ಪಾಕಿಸ್ತಾನಿ ಟಿವಿ ನಿರೂಪಕಿ ಸಾಜಲ್ ಮಲಿಕ್ ಅವರ ಖಾಸಗಿ ವಿಡಿಯೋ ಎನ್ನಲಾದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಲಿಕ್ ವಿಡಿಯೋ ನಕಲಿ ಎಂದು ಹೇಳಿದ್ದಾರೆ. ತಮ್ಮ ಖ್ಯಾತಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಹರಿಬಿಡಲಾಗಿದೆ ಎಂದು ಆರೋಪಿಸಿ ಎಫ್‌ಐಎಗೆ ದೂರು ನೀಡಿದ್ದಾರೆ. ಈ ಘಟನೆ ಡಿಜಿಟಲ್ ಖಾಸಗಿತನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಪಾಕಿಸ್ತಾನದ ಮತ್ತೊಬ್ಬ ಟಿವಿ ನಿರೂಪಕಿಯ ಖಾಸಗಿ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಗೆಳೆಯನೊಂದಿಗೆ ಖಾಸಗಿ ಕ್ಷಣಗಳಲ್ಲಿ ತೊಡಗಿದ್ದಾಗಿನ ವಿಡಿಯೋ ವೈರಲ್ ಬೆನ್ನಲ್ಲಿಯೇ ಇದು ನನ್ನದಲ್ಲ. ಇದನ್ನು ಯಾರೋ ಉದ್ದೇಶಪೂರ್ವಕವಾಗಿ ಸೃಷ್ಟಿಸಿ ವೈರಲ್ ಮಾಡಿರುವುದಾಗಿ ನಿರೂಪಕಿ ಸಾಜಲ್ ಮಲಿಕ್ ತಿಳಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ಟಿಕ್‌ಟಾಕ್ ತಾರೆ ಸಾಜಲ್ ಮಲಿಕ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗುರಿಯಾಗಿದ್ದಾರೆ. ಕಾರಣವೆಂದರೆ ಅವರ ಖಾಸಗಿ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮ್ಮ ಗೆಳೆಯನೊಂದಿಗೆ ಖಾಸಗಿ ಕ್ಷಣಗಳಲ್ಲಿ ಇದ್ದಂತೆ ಕಾಣುತ್ತದೆ ಎಂಬ ಆರೋಪವಿದೆ.
ಸಾಜಲ್ ಮಲಿಕ್, ಲಾಹೋರ್‌ನ ಸ್ಥಳೀಯ ಟಿವಿ ಚಾನೆಲ್‌ನಲ್ಲಿ ರೋಡ್ ಶೋಗಳನ್ನು ನಡೆಸಿದವರು. ಟಿವಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಟಿಕ್‌ಟಾಕ್‌ನಲ್ಲಿ 1.76 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಅವರು ಮತ್ತು ಅವರ ಗೆಳೆಯನೊಂದಿಗೆ ಖಾಸಗಿ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ದೃಶ್ಯವಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವು ಇಂಟರ್ನೆಟ್‌ನಲ್ಲಿ ವೈರಲ್ ಆದ ನಂತರ, ಮಲಿಕ್ ಅವರು ಈ ವಿಡಿಯೋವು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತು ತಮ್ಮ ಖ್ಯಾತಿಗೆ ಹಾನಿ ಉಂಟುಮಾಡಲು ಇದನ್ನು ಉದ್ದೇಶಪೂರ್ವಕವಾಗಿ ಹರಡಲಾಗಿದೆ ಎಂದು ಹೇಳಿದ್ದಾರೆ. ಅವರು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ (FIA) ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ: Woman Caught Red-Handed: ಚಡ್ಡಿ ಕದ್ದು, ಒಂದರ ಮೇಲೆ ಒಂದು ಹಾಕೊಂಡ್ಳು, ಕದ್ದಿದ್ದು ಹೇಗೆ ಗೊತ್ತಾಯ್ತು ಅನ್ನೋದೇ ಪ್ರಶ್ನೆ!
ಈ ಘಟನೆಯು ಪಾಕಿಸ್ತಾನದಲ್ಲಿ ಖಾಸಗಿತನದ ಹಕ್ಕುಗಳು ಮತ್ತು ಸೈಬರ್ ಕ್ರೈಮ್ ಕುರಿತಾದ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಇಂತಹ ಘಟನೆಗಳು ಪಾಕಿಸ್ತಾನದಲ್ಲಿ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿಯೂ ಡಿಜಿಟಲ್ ಖಾಸಗಿತನದ ಬಗ್ಗೆ ಗಂಭೀರ ಚಿಂತನೆಗೆ ಕಾರಣವಾಗಿವೆ. ತ್ತೀಚೆಗೆ ಅನೇಕ ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ತಾರೆಯರಾದ ಇಮ್ಷಾ ರೆಹ್ಮಾನ್, ಮಿನಾಹಿಲ್ ಮಲಿಕ್ ಮತ್ತು ಮಥಿರಾ ಮುಂತಾದ ಟಿಕ್‌ಟಾಕ್ ತಾರೆಗಳ ಖಾಸಗಿ ವಿಡಿಯೋಗಳು ಲೀಕ್ ಆಗಿರುವ ಘಟನೆಗಳು ನಡೆದಿವೆ. ಇವುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
ಸಾಜಲ್ ಮಾಲಿಕ್ ಅವರು ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ನಕಲಿ ವಿಡಿಯೋಗಳನ್ನು ಹರಡುವ ಮೊದಲು ಸತ್ಯಾಸತ್ಯತೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಅವರು ತಮ್ಮ ಮನಸ್ಸಿಗೆ ತುಂಬಾ ಬೇಸರ ಉಂಟಾಗಿರುವುದಾಗಿ ತಿಳಿಸಿದ್ದಾರೆ. ಜೊತೆಗೆ, ತಮ್ಮ ಖ್ಯಾತಿಗೆ ಹಾನಿ ಉಂಟುಮಾಡಲು ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಹರಡಲಾಗಿದೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳು ಜನರಲ್ಲಿ ಖಾಸಗಿತನದ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತಿವೆ. ಸಾಮಾಜಿಕ ಮಾಧ್ಯಮದ ಬಳಕೆದಾರರು ಈ ರೀತಿಯ ವಿಷಯಗಳನ್ನು ಶೇರ್ ಮಾಡುವಾಗ ಎಚ್ಚರತೆ ವಹಿಸುವ ಅಗತ್ಯವಿದೆ.
ಇದನ್ನೂ ಓದಿ: Baby Bonus Plan: ಅಮೇರಿಕಾದಲ್ಲಿ ಮಗು ಮಾಡಿಕೊಂಡರೆ 4.25 ಲಕ್ಷ ಬೋನಸ್; ಟ್ಯಾಕ್ಸ್ ಫ್ರೀ!
ಈ ಘಟನೆಗಳು ಡಿಜಿಟಲ್ ಯುಗದಲ್ಲಿ ಖಾಸಗಿತನದ ಹಕ್ಕುಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ. ಸಾಜಲ್ ಮಲಿಕ್ ಅವರು ಮಾಧ್ಯಮ ಹಾಗೂ ಸಾರ್ವಜನಿಕರಿಗೆ ನಕಲಿ ವಿಷಯಗಳನ್ನು ಹರಡುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
