ನಿವೇದಿತಾ ಹಾಟ್​ ರೀಲ್ಸ್​ ನೋಡಿ ತೋರಿಸೋದು ಜಾಸ್ತಿಯಾಗ್ತಿದೆ, ಕತ್ತರಿ ಹಾಕಿಸಿಕೊಂಡ್ಯಾ ಅನ್ನೋದಾ ಫ್ಯಾನ್ಸ್​!

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಹೊಸ ರೀಲ್ಸ್‌ ಮಾಡಿದ್ರೆ, ಅಭಿಮಾನಿಗಳು ಹೀಗೆಲ್ಲಾ ಹೇಳೋದಾ? 
 

Nivedita Gowda of Bigg Boss fame made new reels Fans react about short dress fans

ಇತ್ತೀಚಿಗೆ ಹೆಚ್ಚಿನ  ಹುಡುಗಿಯರು ಫ್ಯಾಷನ್​ ಹೆಸರಿನಲ್ಲಿ ಹೆಚ್ಚಾಗಿ ಷಾರ್ಟ್ಸ್​, ಮಿನಿ ಸ್ಕರ್ಟ್​ ಅನ್ನೇ ಹೆಚ್ಚು ಇಷ್ಟಪಡುತ್ತಾರೆ. ಸೈಡ್‌ ಸ್ಲಿಟ್‌ ಡ್ರೆಸ್‌ ಹಾಕಿಕೊಂಡು ತೊಡೆ ತೋರಿಸುವುದು ಇಂದು ಮಾಮೂಲಾಗಿಬಿಟ್ಟಿದೆ. ಅದರಲ್ಲಿಯೂ ಸಿನಿಮಾ ತಾರೆಯರನ್ನು ನೋಡಿ ಧಾರಾಳ ದೇಹ ಪ್ರದರ್ಶನ ಮಾಡುವುದು ಎಂದರೂ ಹಲವರಿಗೆ ಇನ್ನಿಲ್ಲದ ಖುಷಿ. ಈ ರೀತಿಯ ಬಟ್ಟೆ ಧರಿಸಿದರೆ ತಾವೂ ಸೆಲೆಬ್ರಿಟಿ ಎನಿಸುತ್ತದೆಯೋ ಏನೋ, ಒಟ್ಟಿನಲ್ಲಿ ಬಟ್ಟೆಯ ವಿಷಯದಲ್ಲಿ ಹಲವು ಹುಡುಗಿಯರು ಎಲ್ಲಾ ಮಿತಿಗಳನ್ನೂ ಮೀರುತ್ತಿದ್ದಾರೆ. ಇದು ಸಾಮಾನ್ಯ ಜನರ ಮಾತಾದರೆ ಇನ್ನು ನಟಿಯರ ವಿಷಯ ಹೇಳುವುದೇ ಬೇಡ ಬಿಡಿ. ಕೆಲವರಿಗೆ ಇಂಥ ಬಟ್ಟೆಗಳು ಯಾವುದೇ ರೀತಿಯಲ್ಲಿ ಅಸಹ್ಯ ಎನಿಸದಿದ್ದರೂ, ಕೆಲವರು ಇಂಥ ಬಟ್ಟೆ ಧರಿಸಿದಾಗ ವಾಕರಿಕೆ ಬರುವುದೂ ಉಂಟು. ಆದರೆ ಬಿಗ್​ಬಾಸ್ ಖ್ಯಾತಿಯ ನಟಿ ನಿವೇದಿತಾ ಯಾವುದೇ ರೀತಿಯ ತುಂಡುಡುಗೆ ಹಾಕಿದರೂ ಆಕೆಗೆ ಒಪ್ಪುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಇತ್ತೀಚೆಗೆ ನಿವೇದಿತಾ ಗೌಡ ಹೆಚ್ಚಾಗಿ ಷಾರ್ಟ್ಸ್​ ಧರಿಸಿ ರೀಲ್ಸ್​ ಮಾಡುತ್ತಾರೆ. ಇದೀಗ ದೇಹ ಪ್ರದರ್ಶನ ಮಾಡಿಕೊಂಡು ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್ಸ್​ ಬರುತ್ತಿದ್ದು ನಟಿ ಟ್ರೋಲ್​ಗೂ ಒಳಗಾಗಿದ್ದಾರೆ. 

ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಬಾಲಿವುಡ್​ ಖಳನಾಯಕ್​-2 ಚಿತ್ರದಲ್ಲಿ ನಟ ಯಶ್​? ನಿರ್ದೇಶಕ ಸುಭಾಷ್​ ಘಾಯ್​ ಹೇಳಿದ್ದೇನು?

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.   ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇದೀಗ ನಟಿ ವೈನಿಧಿ ಹಾಡಿಗೆ  ರೀಲ್ಸ್‌ ಮಾಡಿದ್ದಾರೆ. ಮಿನಿ ಸ್ಕರ್ಟ್​ ಧರಿಸಿ,  ಸೊಂಟ ಬಳಕಿಸುತ್ತಾ ರೀಲ್ಸ್‌ ಮಾಡುತ್ತಿದ್ದಾರೆ. ಆದರೆ ಮೊದಲಿಗಿಂತಲೂ ಸ್ವಲ್ಪ ಹೆಚ್ಚೇ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಯಾಕೋ ಬರ್ತಾ ಬರ್ತಾ ಡ್ರೆಸ್​ ಚಿಕ್ಕದಾಗ್ತಿದೆ, ತೋರಿಸೋದು ಜಾಸ್ತಿಯಾಗ್ತಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಆಪರೇಷನ್​ ಏನಾದ್ರೂ ಮಾಡಿಸಿಕೊಂಡ್ರಾ ಎಂದೂ ಕೇಳುತ್ತಿದ್ದಾರೆ. ಕೆಲವು ನಟಿಯರು ದೇಹದ ಗಾತ್ರ ದೊಡ್ಡದಾಗಿ ಕಾಣಿಸಲು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋಗುವುದು ಇದೆ. ಅದನ್ನೇ ಇಟ್ಟುಕೊಂಡು ನಿವೇದಿತಾಗೂ ಅದನ್ನೇ ಕೇಳುತ್ತಿದ್ದಾರೆ ನೆಟ್ಟಿಗರು. ಇನ್ನು ಕೆಲವರು ನಿವೇದಿತಾ ಪತಿ ಚಂದನ್​ ಶೆಟ್ಟಿಯವರನ್ನು ಅಯ್ಯೋ ಪಾಪ ಎನ್ನುತ್ತಿದ್ದರೆ, ಮತ್ತೆ ಕೆಲವರು ಮಗು ಮಾಡ್ಕೊ, ಸಾಕು ಈ ಹುಡುಗಾಟ ಎನ್ನುತ್ತಿದ್ದಾರೆ. ಯಾರು ಏನೇ ಕಮೆಂಟ್​ ಮಾಡಿದ್ರೂ ನಿವೇದಿತಾ ಮಾತ್ರ ಡೋಂಟ್​ ಕೇರ್​ ಎನ್ನುತ್ತಲೇ ಇರುತ್ತಾರೆ ಬಿಡಿ. 

ಪ್ರಧಾನಿ ವಿರುದ್ಧ ಅಪಪ್ರಚಾರಕ್ಕೆ ನಟರ ಹೆಸರು ದುರ್ಬಳಕೆ! ಆಮೀರ್​ ಬಳಿಕ ರಣವೀರ್​ ಸಿಂಗ್​ ಎಫ್​ಐಆರ್​

Latest Videos
Follow Us:
Download App:
  • android
  • ios