡೀತಿದೆ ತಯಾರಿ? ಶೂಟಿಂಗ್​ ಪ್ರೊಮೋ ರಿಲೀಸ್​

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ ರಾಜಾ ರಾಣಿ ರೀಲೋಡೆಡ್​ಗೆ ಹೇಗೆ ನಡೀತಿದೆ ತಯಾರಿ? ಶೂಟಿಂಗ್​ ಪ್ರೊಮೋ ರಿಲೀಸ್​
 

preparation for Raja Rani Reloaded to be aired on Colors Kannada channel promo release suc

ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಇದಾಗಲೇ ರಾಜಾ ರಾಣಿ ಮೂರನೇ ಸೀಸನ್ ಪ್ರೊಮೋಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಿಯಾಲಿಟಿ ಷೋ ವೀಕ್ಷಕರು ಈ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಜಾ ರಾಣಿ ರೀಲೋಡೆಡ್​ ಹೆಸರಿನಲ್ಲಿ ಇದು ಶುರುವಾಗಲಿದೆ. ಈ ರಿಯಾಲಿಟಿ ಷೋಗೆ ಸಂಬಂಧಿಸಿದಂತೆ ಪ್ರತಿದಿನ ಕುತೂಹಲ ಎನ್ನುವ ಪ್ರೊಮೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ರಿಯಲ್ ಜೋಡಿಗಳು, ಒಬ್ಬರನ್ನೊಬ್ಬರು ಎಷ್ಟೊಂದು ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದನ್ನು ತಿಳಿಸುವ ಈಗಾಗಲೇ 2 ಸೀಸನ್ ಗಳನ್ನು ಮುಗಿಸಿರುವ ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಇದೇ ಜೂನ್ 8 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. 

ಇದೀಗ ಇದರ ಹೊಸ ಪ್ರೊಮೋ ರಿಲೀಸ್​ ಮಾಡಲಾಗಿದೆ. ಇದರಲ್ಲಿ ರಾಜಾ ರಾಣಿ ರೀಲೋಡೆಡ್​ ಶೂಟಿಂಗ್​ ಹೇಗೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ವಿಡಿಯೋ ಇದೆ. ಇದರಲ್ಲಿ ಈ ಷೋಗೆ ತೀರ್ಪುಗಾರರಾಗಿ ಬರುವ ಸೃಜನ್​ ಲೋಕೇಶ್​ ಮತ್ತು ತಾರಾ ಅನುರಾಧ ಅವರ ಶೂಟಿಂಗ್​ ಕುರಿತು ತಿಳಿಸಲಾಗಿದೆ.  ಜೊತೆಗೆ ನಿರೂಪಕಿಯಾಗಿ ಆಗಮಿಸಲಿರುವ ನಿರುಪಮಾ ಗೌಡ ಅವರ ವಿಡಿಯೋಗಳು ಕೂಡ ಸೇರಿವೆ. ಇದಾಗಲೇ ಮೂವರು ತೀರ್ಪುಗಾರರು ಹಾಗೂ ಓರ್ವ ಆ್ಯಂಕರ್​ ಕುರಿತು ವಾಹಿನಿ ಪ್ರೊಮೋ ಬಿಡುಗಡೆ ಮಾಡಿದೆ.  ಮೂರನೆಯ ತೀರ್ಪುಗಾರರು ಯಾರು ಎಂಬ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅಷ್ಟರಲ್ಲಿ ಸೃಜನ್​ ಲೋಕೇಶ್​ ಅವರು ಈ ಪ್ರಶ್ನೆ ಕೇಳಿದಾಗ, ಪ್ರಭುದೇವ ಅವರಿಗೆ ಕಾಲ್​ ಮಾಡುವುದಾಗಿ ತಾರಾ ಹೇಳಿದ್ದರು. ಹಾಗಿದ್ದರೆ ಈ ರಿಯಾಲಿಟಿ ಷೋಗೆ ನಟ ಪ್ರಭುದೇವ್​ ಅವರು ಎಂಟ್ರಿ ಕೊಡಲಿದ್ದಾರೆಯೇ ಎನ್ನುವ ಕುತೂಹಲ ಫ್ಯಾನ್ಸ್​ದ್ದಾಗಿತ್ತು. ಇದೀಗ ಮತ್ತೊಂದು ಪ್ರೊಮೋ ಬಿಡುಗಡೆಯಾಗಿದೆ, ಅದರಲ್ಲಿ ನಟಿ ಅದಿತಿ ಪ್ರಭುದೇವ ಅವರ ಆಗಮನವಾಗಿದೆ.

ಎರಡು ತಿಂಗಳ ಮಗು ಬಿಟ್ಟು ಬರ್ತೀರಾ? ನಟಿ ಅದಿತಿ ಪ್ರಭುದೇವ್​ಗೆ ಅಭಿಮಾನಿಗಳ ಕ್ಲಾಸ್​​!

ಇನ್ನು ಈ ಷೋ ಕುರಿತು ಹೇಳುವುದಾದರೆ,  ರಾಜಾ ರಾಣಿ (Raja Rani) ಕಾರ್ಯಕ್ರಮದ ಮೂರನೇ ಸೀಸನ್ ಆಗಿ ರಾಜಾ ರಾಣಿ ರೀಲೋಡೆಡ್ ಇದೇ ಜೂನ್ 8 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಅನುಪಮಾ ಗೌಡ ಮತ್ತೆ ನಿರೂಪಕಿಯಾಗಿ ಆಗಮಿಸಲಿದ್ದಾರೆ.  ಈ ಮೊದಲು ಬಿಡುಗಡೆಯಾದ ಪ್ರೊಮೋದಲ್ಲಿ ಜಡ್ಜ್ ಗಳು ಮತ್ತು ನಿರೂಪಕಿಯನ್ನು ಪರಿಚಯಿಸಲಾಗಿತ್ತು. ತಾರಾ ಅವರು ಏನೋ ಸೃಜಾ ಹೊಸ ಗಾಳಿ ಬೀಸ್ತಿರೋ ಹಾಗಿದೆ ಎಂದಾಗ, ಸೃಜನ್ ನನಗೂ ಹಾಗೆ ಅನಿಸ್ತಿದೆ ಅಂತಾರೆ, ಆವಾಗ ಹಿಂದಿನಿಂದ ಮೆಲ್ಲಗೆ ಬರೋ ಅನುಪಮಾ ಗೌಡ, ಹೊಸಬಳೇನು ಅಲ್ಲ, ಎಷ್ಟು ವರ್ಷಗಳಿಂದ ಇಲ್ಲೇ ಇದ್ದೀನಿ ಎನ್ನುವ ಮೂಲಕ ಇವರೇ ನಿರೂಪಕಿ ಎಂದು ತೋರಿಸಲಾಗಿತ್ತು. 

ಮೊನ್ನೆ ಹೊಸ ಪ್ರೊಮೋ ಬಿಡುಗಡೆ ಮಾಡಿ ಅದಿತಿ ಪ್ರಭುದೇವ ಅವರ ಆಗಮನದ ಬಗ್ಗೆ ತಿಳಿಸಲಾಗಿತ್ತು.  ಇದರ ಪ್ರೊಮೋ ನೋಡುತ್ತಿದ್ದಂತೆಯೇ ಅಭಿಮಾನಿಗಳು ನಟಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಕಾರಣ, ಎರಡು ತಿಂಗಳ ಹಿಂದಷ್ಟೇ ನಟಿ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗೆ ನೋಡುವುದಾದರೆ ಈಕೆಯಿನ್ನೂ ಬಾಣಂತಿ. ಆದರೆ ಇದರ ನಡುವೆಯೇ ಶೂಟಿಂಗ್​ಗೆ ಬಂದಿರುವುದು ಹಾಗೂ ರಿಯಾಲಿಟಿ ಷೋನಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನಟಿಯ ಫ್ಯಾನ್ಸ್​ ಮುನಿಸು ತೋರಿದ್ದರು. ಮಗುವಿಗೆ ಈ ಸಂದರ್ಭದಲ್ಲಿ ಅಮ್ಮನ ಅವಶ್ಯಕತೆ ಇರುತ್ತದೆ. ರಿಯಾಲಿಟಿ ಷೋಗಳ ಶೂಟಿಂಗ್​ ಎಂದರೆ ಅದು ಸುದೀರ್ಘವಾದದ್ದು. ದಿನಪೂರ್ತಿ ಶೂಟಿಂಗ್​ ನಡೆಯುತ್ತದೆ. ಮಗುವನ್ನು ನೋಡಿಕೊಳ್ಳಲು ಅಜ್ಜಿ ಇದ್ದರೂ ಅಮ್ಮನಿಗೆ ಅವಳದ್ದೇ ಆದ ಕೆಲವು ಜವಾಬ್ದಾರಿಗಳು ಇರುತ್ತವೆ. ಅದನ್ನು ಮರೆತು ನೀವು ಇದರಲ್ಲಿ ಇಷ್ಟು ಬೇಗ ಪಾಲ್ಗೊಳ್ಳುವುದು ಯಾಕೋ ಸರಿ ಕಾಣುತ್ತಿಲ್ಲ ಎಂದು ಕಮೆಂಟಿಗರು ಇಂದಿಗೂ ಹೇಳುತ್ತಿದ್ದಾರೆ. 

ನಟಿ ಅದಿತಿ ಪ್ರಭುದೇವ ಮೊದಲ ಮಗಳಿಗೆ ಮೊದಲ ವರ್ಷದ ಹುಟ್ಟುಹಬ್ಬ! ಸೆಲಬ್ರೇಷನ್​ ಹೇಗಿದೆ ನೋಡಿ...

Latest Videos
Follow Us:
Download App:
  • android
  • ios