Asianet Suvarna News Asianet Suvarna News

30 ನಿಮಿಷದ ಸೀರಿಯಲ್‌ನ ಹಿಂದಿರುವ ರೋಚಕ ಕಥೆ: ಸೆಟಲ್ಲಿ ಒಂದು ದಿನ ಹೀಗಿತ್ತು..

ಧಾರಾವಾಹಿ ನೋಡುವಾಗ ಹೇಗೆ ಶೂಟಿಂಗ್ ಮಾಡುತ್ತಾರೆ, ಹೇಗಿರುತ್ತೆ ಅಂತ ನೋಡಬೇಕು ಎನ್ನುವ ಆಸೆಯಿತ್ತು. ಇದೀಗ ಶೂಟಿಂಗ್ ನೋಡುವ ಅವಕಾಶ ಸಿಕ್ಕಿದೆ. ಶೂಟಿಂಗ್ ಸೆಟ್ ನಲ್ಲಿ ಒಂದು ದಿನ ಕಳೆದಿದ್ದೀನಿ.

one day experience of kannada serial set
Author
First Published Nov 20, 2022, 5:01 PM IST

ಆನಂದ ಜೇವೂರ್,
ಆಳ್ವಾಸ್, ಪತ್ರಿಕೋದ್ಯಮ ವಿದ್ಯಾರ್ಥಿ

ಚಿಕ್ಕ ಮಕ್ಕಳಿಂದ ಮಯಸ್ಕರವರೆಗೂ ಎಲ್ಲರೂ ಧಾರಾವಾಹಿ ನೋಡುತ್ತಾರೆ. ನೋಡದೆ ಇರುವವ ಸಂಖ್ಯೆ ತುಂಬಾ ಕಡಿಮೆ ಎಂದರೆ ತಪ್ಪಾಗಲ್ಲ. ಶಾಲೆಯಲ್ಲಿ ಬಿಡುವಿನ ಸಮಯದಲ್ಲಿ ಹುಡುಗಿಯರು ಅಮೃತವರ್ಷಿಣಿ ಧಾರಾವಾಹಿ ಬಗ್ಗೆ ಮಾತನಾಡುತ್ತಿದರು. ನಿಜ ಹೇಳಬೇಕೆಂದರೆ ಅವರ ಮಾತು ನನಗೆ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಮನೆಯಲ್ಲಿ ಟಿವಿ ಇಲ್ಲದೆ, ಕಂಪ್ಯೂಟರ್ ಮಾತ್ರ ಇತ್ತು. ಯಾಕೆ ಜನರಿಗೆ ಧಾರಾವಾಹಿಗಳ ಮೇಲೆ ಹುಚ್ಚು ಪ್ರೀತಿಯೆಂದು ತಿಳಿದಿರಲ್ಲಿಲ್ಲ. 10ನೇ ತರಗತಿಗೆ ಬಂದಾಗ ಚಂದನದಲ್ಲಿ ಪ್ರಸಾರವಾಗುತ್ತಿದ್ದ 'ದಿಶಾ ದೇವಿಗೆ' ಕಾರ್ಯಕ್ರಮಗೋಸ್ಕರ ಮನೆಗೆ ಟಿ ವಿ ಬಂತು. ಅಲ್ಲಿಂದ ಆರಂಭವಾಯಿತು ನೋಡಿ ಧಾರಾವಾಹಿಯ ಆಟ, ಆರಂಭದಲ್ಲಿ ನನಗೆ ಧಾರಾವಾಹಿ ಇಷ್ಟವಾಗುತ್ತಿರಲ್ಲ, ನಂತರದಲ್ಲಿ ಧಾರಾವಾಹಿ ನೋಡುವುದು ನಶೆಯ ರೀತಿಯಾಯಿತು. ಕೆಲ ಧಾರಾವಾಹಿ ನೋಡಿದಾಗ ಯಾಕೆ ಇಷ್ಟು ಎಳೆಯುತ್ತಾರೆ ಅನಿಸಿದ್ದು ಉಂಟು. 

ಹೀಗೆ ಧಾರಾವಾಹಿ ನೋಡುವಾಗ ಪ್ರತಿಯೊಬ್ಬ ವಿಕ್ಷಕರಿಗೂ ಒಂದು ಆಸೆ ಇರುತ್ತದೆ, ನೆಚ್ಚಿನ ನಟರ ಜೊತೆ ಫೋಟೊ ತೆಗೆದುಕೊಳ್ಳಬೇಕು, ಮಾತನಾಡಬೇಕು ಅಂತ. ಈ ವಿಷಯದಲ್ಲಿ ನಾನು ಸ್ವಲ್ಪ ಲಕ್ಕಿ, ಕಾರಣ ನೆಚ್ಚಿನ ನಟ ಪರಿಚಯ ಆದ್ದರಿಂದ ಒಂದು ದಿನ ಧಾರಾವಾಹಿ ಶೂಟಿಂಗ್ ನೋಡಲು ಹೋದೆ. ಬೈಕ್ ಗೆ ಹೇಗೆ ಪೆಟ್ರೋಲ್ ಅಗತ್ಯನೋ ಹಾಗೆ, ನಮಗೆಲ್ಲ ಆಹಾರ ಮುಖ್ಯ ಅಲ್ವಾ. ಸೀರಿಯಲ್ ಸೆಟ್ ನಲ್ಲಿ ನೋಡಿದರೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ವೆಳೆಗೆ ಸಮಯಕ್ಕೆ ಸರಿಯಾಗಿ ಆಹಾರ, ಟೀ, ಕಾಫಿಯ ವ್ಯವಸ್ಥೆ ಇತ್ತು. ನಾವು ಟಿ.ವಿಯಲ್ಲಿ ನೋಡುವ 30 ನಿಮಿಷ ಧಾರಾವಾಹಿಗೂ ನಿಜವಾಗಿ ಪರದೆಯ ಹಿಂದೆ ನೋಡುವಾಗ ಕಾಣದ ಕೈಗಳ ಕೆಲಸ ಹಲವು. ನಟರ ಅಭಿನಯದಿಂದ ನಿರ್ದೇಶಕ ಆಕ್ಷನ್, ಕೊನೆಗೆ ಎಡಿಟರ್‌ನ ಕೈ ಚಳಕ ಹೀಗೆ ಪೂರ್ಣವಾಗಿ ಕೊನೆಗೆ ನಾವು ನೋಡುವುದು 30 ನಿಮಿಷದ ಒಂದು ಎಪಿಸೋಡ್. 

ರಾಮಾಚಾರಿಯ ಪ್ರೀತಿಯ ಅತ್ತಿಗೆಮ್ಮ ಇನ್ನಿಲ್ಲ, ಸಂಕಟ ತಡೆಯಲಾಗದೇ ಕುಸಿದುಬಿದ್ದ ರಾಮಾಚಾರಿ!

ಅವರ ಅಭಿನಯ ನೋಡಿದಾಗ ನನಗೆ ಅನಿಸಿದ್ದು ಒಂದು ವೇಳೆ ನಟರು ಪರೀಕ್ಷೆ ಬರೆದರೆ ಪಿ.ಎಚ್.ಡಿ ತೆಗೆದುಕೊಳ್ಳಬಹುದು. ಕಾರಣ ಸ್ಕ್ರಿಪ್ಟ್ ಗಳಲ್ಲಿನ ಉದ್ದದ ಡೈಲಾಗ್ಸ, ನೆನಪಿನ ಶಕ್ತಿ ಅಬ್ಬಾ ಸೂಪರ್ ಅನಿಸಿತು. ನಿರ್ದೇಶಕ ಆಕ್ಷನ್ ಅಂದಾಗ ನಟರು ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡಿ, ಕಟ್ ಅಂದಾಗ ಮತ್ತೆ ಮರಳಿ ಯಥಾಸ್ಧಿತಿಗೆ ಬರುತ್ತಿದ್ದರು. ಬಿಡುವಿನ ಸಮಯದಲ್ಲಿ ಅವರ ಮಧ್ಯೆ ಹಾಸ್ಯ ಪ್ರೀತಿಯ ಮಾತುಗಳು, ರೀಲ್ಸ ಮಾಡುವುದು. ಹೀಗೆ ಧಾರವಾಹಿ ಸೆಟ್ ಕೂಡವು ನಟರಿಗೆ ಎರಡನೆಯ ಮನೆ ಎಂದರೆ ತಪ್ಪಾಗಲಾರದು. 

Kannadathi : ಅಮ್ಮಮ್ಮನ ಅಂತ್ಯಕ್ರಿಯೆ ನನ್ನನ್ನೂ ಬಾಧಿಸಿತು : ಚಿತ್ಕಳಾ ಬಿರಾದಾರ್

ಕಲಾವಿದರು ಹಗಲು ರಾತ್ರಿ ಎನ್ನದೇ ಜನರನ್ನು ರಂಜಿಸುವುದಕ್ಕಾಗಿ ನಟನೆ ಮಾಡುತ್ತಾರೆ. ಕಲೆ ಎನ್ನುವುದು ಎಲ್ಲರಿಗೂ ಬರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ಕಲಾವಿದರನ್ನು ಪ್ರೀತಿಸಬೇಕು. ಒಂದು ವಿಚಾರ ಹೇಳಬೇಕೆಂದರೆ ಸೀರಿಯಲ್ ಸೇಟ್ ನಲ್ಲಿ ಒಂದು ದಿನ ನೋಡಿದಾಗ 30 ನಿಮಿಷದ ಒಂದು ಎಪಿಸೋಡ್ ಹಿಂದೆ ಗಂಟೆಗಟ್ಟಲೆ ಅಭಿನಯ, ಪಾತ್ರದ ಪರಕಾಯ ಪ್ರವೇಶ ನೋಡಿ ಖುಷಿಯಾಯಿತು. ಹಾಗಂತ ಎಲ್ಲರೂ ಧಾರಾವಾಹಿ ನೋಡಬೇಕು ಅಂತ ನಾನು ಹೇಳುವುದಿಲ್ಲ. ಬಿಡುವಿನ ವೇಳೆ, ಕೆಲಸದ ಒತ್ತಡದ ನಡುವೆ ಸಲ್ಪ ಹೊತ್ತು ಮನರಂಜನೆಗಾಗಿ ನೋಡಿದರೆ ಖಂಡಿತ ತಪಲ್ಲ. ಆದರೆ ಮಾಡುವ ಕೆಲಸವನೆಲ್ಲ ಬಿಟ್ಟು ದಿನಪೂರ್ತಿ ಧಾರಾವಾಹಿ ನೋಡುವುದು ಅತಿಯಾಗಬಹುದು. ಮತ್ತೆ ನಿಮ್ಮ ಇಷ್ಟದ ಧಾರಾವಾಹಿ ಯಾವುದು..?

Follow Us:
Download App:
  • android
  • ios