ಪ್ರಕಾಶ್ ರಾಜ್ ಕುಂಭಮೇಳದಲ್ಲಿ ತೀರ್ಥಸ್ನಾನ ಮಾಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಈ ಚಿತ್ರವು AI ನಿರ್ಮಿತ ನಕಲಿ ಚಿತ್ರವಾಗಿದ್ದು, ಇಂತಹ AI ಚಿತ್ರಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂಬುದನ್ನು ತೋರಿಸುತ್ತದೆ.
ಬೆಂಗಳೂರು (ಜ.27): ಸದಾಕಾಲ ಕೇಂದ್ರ ಸರ್ಕಾರ, ನರೇಂದ್ರ ಮೋದಿ ಹಾಗೂ ಹಿಂದೂ ಧಾರ್ಮಿಕ ಪದ್ಧತಿಗಳನ್ನು ಟೀಕೆ ಮಾಡುತ್ತಲೇ ಇರುವ ಪ್ರಕಾಶ್ ರಾಜ್ ಬಗ್ಗೆ ಬಲ ಪಂಥೀಯರು ಟ್ರೋಲ್ ಮಾಡುವುದು ಹೊಸದೇನಲ್ಲ. ಪ್ರಕಾಶ್ ರಾಜ್ ಹೇಳುವ ಪ್ರತಿಯೊಂದು ಹೊಸ ವಿಚಾರವೂ ಚರ್ಚೆಗೆ ಗ್ರಾಸವಾಗುತ್ತದೆ. ಅದಲ್ಲೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುತ್ತದೆ. ಈಗ ಪ್ರಕಾಶ್ ರಾಜ್ ಅವರ ಇಮೇಜ್‌ವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತದೆ. ಆದರೆ, ಈ ಚಿತ್ರದ ಬಗ್ಗೆ ಹೇಳುವ ಮುನ್ನ ಇದು ಎಐ ಇಮೇಜ್ ಎನ್ನುವ ಸ್ಪಷ್ಟೀಕರಣ ನೀಡುತ್ತಿದ್ದೇವೆ. ಪ್ರಕಾಶ್ ರಾಜ್ ಅವರ ಕಾನೂನು ತಂಡ ಕೂಡ ಇದನ್ನು ಗ್ರಾಫಿಕ್ಸ್ ಎಂದು ಕರೆದಿದೆ. ಆದರೆ, ಇದು ಗ್ರಾಫಿಕ್ಸ್ ಅಲ್ಲ. ಎಐ ಮೂಲಕ ಸೃಷ್ಟಿ ಮಾಡಿರುವ ಕೃತಕ ಇಮೇಜ್.
ಪ್ರಯಾಗ್‌ರಾಜ್‌ನಲ್ಲು ಅದ್ದೂರಿಯಾಗಿ ಮಹಾ ಕುಂಭಮೇಳ ನಡೆಯುತ್ತಿದೆ. ಈ ವೇಳೆ ಮಹಾಕುಂಭಮೇಳದ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪ್ರಕಾಶ್ ರಾಜ್ ತೀರ್ಥ ಸ್ನಾನ ಮಾಡಿದಂತೆ ಇಮೇಜ್ ಸೃಷ್ಟಿ ಮಾಡಲಾಗಿದೆ. ಸಂಗಮದಲ್ಲಿ ಇಳಿದು ತೀರ್ಥಸ್ನಾನ ಮಾಡಿ ಕೈಮುಗಿಯುತ್ತಿರುವ ಒಂದೇ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.
ಹೆಚ್ಚಿನವರು ಇದನ್ನೇ ನಿಜ ಎನ್ನುವಂತೆ ಪ್ರಕಾಶ್ ರಾಜ್‌ಗೆ ಈಗಲಾದರೂ ಬುದ್ದಿಬಂತಲ್ಲ ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು ಎಐ ಇಮೇಜ್ ಅನ್ನೋದು ಗೊತ್ತಿದ್ದರೂ, ಪ್ರಕಾಶ್ ರಾಜ್ ಅವರ ಕಾನೂನು ತಂಡಕ್ಕೆ ಈ ಚಿತ್ರವನ್ನು ಕಳಿಸಿ ಇದು ಎಐ ಇಮೇಜ್ ಅಥವಾ ನಿಜವಾದ ಇಮೇಜ್ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಅವರು 'ಸುಳ್ಳು ಗ್ರಾಫಿಕ್ಸ್' ಎಂದು ಉತ್ತರ ನೀಡಿದ್ದಾರೆ.
ಮಕ್ಕಳ ಉಸಿರುಗಡ್ತಾ ಇದೆ, ಮಾತನಾಡ್ತಾ ಇಲ್ಲ, 10 ವರ್ಷದಲ್ಲಿ ಏನಾಗತ್ತೆ? ಪ್ರಕಾಶ್ ರಾಜ್ ನೋವಿನ ನುಡಿ...
ಎಐಗಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು, ಅದರಿಂದ ಮುಂದಾಗುವ ಅಪಾಯಗಳ ಬಗ್ಗೆ ಇದು ಸಣ್ಣ ಸೂಚನೆಯಷ್ಟೇ. ಪ್ರಯಾಗ್ ರಾಜ್ ಕುಂಭಮೇಳದ ಸಂದರ್ಭದಲ್ಲಿ ಹಲವಾರು ಎಐ ಇಮೇಜ್‌ಗಳು ಸೃಷ್ಟಿಯಾಗಿವೆ. ಟೀಮ್ ಇಂಡಿಯಾ ಆಟಗಾರರು ಕುಂಭಮೇಳದಲ್ಲಿ ಭಾಗವಹಿಸಿದಂತೆ, ಇತರ ಸ್ಟಾರ್‌ಗಳು ಕುಂಭಮೇಳಕ್ಕೆ ಬಂದಂತೆ ಪೋಸ್ಟ್‌ಗಳನ್ನು ಹರಿಬಿಡಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇಂಥ ಇಮೇಜ್‌ಗಳನ್ನು ಹಂಚಿಕೊಳ್ಳುವಾಗ ಆದಷ್ಟು ಎಚ್ಚರಿಕೆ ಅನಿವಾರ್ಯ.
ಎನಿಮಿ ಫಿಲಂ ನಿರ್ಮಾಪಕರಿಗೆ ಸೆಟ್‌ನಲ್ಲಿ 1 ಕೋಟಿ ನಷ್ಟ ಉಂಟುಮಾಡಿದ್ರಾ ಪ್ರಕಾಶ್ ರೈ?
