ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು... ಅಂತ ಸುಮ್ನೆ ಹೇಳೋದಾ ಹಿರಿಯರು?
ಮಕ್ಕಳಾಗುವಂತೆ ವ್ರತ ಮಾಡುತ್ತಿದ್ದ ಪೂರ್ಣಿಯ ವ್ರತ ಭಂಗ ಮಾಡಿದ್ದಾಳೆ ದೀಪಿಕಾ. ಅವಳಿಗೆ ಸರಿಯಾದ ಬುದ್ಧಿ ಕಲಿಸಿದ್ದಾಳೆ ಪೂರ್ಣಿ. ಏನಿದು ವಿಷಯ?
ಸಹನೆಗೂ ಒಂದು ಮಿತಿ ಎನ್ನುವುದು ಇರುತ್ತದೆ. ಸಹನೆ ಇದೆ ಎಂದ ಮಾತ್ರಕ್ಕೆ ಅದನ್ನೇ ಪ್ರತಿಬಾರಿಯೂ ದುರುಪಯೋಗ ಮಾಡಿಕೊಳ್ಳುವವರನ್ನು ಸುಮ್ಮನೇ ಬಿಟ್ಟರೆ ಅದು ನಮಗೆ ನಾವು ಅನ್ಯಾಯ ಮಾಡಿಕೊಂಡಂತೆ. ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಒಳ್ಳೆಯ ಮಾತಿನಲ್ಲಿ ಅರ್ಥವಾಗದಿದ್ದವನಿಗೆ ಅವನ ಭಾಷೆಯಲ್ಲಿಯೇ ತಿಳಿಹೇಳಬೇಕು ಎಂಬೆಲ್ಲಾ ಮಾತುಗಳು ಬಂದಿರುವುದು ಇದೇ ಕಾರಣಕ್ಕೆ ಅಲ್ವಾ? ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿಯೂ ಇದೇ ರೀತಿ ಆಗಿದೆ.
ಇಲ್ಲಿ ಪೂರ್ಣಿ ಸಹನೆ, ಒಳ್ಳೆತನದ ಪ್ರತೀಕವಾಗಿದ್ದಾರೆ. ಒಂದರ್ಥದಲ್ಲಿ ನಾಯಕಿ ತುಳಸಿಯ ರೀತಿಯಲ್ಲ. ಎಲ್ಲವನ್ನೂ ಸಹಿಸಿಕೊಳ್ಳುವ ಗುಣ. ಅದೇ ಇನ್ನೊಂದೆಡೆ ಮತ್ತೋರ್ವ ಸೊಸೆ ದೀಪಿಕಾ ತದ್ವಿರುದ್ಧ. ಅಪ್ಪನ ಬುದ್ಧಿಯೇ ಅವಳಿಗೆ ಬಂದಿದೆ. ಪೂರ್ಣಿ ಅನಾಥೆಯೆನ್ನುವ ಕಾರಣಕ್ಕೆ ಆಕೆಯನ್ನು ಕಂಡರೆ ದೀಪಿಕಾಗೆ ಆಗುವುದಿಲ್ಲ. ಸದಾ ಒಂದಿಲ್ಲೊಂದು ಮಸಲತ್ತು ಮಾಡುತ್ತಲೇ ಇರುತ್ತಾಳೆ. ಸಾಲದು ಎನ್ನುವುದಕ್ಕೆ ಅತ್ತೆ ಶಾರ್ವರಿ ಸಾಥ್ ಬೇರೆ. ಶಾರ್ವರಿ ಮತ್ತು ದೀಪಿಕಾರ ಕುತಂತ್ರದಿಂದಾಗಿ ಪೂರ್ಣಿ ಗರ್ಭ ಧರಿಸಲು ಸಾಧ್ಯವಾಗುತ್ತಿಲ್ಲ. ವೈದ್ಯರು ಆಕೆಗೆ ಮಗು ಹುಟ್ಟಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಆದರೆ ಈ ವಿಷಯ ಪೂರ್ಣಿಗೆ ತಿಳಿದಿಲ್ಲ. ದೀಪಿಕಾಗೆ ವಿಷಯ ಗೊತ್ತಾಗಿದೆ. ಅವಳು ಇದನ್ನೇ ಪರೋಕ್ಷವಾಗಿ ಪೂರ್ಣಿ ಎದುರು ತಿವಿಯುತ್ತಲೇ ಇರುತ್ತಾಳೆ.
ನಿವೇದಿತಾ ಹಾಟ್ ರೀಲ್ಸ್ ನೋಡಿ ತೋರಿಸೋದು ಜಾಸ್ತಿಯಾಗ್ತಿದೆ, ಕತ್ತರಿ ಹಾಕಿಸಿಕೊಂಡ್ಯಾ ಅನ್ನೋದಾ ಫ್ಯಾನ್ಸ್!
ಅದೇ ಇನ್ನೊಂದೆಡೆ ಮಗು ಆಗಲಿ ಎನ್ನುವ ಕಾರಣಕ್ಕೆ ಪೂರ್ಣಿ ವ್ರತ ಕೈಗೊಂಡಿದ್ದಾಳೆ. ಇದಕ್ಕೆ ವಿಷಯ ತಿಳಿದಿದ್ದರೂ ಪತಿ ಅಭಿ ಸಾಥ್ ನೀಡಿದ್ದಾನೆ. ಇನ್ನೇನು ಕೊನೆಯ ದಿನ. ವ್ರತ ಭಂಗ ಆಗಬಾರದು ಎಂದು ಪೂರ್ಣಿ ಪೂಜೆಯಲ್ಲಿ ಕುಳಿತಿದ್ದರೆ, ಅದನ್ನು ತಪ್ಪಿಸುವುದಕ್ಕಾಗಿ ದೀಪಿಕಾ ಪ್ಲ್ಯಾನ್ ಮಾಡಿದ್ದಾಳೆ. ಪೂಜೆಗೆ ಕುಳಿತ ಪೂರ್ಣಿಗೆ ಕೇಳಿಸುವಂತೆ ಅಭಿಗೆ ಅಪಘಾತ ಆಯ್ತಾ ಎಂದು ಫೋನ್ನಲ್ಲಿ ಮಾತನಾಡಿದ್ದಾಳೆ. ಇದನ್ನು ಕೇಳಿ ಪೂರ್ಣಿ ಪೂಜೆ ಬಿಟ್ಟು ಗಾಬರಿಯಿಂದ ಓಡಿ ಬಂದಿದ್ದಾಳೆ. ಆದರೆ ದೀಪಿಕಾ ಜೋರಾಗಿ ನಕ್ಕು ನಿನ್ನ ವ್ರತ ಭಂಗ ಮಾಡಲು ಹೀಗೆ ಮಾಡಿದೆ ಎಂದಿದ್ದಾಳೆ. ಇನ್ನು ಪೂರ್ಣಿಗೆ ಸಿಟ್ಟು ತಡೆಯಲು ಸಾಧ್ಯವಾಗಲಿಲ್ಲ. ಮೊದಲು ಹೊಡೆಯಲು ಕೈ ಎತ್ತಿದ್ದಾಳೆ. ನಂತರ ದೀಪಿಕಾಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಇನ್ನು ನನ್ನ ಸಹವಾಸಕ್ಕೆ ಬರಬೇಡ ಎಂದು ವಾರ್ನ್ ಮಾಡಿದ್ದಾಳೆ.
ಪೂರ್ಣಿಯಲ್ಲಿ ಆಗಿರುವ ಈ ಬದಲಾವಣೆ ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು, ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆ ಪೆಟ್ಟು ಎನ್ನುತ್ತಿದ್ದಾರೆ. ಅಷ್ಟಕ್ಕೂ ಇಲ್ಲಿಯವರೆಗಿನ ಸೀರಿಯಲ್ ನೋಡಿದರೆ, ವಿಲನ್ ದೀಪಿಕಾ ಅನಾಥೆ ಇರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಏಕೆಂದರೆ ಪೂರ್ಣಿ ಶ್ರೀಮಂತರ ಮನೆಯ ಹೆಣ್ಣುಮಗಳು ಎನ್ನುವ ಸತ್ಯ ಗೊತ್ತಾಗಿದೆ. ಅದು ದೀಪಿಕಾಳ ಈಗಿನ ಅಪ್ಪನಿಗೆ ಪೂರ್ಣಿ ಅಕ್ರಮವಾಗಿ ಹುಟ್ಟಿರುವ ಮಗು ಇದ್ದಿರಬಹುದು, ಖಂಡಿತವಾಗಿಯೂ ಪೂರ್ಣಿ ಇದೇ ಶ್ರೀಮಂತರ ಮನೆಯ ಮಗಳು ಎನ್ನುತ್ತಿದ್ದಾರೆ. ಇನ್ನು ಕೆಲವರು, ಪೂರ್ಣಿ, ದೀಪಿಕಾ ಅಪ್ಪನಿಗೆ ಹುಟ್ಟಿದ ಮಗು, ಆ ಮೇಲೆ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ದೀಪಿಕಾಳನ್ನು ಅನಾಥಾಶ್ರಮದಿಂದ ತಂದಿರಬಹುದು ಎಂದೂ ಹೇಳುತ್ತಿದ್ದಾರೆ.
ಪ್ರತಿ ಹೆಣ್ಣಲ್ಲೂ ಅದ್ಭುತ ಶಕ್ತಿ ಇದೆ, ಅದನ್ನು ಮೀರಿಸೋರು ಯಾರೂ ಇಲ್ಲ... ಬಾಬಾ ಮಾತಿನಲ್ಲಿ ಅದೆಂಥ ಮರ್ಮ!