BBK9; ಫ್ರಾಕ್ ಹಾಕಿ ಡಾನ್ಸ್ ಮಾಡಿದ ಪ್ರಶಾಂತ್ ಸಂಬರಗಿ; ಯಾರೆ ನೀನು ಚೆಲುವೆ ಎಂದ ನೆಟ್ಟಿಗರು

ಪ್ರಶಾಂತ್ ಸಂಬರಗಿ ಹೊಸ ಲುಕ್ ವೈರಲ್ ಆಗಿದೆ. ಫ್ರಕ್ ಧರಿಸಿ ಡಾನ್ಸ್ ಮಾಡಿರುವ ಪ್ರಶಾಂತ್ ನೋಡಿ ನೆಟ್ಟಿಗರು ಯಾರೆ ನೀನು ಚೆಲುವೆ ಎನ್ನುತ್ತಿದ್ದಾರೆ.  

prashanth Sambargi Female look in Bigg Boss Kannada 9 viral on social media sgk

ಬಿಗ್ ಬಾಸ್ ಸೀಸನ್ 9 ಈ ವಾರ ಮತ್ತಷ್ಟು ರೋಚಕವಾಗಿದೆ. ಈಗಾಗಲೇ 11ನೇ ವಾರಕ್ಕೆ ಕಾಲಿಟ್ಟಿದೆ ಬಿಗ್ ಬಾಸ್. ಸದ್ಯ ಮನೆಯಲ್ಲಿ 10 ಮಂದಿ ಇದ್ದಾರೆ. 10 ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ, ತಮಾಷೆ ಜೋರಾಗಿದೆ. ಬಿಗ್ ಬಾಸ್ ಇಂದಿನ (ಡಿಸೆಂಬರ್ 5)ರ ಪ್ರೋಮೋ ರಿಲೀಸ್ ಆಗಿದ್ದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಅಗ್ರೆಸಿವ್ ಆಗಿದ್ದಿದ್ದು ಪ್ರಶಾಂತ್ ಸಂಬರಗಿ. ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಪ್ರಶಾಂತ್ ಸಂಬರಗಿ.ಈ ಬಾರಿ ಮನೆಯಲ್ಲಿ ಪ್ರಶಾಂತ್ ಮತ್ತು ರೂಪೇಶ್ ರಾಜಣ್ಣ ಅವರೇ ಹೆಚ್ಚು ಸದ್ದು ಮಾಡಿದ್ದು. ಇಬ್ಬರೂ ಸದಾ ಕಿತ್ತಾಡುತ್ತಿದ್ದರು, ಜಗಳದಲ್ಲೇ ಮುಳುಗಿರುತ್ತಿದ್ದರು. ಆದರೆ ಈ ವಾರ ಪ್ರಶಾಂತ್ ಹೆಣ್ಣಾಗಿ ಬದಲಾಗಿದ್ದಾರೆ. ಪ್ರಶಾಂತ್ ಅವರ ಹೊಸ ವೇಷ ನೋಡುಗರಲ್ಲಿ ಕುತೂಹಲ ಹೆಚ್ಚಿಸಿದೆ. 

ಪ್ರಶಾಂತ್ ಸಂಬರಗಿ ಫ್ರಾಕ್ ಧರಿಸಿ ಮಸ್ತ್ ಡಾನ್ಸ್ ಮಾಡಿದ್ದಾರೆ. ಸಂಪೂರ್ಣವಾಗಿ ಬದಲಾದ ಪ್ರಶಾಂತ್ ನೋಡಿ ಉಳಿದ ಸ್ಪರ್ದಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಪ್ರಶಾಂತ್ ಅವರಿಗೆ ಅನುಪಮಾ ಗೌಡ ನೃತ್ಯ ಹೇಳಿಕೊಟ್ಟಿದ್ದಾರೆ. ಅಂದಹಾಗೆ ಇದು ಅನುಪಮಾಗೆ ಕೊಟ್ಟ ಟಾಸ್ಕ್. ಕುಡಿಯುವ ನೀರಿನ ಗ್ಲಾಸ್ ಒಡೆದು ಹಾಕಿದ ಕಾರಣ ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದೆ. ಅನುಪಮಾ ನೀರು ಕುಡಿಯಬೇಕೆಂದರೆ ಪುರುಷ ಸದಸ್ಯರಿಗೆ ಡಾನ್ಸ್ ಹೇಳಿಕೊಡಬೇಕು. ನೀರು ಕುಡಿಯುವ ಮೊದಲು ಅನುಪಮಾ ಮನೆಯ ಪುರುಷ ಸದಸ್ಯರಿಗೆ ನೃತ್ಯ ಹೇಳಿಕೊಟ್ಟಿದ್ದಾರೆ. ರೂಪೇಶ್ ಶೆಟ್ಟಿಗೆ ಬೆಲ್ಲಿ ಡಾನ್ಸ್ ಕಲಿಸಿಕೊಟ್ಟಿದ್ದಾರೆ. ರೂಪೇಶ್ ಡಾನ್ಸ್ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಬಳಿಕ ಪ್ರಶಾಂತ್ ಅವರಿಗೂ ಅನುಪಮಾ ನೃತ್ಯ ಹೇಳಿಕೊಟ್ಟರು. ಪ್ರಶಾಂತ್ ವಿಭಿನ್ನ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು. ಆರ್ಯವರ್ಧನ್, ರಾಕೇಶ್ ಎಲ್ಲರಿಗೂ ಅನುಪಮಾ ಡಾನ್ಸ್ ಹೇಳಿಕೊಟ್ಟಿದ್ದಾರೆ. ಸದ್ಯ ರಿಲೀಸ್ ಆಗಿರುವ ಪ್ರೋಮೋ ಇಂದಿನ ಸಂಚಿಕೆಯ ಕುತೂಹಲ ಹೆಚ್ಚಿಸಿದೆ. 

ಬಿಗ್ ಬಾಸ್ ಪ್ರೋಮೋಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. ಪ್ರಶಾಂತ್ ಲುಕ್‌ಗೆ ನಟ್ಟಿಗರು ಯಾರೆ ನೀನು ಚೆಲವೆ ಎಂದು ಹೇಳುತ್ತಿದ್ದಾರೆ. ಫ್ರಾಕ್ ಧರಿಸಿರುವ ಪ್ರಶಾಂತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

BBK9 ಮೂತಿ ತಿರುಗಿಸಿಕೊಂಡು ಹೋಗ್ತಿದ್ದ ದೀಪಿಕಾ ದಾಸ್ ಈಗ ಮೈ ಮೇಲೆ ಬಿದ್ದು ಮಾತನಾಡಿಸ್ತಿದ್ದಾರಾ?

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

BBK9 ನಮ್ಮುಂದೆ ಶೋ ಆಫ್‌ ಹೆಂಡ್ತಿ ಮುಂದೆ ಮೀಟ್ರು ಆಫ್; ಆರ್ಯವರ್ಧನ್‌ಗೆ ಹೆಂಡ್ತಿ ಅಂದ್ರೆ ಭಯ?

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. 7ನೇ ವಾರ ಎಲಿಮಿನೇಷನ್ ಇರದ ಕಾರಣ ಯಾರ ಮನೆಯಿಂದ ಹೊರಹೋಗಿಲ್ಲ. 8ನೇ ವಾರ ದೀಪಿಕಾ ದಾಸ್ ಮನೆಯಿಂದ ಹೊರಹೋಗಿದ್ದರು ಆದರೆ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. 9ನೇ ವಾರ ವಿನೋದ್ ಗೊಬ್ಬರಗಾಲ ಔಟ್ ಆಗಿದ್ದಾರೆ.  10ನೇ ಕಾವ್ಯಾ ಗೌಡ ಮನೆಯಿಂದ ಹೊರನಡೆದರು. 11ನೇ ವಾರ ಯಾರು ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 10 ಮಂದಿ ಇದ್ದಾರೆ.

Latest Videos
Follow Us:
Download App:
  • android
  • ios