ಗಟ್ಟಿಮೇಳದ ಅದಿತಿ ಮತ್ತು ಪಾರುವಿನ ಪ್ರೀತು ಪಾತ್ರಧಾರಿಗಳಾದ ಪ್ರಿಯಾ ಜೆ.ಆಚಾರ್ ಮತ್ತು ಸಿದ್ದು ಮೂಲಿಮನಿ 2023ರಲ್ಲಿ ವಿವಾಹವಾದರು. ಇತ್ತೀಚೆಗೆ ಸಿದ್ದು, ತಾವು ಚಿತ್ರರಂಗದಲ್ಲಿ ಹಿನ್ನೆಲೆಯಿಲ್ಲದೆ ಬಂದು, ಕಷ್ಟಪಟ್ಟು ಬೆಳೆದು, ಈಗ ದಿನಕ್ಕೆ 35 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ರಂಗಿತರಂಗ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ನಟನಾಗಿ ಕೆಲಸ ಮಾಡಿದ್ದಾರೆ. ಈ ವಿಷಯವನ್ನು ಅವರು ಆಫೀಷಿಯಲ್‌ ಬ್ರೋಕ್‌ ಬ್ರದರ್ಸ್‌ ಚಾನೆಲ್‌ಗೆ ತಿಳಿಸಿದ್ದಾರೆ.

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಗಟ್ಟಿಮೇಳ (Gattimela) ಮತ್ತು ಪಾರು (Paaru) ಸೀರಿಯಲ್​ಗಳು ಮುಗಿದು ವರ್ಷ ಆಗ್ತಾ ಬಂದರೂ ಸೀರಿಯಲ್​ ಪ್ರೇಮಿಗಳು ಈ ಧಾರಾವಾಹಿಗಳನ್ನು ಇನ್ನೂ ಮರೆತಿಲ್ಲ. ಗಟ್ಟಿಮೇಳ ಧಾರಾವಾಹಿಯ ಅದಿತಿ ಪಾತ್ರ ಹಾಗೂ ಪಾರು ಧಾರಾವಾಹಿಯ ಪ್ರೀತು ಪಾತ್ರವನ್ನು ಜನ ಮೆಚ್ಚಿಕೊಂಡಿದ್ದರು. ಈ ಧಾರಾವಾಹಿಗಳಲ್ಲಿ ಬೇರೆ ಬೇರೆಯವರ ಪತಿ-ಪತ್ನಿಯಾಗಿ ನಟಿಸಿದ್ದ ಜೋಡಿ 2023ರ ಫೆಬ್ರುವರಿ 12ರಂದು ಹಸೆಮಣೆಯೇರಿದೆ. ಅದಿತಿ ಅರ್ಥಾತ್​ ನಟಿ ಪ್ರಿಯಾ ಜೆ.ಆಚಾರ್ (Priya J Achar) ಹಾಗೂ ಪ್ರೀತು ಅರ್ಥಾತ್​ ಸಿದ್ದು ಮೂಲಿಮನಿ (Siddu Moolimani) ದಾಂಪತ್ಯ ಬದುಕಿಗೆ ಕಾಲಿಟ್ಟು ಬದುಕನ್ನು ಎಂಜಾಯ್ ಮಾಡ್ತಿದ್ದಾರೆ.

ಇದರ ನಡುವೆಯೇ, ಸಿದ್ದು ಅವರ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ಅವರು, ತಮಗೆ ದಿನವೊಂದಕ್ಕೆ ಸಿಗ್ತಿರೋ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಜೀರೋದಿಂದ ಶುರು ಮಾಡಿದ ತಾವು ಈಗ ಪಡೀತಿರೋದು ಎಷ್ಟು ಎಂಬ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲದೇ ಬಣ್ಣದ ಲೋಕದಲ್ಲಿ ಕಾಲಿಡುವುದು ತುಂಬಾ ಕಷ್ಟ. ತಮ್ಮತನವನ್ನು ರೂಪಿಸಿಕೊಳ್ಳಲು 15-20 ವರ್ಷಗಳೇ ಕಳೆದುಹೋಗುತ್ತವೆ. ಹಣಬಲ, ಹೆಸರಿನ ಬಲ ಇದ್ದವರಿಗೆ ಬೇಗನೇ ಈ ಇಂಡಸ್ಟ್ರಿ ಒಲಿದು ಬಿಡುತ್ತದೆ ಎಂದು ನೋವನ್ನೂ ತೋಡಿಕೊಂಡಿರುವ ಅವರು, ತಮ್ಮ 1೦-12 ವರ್ಷಗಳ ಈ ಪಯಣದಲ್ಲಿ ಹೇಗೆ ಇಷ್ಟು ಸಕ್ಸಸ್‌ ಕಾಣಲು ಸಹಕಾರಿಯಾಯಿತು ಎಂದು ವಿವರಿದ್ದಾರೆ.

ಗಟ್ಟಿಮೇಳ-ಪಾರು ಸೀರಿಯಲ್ ಜೋಡಿ ಸೂಪರ್​ ರೀಲ್ಸ್​: ನಿವೇದಿತಾ ಹೆಸ್ರು ಎಳೆದು ತರೋದಾ ನೆಟ್ಟಿಗರು?

ಜೀರೋದಿಂದ ಆರಂಭಿಸಿರುವ ತಾವು ಈಗ ತಾವು ಒಂದು ದಿನಕ್ಕೆ 35 ಸಾವಿರ ರೂಪಾಯಿಗಳನ್ನು ಪಡೆದಿರುವುದಾಗಿ ನಟ ಹೇಳಿದ್ದಾರೆ. ಆಫೀಷಿಯಲ್‌ಬ್ರೋಕ್‌ ಬ್ರದರ್‍ಸ್‌ ಚಾನೆಲ್‌ಗೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಅದರ ವಿಡಿಯೋ ಈಗ ವೈರಲ್‌ ಆಗ್ತಿದೆ. ಇದರಲ್ಲಿ ಅವರು, ಒಬ್ಬ ಫೇಮಸ್‌ ನಟ ಆಗಲು ಇರುವ ತೊಂದರೆಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ. ತಮ್ಮ ಹಾಗೆ ಜೀರೋದಿಂದ ಬರುವವರು ಎದುರಿಸುವ ಸಂಕಷ್ಟಗಳ ಬಗ್ಗೆ ಚುಟುಕಾಗಿ ಒಂದೇ ವಾಕ್ಯದಲ್ಲಿ ಮನ ಮಿಡಿಯುವಂತೆ ವಿವರಣೆ ನೀಡಿದ್ದಾರೆ. 

ಸಿದ್ದು ಮೂಲಿಮನಿ ಕೂಡ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇವರ ಮೊದಲ ಸಿನಿಮಾ ರಂಗಿತರಂಗ. ಈ ಸಿನಿಮಾಗೆ ಸಿದ್ದು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ನಂತರ 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ' ಸಿನಿಮಾಗಳಲ್ಲಿ ನಟಿಸಿದ್ದಾರೆ. 2017 ರಲ್ಲಿ ತೆರೆಕಂಡ 'ಟೋರ ಟೋರ' ಚಿತ್ರದಲ್ಲಿ ಅಭಿನಯಿಸಿದ್ದರು. 2018ರಲ್ಲಿ ಇವರ 'ಲಂಬೋದರ' ಚಿತ್ರ ತೆರೆ ಕಂಡಿದೆ. ಅನುಪ್ ಭಂಡಾರಿ ಅವರ 'ರಾಜರಥ' ಸಿನಿಮಾದಲ್ಲೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಳಿಕ 'ವಿಕ್ರಾಂತ್ ರೋಣ', 'ಲಂಬೋದರ' ಹಾಗೂ 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸೇರಿದಂತೆ ಈಚೆ ಬಿಡುಗಡೆಗೊಂಡ ಅಭಿರಾಮಚಂದ್ರ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. 

ಸೀರಿಯಲ್​ಗಳಿಗೆ ನಟಿಯಾಗೋ ಆಸೆ ಹೊತ್ತು ಹೋಗುವವರಿಗೆ ಸೀತಾರಾಮ ಪ್ರಿಯಾ ​ ಖಡಕ್​ ವಾರ್ನಿಂಗ್​!

View post on Instagram