ಪ್ರೀತಿಯಿಂದಾನೇ ಕಿರುಕುಳ ಕೊಡೋ ಭಾಗ್ಯಲಕ್ಷ್ಮಿಗೆ ಸಿಕ್ತು ಬಹುಮಾನ
ಸೊಸೆಯನ್ನು ಗದರುವ ಅತ್ತೆಯಾದರೂ ಪ್ರೀತಿ ತೋರಿಸಬೇಕಾದ ಸಮಯದಲ್ಲಿ ತೋರಿಸಿ, ಸೊಸೆ ಬಗ್ಗೆ ಅತೀವ ಕಾಳಜಿಯನ್ನೂ ವ್ಯಕ್ತಪಡಿಸುವ ಅತ್ತೆಯಾಗಿ ಪದ್ಮಜಾ ರಾವ್ ಸೀರಿಯಲ್ ವೀಕ್ಷಕರಿಂದ ಬಹಳಷ್ಟು ಪ್ರೀತಿ-ಮೆಚ್ಚುಗೆ ಪಡೆಯುತ್ತಿದ್ದಾರೆ.
ಕಿರುತೆರೆಯ ಲೋಕದಲ್ಲಿ ಕಲರ್ಸ್ ಕನ್ನಡದ 'ಅನುಬಂಧ' ಅವಾರ್ಡ್ಸ್ ಸಖತ್ ಸುದ್ದು ಮಾಡುವ ಪ್ರೋಗ್ರಾಂಗಳಲ್ಲಿ ಒಂದು. ಇತ್ತೀಚೆಗೆ ನಡೆದ 'ಅನುಬಂಧ' ಅವಾರ್ಡ್ಸ್ ನಲ್ಲಿ ಹಲವು ಟಿವಿ ಸ್ಟಾರ್‌ಗಳು ಬಹುಮಾನ ಪಡೆದು ಮೊದಲಿಗಿಂತ ಇನ್ನೂ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ ಎನ್ನಬಹುದು. ಈ ಕಾರ್ಯಕ್ರಮದಲ್ಲಿ ಪ್ರೈಸ್ ಪಡೆದವರಲ್ಲಿ ಹಿರಿಯ ನಟಿ ಪದ್ಮಜಾ ರಾವ್ ಸಹ ಒಬ್ಬರು.
ನಟಿ ಪದ್ಮಜಾ ರಾವ್ ಚಿತ್ರರಂಗ ಮತ್ತು ಕಿರುತೆರೆ, ಎರಡೂ ಕಡೆ ನಟಿಸಿ ಸೈ ಎನಿಸಿಕೊಂಡವರು. ಇತ್ತೀಚೆಗೆ ಅವರು ನಟಿಸುತ್ತಿರುವ ಸೀರಿಯಲ್ ಭಾಗ್ಯಲಕ್ಷ್ಮೀ . ಈ ಧಾರಾವಾಹಿಯಲ್ಲಿ ಕುಸುಮಾ ಹೆಸರಿನ ಅತ್ತೆ ಪಾತ್ರದಲ್ಲಿನಟಿಸುತ್ತಿರುವ ನಟಿ ಪದ್ಮಜಾ ರಾವ್, ಇದೀಗ 'ಜಗ ಮೆಚ್ಚಿದ ಅತ್ತೆ' ಅವಾರ್ಡ್ ಪಡೆದು ತಮ್ಮ ತಲೆಗೊಂದು ಕಿರೀಟ ಮುಡಿಸಿಕೊಂಡಿದ್ದಾರೆ. ಅನುಬಂಧ ಬಹುಮಾನದ ಜತೆಗೊಂದು ಅನುಬಂಧ ಹೊಂದುವ ಮೂಲಕ ಕಿರುತೆರೆಯಲ್ಲೂ ತಮಗೊಂದು ವಿಶೇಷ ಸ್ಥಾನಮಾನ ಕಂಡುಕೊಂಡಿದ್ದಾರೆ.
ಬೈಕ್‌ನಲ್ಲಿ ಕವಿತಾ ಗೌಡ ಹಿಂದೆ ಕುಳಿತು ಚಂದನ್ ಹೋಗಿದ್ದೆಲ್ಲಿ?
ಸೊಸೆಯನ್ನು ಗದರುವ ಅತ್ತೆಯಾದರೂ ಪ್ರೀತಿ ತೋರಿಸಬೇಕಾದ ಸಮಯದಲ್ಲಿ ತೋರಿಸಿ, ಸೊಸೆ ಬಗ್ಗೆ ಅತೀವ ಕಾಳಜಿಯನ್ನೂ ವ್ಯಕ್ತಪಡಿಸುವ ಅತ್ತೆಯಾಗಿ ಪದ್ಮಜಾ ರಾವ್ ಸೀರಿಯಲ್ ವೀಕ್ಷಕರಿಂದ ಬಹಳಷ್ಟು ಪ್ರೀತಿ-ಮೆಚ್ಚುಗೆ ಪಡೆಯುತ್ತಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಒಳ್ಳೆಯ, ಮುಗ್ಧ ಸೊಸೆಯಾಗಿ ನಟಿ ಸುಷ್ಮಾರಾವ್ ನಟಿಸುತ್ತಿದ್ದು, ಕೆಟ್ಟ ಶಕುನಿಯಂತ ಗಂಡನಾಗಿ ನಟ ತಾಂಡವ್ ನಟಿಸಿದ್ದಾರೆ. ತಾಂಡವ್ 'ಭಾಗ್ಯಲಕ್ಷ್ಮೀ ' ಧಾರಾವಾಹಿಯ ನಟನೆಗಾಗಿ 'ಮನಮೆಚ್ಚಿದ ಶಕುನಿ' ಪ್ರೈಸ್ ಪಡೆದುಕೊಂಡಿದ್ದಾರೆ.
ರೀಲ್‌ನಲ್ಲಿ ಮಾತ್ರವಲ್ಲ ರಿಯಲ್ ಲೈಫ್‌ಲ್ಲೂ ಸೀತಮ್ಮ-ಸಿಹಿ ಬಾಂಡಿಂಗ್ ಸಖತ್ ಕ್ಯೂಟ್
ಒಟ್ಟಿನಲ್ಲಿ, ನಟಿ ಪದ್ಮಜಾ ರಾವ್ ತಮ್ಮ ಅಮೋಘ ನಟನೆಯಿಂದ ಬೆಳ್ಳಿತೆರೆ, ಕಿರುತೆರೆ ಎಲ್ಲಾ ಕಡೆ ಜನಮೆಚ್ಚುಗೆ ಗಳಿಸಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಪದ್ಮಜಾ ರಾವ್ ಅತ್ತೆಯನ್ನು ನೋಡಲೆಂದೇ ಕಾದು ಕುಳತುಕೊಳ್ಳುವ ಮಹಿಳಾ ಪ್ರೇಕ್ಷಕರ ಗುಂಪು ಇದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಯ ಪಾತ್ರದ ಮೂಲಕ ಇನ್ನೂ ಅದೆಷ್ಟು ಕಾಲ ನಟಿ ಪದ್ಮಜಾ ರಾವ್ ಕಿರುತೆರೆ ವೀಕ್ಷಕರಿಗೆ ತಮ್ಮ 'ದರ್ಶನ' ನೀಡಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ!