ಕನ್ನಡ ಕಿರುತೆರೆಯಲ್ಲಿ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಒಂದು ಸಾಹಸಪ್ರಧಾನ ಜನಪ್ರಿಯ ರಿಯಾಲಿಟಿ ಶೋ ಆಗಿತ್ತು. ಇದರ 2ನೇ ಸರಣಿಯಲ್ಲಿ ಪದ್ದು ಗೌಡ ಭಾಗವಹಿಸಿ ಮನೆಮಾತಾಗಿದ್ದರು. ಬಳಿಕ ಅವರು ಕಲಾವಿದರಾಗಿ, ನಿರೂಪಕರಾಗಿ ಗುರುತಿಸಿಕೊಂಡು ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.

ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಖ್ಯಾತಿಯ ಪದ್ದು ಗೌಡ ನಿಧನ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ (Paate Mandi Kaadig Bandru Season 2) ಸರಣಿ 2ರ ಖ್ಯಾತಿಯ ಪದ್ಮನಾಭ ಕೆ.ಎಂ. (ಪದ್ದು ಗೌಡ-Paddu Gowda) ನಿಧನರಾಗಿದ್ದಾರೆ. ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಪದ್ದು ಗೌಡ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಈ ಬ್ರೈನ್ ಟ್ಯೂಮರ್‌ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದರು ಎನ್ನಲಾಗಿದೆ. ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅಸುನೀಗಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು. ಪದ್ಮನಾಭ ಗೌಡ ಅವರು ಪತ್ನಿ ಅಶ್ವಿನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಪದ್ದು ಗೌಡ ನಿಧನಕ್ಕೆ ಸಂತಾಪ

ಮಾಡೆಲ್, ನಿರೂಪಕರೂ ಆಗಿ ಕೆಲಸ ಮಾಡುತ್ತಿದ್ದ ಪದ್ದು ಗೌಡ ಅವರು ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆಮಾತಾಗಿದ್ದರು. ಅವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಪದ್ದು ಗೌಡ ನಿಧನಕ್ಕೆ ಸಂತಾಪಗಳು ಹರಿದುಬರುತ್ತಿವೆ.

ಪದ್ದು ಗೌಡ ಅವರಿಗೆ ಬ್ರೈನ್‌ ಟ್ಯೂಮರ್‌ ಇರುವುದು ಕೆಲವು ತಿಂಗಳುಗಳ ಹಿಂದಷ್ಟೇ ತಿಳಿದು ಬಂದಿತ್ತು. ಪ್ರಾಥಮಿಕ ಹಂತದಲ್ಲಿದ್ದ ಬ್ರೈನ್ ಟ್ಯೂಮರ್ ಪತ್ತೆಯಾದಾಗ ಪದ್ದುಗೌಡ ಅವರು ಧೈರ್ಯವಾಗಿ ಚಿಕಿತ್ಸೆ ಪಡೆದರೂ ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿತ್ತು. ಕನ್ನಡ ಕಿರುತೆರೆ ವಾಹಿನಿಯಲ್ಲಿ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದ ಪದ್ದು ಗೌಡ ಅವರು ಈ ಬೆಳವಣಿಗೆಯಿಂದ ವಿಚಲಿತರಾಗದೇ ತಮ್ಮ ಕೆಲಸ ಮುಂದುವರಿಸುತ್ತ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಾಯಿಲೆಯೇ ಇವರನ್ನು ಸೋಲಿಸುವ ಮೂಲಕ ಈ ಕಲಾವಿದ ಇನ್ನಿಲ್ಲವಾಗಿದ್ದಾರೆ.

ಟ್ಯಾಲೆಂಟೆಡ್ ಮ್ಯಾನ್

ಬಹುಮುಖ ಪ್ರತಿಭೆ, ಮಲ್ಟಿ ಟ್ಯಾಲೆಂಟೆಡ್ ಮ್ಯಾನ್ ಎಂದೆಲ್ಲಾ ಝ್ಯಾತಿ ಪಡೆದಿದ್ದ ಪದ್ದು ಗೌಡ ಅವರು ತಮ್ಮ ಮುಗ್ಧತೆ ಹಾಗೂ ಪ್ರತಿಭೆಯಿಂದ ಅಪಾರ ಜನಮನ್ನಣೆ ಪಡೆದಿದ್ದರು. ಕಿರುತೆರೆ, ಸಿನಿಮಾ ರಂಗದ ಹಲವು ಗಣ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ತುಂಬಾ ಸ್ನೇಹ ಜೀವಿ ಎಂದೇ ಗುರುತಿಸಲ್ಪಟ್ಟಿದ್ದರು. ಆದರೆ, ಇದೀಗ ಜೀವನಯಾನ ಮುಗಿಸಿ ಹೊರಟುಹೋಗಿದ್ದಾರೆ.

ಕನ್ನಡ ಕಿರುತೆರೆಯಲ್ಲಿ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಒಂದು ಸಾಹಸಪ್ರಧಾನ ಜನಪ್ರಿಯ ರಿಯಾಲಿಟಿ ಶೋ ಆಗಿತ್ತು. ಅದರಲ್ಲಿ ನಗರದ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿರುವ ಹುಡುಗ-ಹುಡುಗಿಯರನ್ನು ಕಾಡಿಗೆ ಕರೆದೊಯ್ದು ಅಲ್ಲಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಬದುಕುಳಿಯುವ ಸವಾಲನ್ನು ನೀಡಲಾಗುತ್ತಿತ್ತು. ಇದರ 2ನೇ ಸರಣಿಯಲ್ಲಿ ಪದ್ದು ಗೌಡ ಭಾಗವಹಿಸಿ ಮನೆಮಾತಾಗಿದ್ದರು. ಬಳಿಕ ಅವರು ಕಲಾವಿದರಾಗಿ, ನಿರೂಪಕರಾಗಿ ಗುರುತಿಸಿಕೊಂಡು ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.