ಖ್ಯಾತ ಭಾಷಣಕಾರ್ತಿ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ 12 ವರ್ಷಗಳ ಗೆಳೆಯ ಶ್ರೀಕಾಂತ್ ಕಶ್ಯಪ್‌ರನ್ನು ವರಿಸಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಸೀರೆಯಲ್ಲೇ ಮಿಂಚಿದ್ದ ಚೈತ್ರಾ, ಸಾಂಪ್ರದಾಯಿಕವಾಗಿ ಕುಂದಾಪುರದಲ್ಲಿ ವಿವಾಹವಾಗಿದ್ದಾರೆ. ರಜತ್‌ ಅಣ್ಣನ ಶಾಸ್ತ್ರ ಮಾಡಿ ಉಡುಗೊರೆ ನೀಡಿದರು. ಚೈತ್ರಾ ತಮ್ಮ ಪ್ರೀತಿಯ ಕಥೆಯನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಎಂದೇ ಫೇಮಸ್​ ಆಗಿರೋ ಚೈತ್ರಾ ಕುಂದಾಪುರ ಬಿಗ್​ಬಾಸ್​​ ಮನೆಯಲ್ಲಿ 105 ದಿನಗಳ ಪ್ರಯಾಣ ಮುಗಿಸಿ ಹೊರಕ್ಕೆ ಬಂದವರು. ಬಂದ ಮೇಲೆ ಮಾಮೂಲಿನಂತೆ ಭಾರಿ ಸೆಲೆಬ್ರಿಟಿ ಆಗಿದ್ದಾರೆ. ಚೈತ್ರಾ ಕುಂದಾಪುರ ಮೊದಲೇ ಗುರುತಿಸಿಕೊಂಡಿದ್ದರಿಂದ ಬಿಗ್​ಬಾಸ್​ ಮನೆಯಲ್ಲಿ ಮತ್ತೊಂದಿಷ್ಟು ಕಾಂಟ್ರವರ್ಸಿಗಳಾಗಿ ಈಗ ಮತ್ತೆ ಫೇಮಸ್​ ಆಗಿದ್ದಾರೆ. ಇವರು ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ ಕುಂದಾಪುರ ಬಿಗ್​ಬಾಸ್​​ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಕೆಲವೊಮ್ಮೆ ಬಿಗ್​ಬಾಸ್​​ನಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದರೂ ಅದನ್ನು ತಾವು ಕೇಳಲಿಲ್ಲ. ನನಗೆ ಮೈತುಂಬಾ ಬಟ್ಟೆ ಹಾಕುವುದೇ ಕನ್​ಫರ್ಟ್​ ಎನ್ನಿಸುತ್ತದೆ. ಅದಕ್ಕಾಗಿ ನಾನು ಯಾರೋ ಹೇಳಿದರು ಎಂದು ನನ್ನತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದರು.

ಇಂತಿಪ್ಪ ಚೈತ್ರಾ ಈಗ 12 ವರ್ಷಗಳ ಗೆಳೆಯನ ಜೊತೆ ಮದುವೆಯಾಗಿದ್ದಾರೆ. ಅಷ್ಟಕ್ಕೂ ಅವರು ತಮ್ಮ ಈ ಲವ್​ ಸ್ಟೋರಿಯನ್ನು ಗುಟ್ಟಾಗಿಯೇ ಇಟ್ಟಿದ್ದರು. ಆದರೆ, ಶ್ರೀಕಾಂತ್ ಕಶ್ಯಪ್​​ ಅವರೇ ಇವರ ಭಾವಿ ಪತಿ ಎನ್ನುವ ಗುಮಾನಿ ಕೆಲವರಿಗೆ ಮೊದಲಿನಿಂದಲೂ ಇತ್ತು. ಅಷ್ಟಕ್ಕೂ ಈ ಸೂಚನೆಯನ್ನು ಅವರು ಮೊದಲೇ ಬಿಟ್ಟುಕೊಟ್ಟಿದ್ದರು. ನಿರಿಕ್​ ಯುಟ್ಯೂಬ್​ ಚಾನೆಲ್​ ಜೊತೆ ಮಾತನಾಡುವ ಸಮಯದಲ್ಲಿ ಈ ವಿಷಯವನ್ನು ಅವರು ಹೇಳಿದ್ದರು. ತಮ್ಮ ಭಾವಿ ಪತಿ ಹೇಗೆ ಇರಬೇಕು ಎನ್ನುವ ಬಗ್ಗೆ ಚೈತ್ರಾ ಕುಂದಾಪುರ ಮಾತನಾಡಿದ್ದರು. ಸಿಲ್ಕಿ ಹೇರ್​ ಇರಬೇಕು, ಉದ್ದ ಕೂದಲು ಬೇಕು, ಅಷ್ಟು ಶಿಖೆ ಕಟ್ಟುವಷ್ಟು ಉದ್ದ ಇರಬೇಕು, ಕೂದಲು ಸ್ಟ್ರೇಟ್​ ಆಗಿರಬೇಕು ಎಂದಿದ್ದರು. ಇನ್ನು ಹಣೆ ಅಗಲ ಬೇಕು, ಹಣೆಯಲ್ಲಿ ವಿಭೂತಿ, ಕುಂಕುಮ ಇಟ್ಟಿರಬೇಕು. ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಇರಬೇಕು ಎಂದು ಚೈತ್ರಾ ಹೇಳಿದ್ದರು. ಭಾವಿ ಪತಿಯ ಮುಖ ಗೋಲು ಆಗಿರಬೇಕು. ಚಿಕ್ಕ ಕಣ್ಣು, ಚಿಕ್ಕ ಕಿವಿ ಇರಬೇಕು, ಹುಬ್ಬು ದಪ್ಪ ಇರಬೇಕು ಎಂದಿದ್ದರು. ಸಾಧುಗಳ ರೀತಿ ಗಡ್ಡ ಇರಬೇಕು ಎಂದಿದ್ದರು. ಆಗಲೇ ಕೆಲವರಿಗೆ ಇದು ಶ್ರೀಕಾಂತ್​ ಅವರದ್ದೇ ವರ್ಣನೆ ಎಂದು ತಿಳಿದಿತ್ತು.

ಅರೆಬರೆ ಡ್ರೆಸ್​ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್​: ಶ್ಲಾಘನೆಗಳ ಮಹಾಪೂರ

ಆದರೆ, ಈ ಲವ್​ ಸ್ಟೋರಿ ಬಗ್ಗೆ ಹೇಳಿ ಎಂದರೆ ಚೈತ್ರಾ ನುಣುಚಿಕೊಂಡಿದ್ದಾರೆ. 12 ವರ್ಷಗಳ ಲವ್​ ಸ್ಟೋರಿ ಬಗ್ಗೆ ಮದುವೆಯ ಬಳಿಕ ಕೇಳಿದಾಗ ಚೈತ್ರಾ ಅವರು, ಅಯ್ಯೋ, ಅದಕ್ಕೆಲ್ಲಾ ಟೈಮ್​ ಇಲ್ಲ. ಅದರ ಬಗ್ಗೆ ಕೇಳಬೇಡಿ. ನಮ್ಮ ಮದುವೆಗೆ ಬಂದಿದ್ದರೆ ಥ್ಯಾಂಕ್ಸ್​ ಅಂದುಬಿಟ್ಟಿದ್ದಾರೆ. 12 ವರ್ಷ ಗುಟ್ಟಾಗಿಯೇ ನಮ್ಮ ಲವ್​ ಇತ್ತು. ಮದುವೆಯನ್ನೂ ಸಿಂಪಲ್​ ಆಗಿಯೇ ಮಾಡಿಕೊಳ್ಳೋಣ ಅಂದುಕೊಂಡಿದ್ವಿ. ಆದರೆ ಅದು ಎಲ್ಲರಿಗೂ ತಿಳಿದು ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು ಎಂದಿದ್ದಾರೆ. ಆದರೆ ಲವ್​ ಸ್ಟೋರಿಯ ಬಗ್ಗೆ ಮಾತ್ರ ತುಟಿ ಪಿಟಿಕ್​ ಎನ್ನಲಿಲ್ಲ. ಶ್ರೀಕಾಂತ್​ ಅವರು ಕೂಡ ಈಗ ಅದಕ್ಕೆಲ್ಲಾ ಟೈಂ ಇಲ್ಲ ಬಿಡಿ ಎಂದು ಹೇಳುವ ಮೂಲಕ ನುಣುಚಿಕೊಂಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ದಂಪತಿ ಹಾರಿಕೆ ಉತ್ತರ ಕೊಟ್ಟು, ತಮ್ಮ ಪ್ರೀತಿ ಹುಟ್ಟಿದ್ದನ್ನು ಬಿಟ್ಟುಕೊಟ್ಟಿಲ್ಲ!


ಅಂದಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಸಿಕ್ಕಾಪಟ್ಟೆ ಜಗಳ ಆಡಿದ್ದ ರಜತ್‌, ಚೈತ್ರಾ ಕುಂದಾಪುರ ಜುಗಲ್‌ಬಂಧಿ ನೋಡೋದೆ ಚೆಂದ ಆಗಿತ್ತು. ಈಗ ಅವರು ಚೈತ್ರಾ ಮದುವೆಗೆ ಬಂದು ಅಣ್ಣನ ಶಾಸ್ತ್ರವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂಗಿಗೆ ಉಡುಗೊರೆ ಕೂಡ ನೀಡಿದ್ದಾರೆ. ನಿಜಕ್ಕೂ ಇದು ಬಹಳ ಅಪರೂಪದ ಗಳಿಗೆಯಾಗಿತ್ತು. ಅಂದಹಾಗೆ ಕುಂದಾಪುರದಲ್ಲಿ ಮದುವೆ ಆಗಿದೆ. ಸಾಂಪ್ರದಾಯಿಕವಾಗಿ ಇವರಿಬ್ಬರು ಪ್ರಿ ವೆಡ್ಡಿಂಗ್‌ ವಿಡಿಯೋ ಮಾಡಿಸಿಕೊಂಡಿದ್ದಾರೆ. ಶ್ರೀಕಾಂತ್‌ ಕಶ್ಯಪ್‌ ಅವರು ದೈವಭಕ್ತರು. ಇನ್ನು ಸಾಕಷ್ಟು ಹೋಮ-ಹವನಗಳಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ವಿಡಿಯೋ ಎಡಿಟರ್‌ ಆಗಿದ್ದ ಅವರು ಹವ್ಯಾಸಿ ಖಗೋಳಶಾಸ್ತ್ರಜ್ಞ ಎಂದು ಕೂಡ ಹೇಳಲಾಗಿದೆ. ಶ್ರೀಕಾಂತ್‌ ಬಗ್ಗೆ ಚೈತ್ರಾ ಅವರೇ ಇನ್ನಷ್ಟು ಮಾಹಿತಿ ನೀಡಬೇಕಿದೆ. ಕಿಚ್ಚ ಸುದೀಪ್‌ ಅವರು ಚೈತ್ರಾರ ಗುಣ ನೋಡಿ ದೊಡ್ಮನೆಯ ಫಿನಾಲೆಯಲ್ಲಿ “ಯಾವಾಗಲೂ ದೇವರು ಅಂತ ಹೇಳ್ತೀರಾ. ದೈವಭಕ್ತರನ್ನು ಮದುವೆ ಆಗಿ” ಎಂದು ಹೇಳಿದ್ದರು. ಚೈತ್ರಾ ಲವ್‌ ಬಗ್ಗೆ ಗೊತ್ತಿದ್ದು ಈ ಮಾತು ಹೇಳಿದ್ರೋ ಅಥವಾ ಗೊತ್ತಿಲ್ಲದೆ ಹೇಳಿದ್ರೋ ಗೊತ್ತಿಲ್ಲ. ಆದರೀಗ ಇದು ನಿಜವಾಗಿದೆ. 

ರಾ...ರಾ... ಎಂದ ಚೈತ್ರಾ... ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್​- ಇನ್ನೊಂದೆರಡು ಕಣ್ಣು ಕೊಡಪ್ಪಾ ಅಂತಿರೋ ಫ್ಯಾನ್ಸ್​.