Asianet Suvarna News Asianet Suvarna News

ಭಾಗ್ಯ ಆದ್ಲು ಭಗಾಯಾ: ಸ್ಟಾರ್​ ಹೋಟೆಲ್​ನಲ್ಲಿ ಫುಲ್​ ಡಿಮಾಂಡ್​! ಇದೇನಪ್ಪಾ ಹೊಸ ಅಗ್ನಿ ಪರೀಕ್ಷೆ?

ಸ್ಟಾರ್​ ಹೋಟೆಲ್​ನಲ್ಲಿ ಕೆಲಸಕ್ಕೆ ಸೇರಿರುವ ಮೊದಲ ದಿನವೇ ಭಾಗ್ಯ ಭಗಾಯಾ ಆಗಿದ್ದು,  ಅಗ್ನಿಪರೀಕ್ಷೆ ಶುರುವಾಗಿದೆ. ಏನದು?
 

On the first day of joining the work at Star Hotel Bhagyalakshmi facing problem suc
Author
First Published May 20, 2024, 1:02 PM IST

ಭಾಗ್ಯಲಕ್ಷ್ಮಿ ಸ್ಟಾರ್​ ಹೋಟೆಲ್​ನಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಮೊದಲ ದಿನ ಅವಳಿಗೆ ಯೂನಿಫಾರ್ಮ್​ ನೀಡಲಾಗಿದೆ. ಆದರೆ ಅದನ್ನು ಹೇಗೆ ಧರಿಸಬೇಕು ಎಂಬೆಲ್ಲಾ ಗೊಂದಲದಲ್ಲಿದ್ದಾಳೆ ಭಾಗ್ಯ. ಹಿತಾಳನ್ನು ಈ ಬಗ್ಗೆ ಕೇಳಿದಾಗ, ಭಾಗ್ಯ ಎಂದರೆ ಬೇರೆ ಯಾರೋ ಎಂದು ತಿಳಿದುಕೊಂಡಿರುವ ಆಕೆ, ಏನು ತಮಾಷೆ ಮಾಡುತ್ತಿದ್ದೀರಾ ಎನ್ನುತ್ತಲೇ ನಕ್ಕಿದ್ದಾಳೆ. ಅದೇ ವೇಳೆ ಇನ್ನೊಬ್ಬಳು ಕೆಲಸದಾಕೆ ಬಂದು ಭಗಾಯಾ ಮೇಡಂ ಎಂದು ಮಾತನಾಡಿಸುತ್ತಾಳೆ. ನಾನು ಭಗಾಯಾ ಅಲ್ಲ ಭಾಗ್ಯ ಎನ್ನುತ್ತಾಳೆ ಭಾಗ್ಯ. ನಂತರ ಆಕೆ ಭಾಗ್ಯಳನ್ನು ಇನ್ನಾರೋ ಎಂದು ತಿಳಿದುಕೊಂಡು, ನಮ್ಮ ಕಾಲೇಜಿನಲ್ಲಿ ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ. ನಮ್ಮ ಸೀನಿಯರ್ಸ್​ ನಿಮ್ಮ ಬಗ್ಗೆ ಮಾತನಾಡುತ್ತಾರೆ, ನಿಮ್ಮ ಬಗ್ಗೆ ಹೇಳುತ್ತಿರುತ್ತಾರೆ. ನೀವು ಕನ್ನಡದವರು ಎಂದು ತಿಳಿದು ತುಂಬಾ ಸಂತೋಷವಾಯಿತು ಎಂದು ಹೇಳಿ ಹೋಗುತ್ತಾಳೆ. ಈಗ ಭಾಗ್ಯ ಕಕ್ಕಾಬಿಕ್ಕಿಯಾಗುತ್ತಾಳೆ.

ಇಲ್ಲೇನೋ ಎಡವಟ್ಟು ನಡೆಯುತ್ತಿದೆ ಎಂದು ಭಾಗ್ಯಳಿಗೆ ಎನ್ನಿಸಿದರೂ ಅದೇನು ಎಂದು ತಿಳಿಯುವುದೇ ಇಲ್ಲ. ತನ್ನನ್ನು ಬೇರೆ ಯಾರೋ ಎಂದು ಅಂದುಕೊಂಡಿದ್ದಾರೆ ಎನ್ನುವುದನ್ನೂ ತಿಳಿಯದೇ ಭಾಗ್ಯ ಫುಲ್​  ಕನ್​ಫ್ಯೂಸ್​ ಆಗುತ್ತಾಳೆ. ನಂತರ ಡ್ರೆಸ್​ ಮಾಡಿಕೊಳ್ಳಲು ಕೋಣೆಯೊಳಕ್ಕೆ ಹೋಗುತ್ತಾಳೆ. ಹೊಸ ಡ್ರೆಸ್​ನಲ್ಲಿ ಭಾಗ್ಯ ಹೇಗೆ ಕಾಣಿಸಬಹುದು ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದರೆ, ಈ ಭಗಾಯಾ ಯಾರು ಎಂಬ ಪ್ರಶ್ನೆ ಮೂಡುತ್ತಿದೆ. ಭಗಾಯಾ ಎಂಬಾಕೆಯನ್ನೇ ಭಾಗ್ಯ ಎಂದು ಅಂದುಕೊಂಡಿದ್ದಾರಾ? ಅವಳೇ ಎಂದುಕೊಂಡು ಭಾಗ್ಯಳಿಗೆ ಕೆಲಸ ಕೊಟ್ಟಿದ್ದಾರಾ ಎನ್ನುವ ಪ್ರಶ್ನೆ ಭಾಗ್ಯಲಕ್ಷ್ಮಿ ಸೀರಿಯಲ್​ ಫ್ಯಾನ್ಸ್  ಮುಂದಿದೆ. ಒಂದು ವೇಳೆ ಅಸಲಿ ಭಗಾಯಾ ಬಂದರೆ ಭಾಗ್ಯಳ ಕಥೆ ಏನಾಗುತ್ತದೆ? ಸುಳ್ಳು ಹೇಳಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಎಂದು ಅವಮಾನ ಮಾಡಲಾಗುತ್ತದೆಯೇ ಎಂಬ ಆತಂಕವೂ ಅಭಿಮಾನಿಗಳದ್ದು.

ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ಸಾರಾ ಅಲಿಖಾನ್​? ಸೈಫ್​ ಪುತ್ರಿಯ ಕೈಹಿಡೀತೀರೋದ್ಯಾರು?

ಅಷ್ಟಕ್ಕೂ ಭಾಗ್ಯ ಈಗಷ್ಟೇ ಎಸ್​ಎಸ್​ಎಲ್​ಸಿ ಮುಗಿಸಿದ್ದಾಳೆ.  ಇವಳು ಫೇಸ್​ ಆಗ್ತಾಳೆ ಎಂದುಕೊಂಡಿದ್ದ ತಾಂಡವ್​ಗೆ ಶಾಕ್​ ಆಗಿದೆ. ರಿಸಲ್ಟ್​ ನೋಡಲು ಶಾಲೆಗೆ ಹೊರಟಿದ್ದ ಭಾಗ್ಯಳನ್ನು ಅಣಕಿಸುವ ತಾಂಡವ್​, ಆನ್​ಲೈನ್​ನಲ್ಲಿಯೇ ರಿಸಲ್ಟ್​ ನೋಡಬಹುದು ಎಂದು ಹೇಳಿ, ಭಾಗ್ಯಳ ಹಾಲ್​ ಟಿಕೆಟ್​ ನಂಬರ್​ ಪಡೆಯುತ್ತಾನೆ. ಅದಕ್ಕೂ ಮೊದಲು ಆತ ನಿನ್ನ ರಿಸಲ್ಟ್​ ನನಗೆ ಗೊತ್ತಿದೆ. ಎಲ್ಲ ವಿಷಯಗಳಲ್ಲಿಯೂ ಫೇಲ್​ ಆಗಿರ್ತಿಯಾ ಎಂದು ಕೊಂಕು ಮಾತನಾಡುತ್ತಾನೆ. ಆದರೆ ರಿಸಲ್ಟ್​ ನೋಡಿ ಅವನಿಗೆ ಶಾಕ್​ ಆಗುತ್ತದೆ, ಎಲ್ಲ ವಿಷಯಗಳಲ್ಲಿಯೂ ಭಾಗ್ಯ ಉತ್ತಮ ಅಂಕ ಪಡೆದುಕೊಂಡಿರುತ್ತಾಳೆ. ತಾಂಡವ್​ ಬಿಟ್ಟು ಎಲ್ಲರಿಗೂ ಖುಷಿಯೋ ಖುಷಿ. ಅದೇ ಇನ್ನೊಂದೆಡೆ, ಭಾಗ್ಯ ಈ ಖುಷಿಯಲ್ಲಿ ಸ್ವೀಟ್​ ತಂದು ಎಲ್ಲರಿಗೂ ಹಂಚುತ್ತಾಳೆ.  ತಾಂಡವ್​  ಮುಖ ಮಾತ್ರ ಇಂಗು ತಿಂದ ಮಂಗನಂತಾಗಿರುತ್ತದೆ.  

ಅಷ್ಟಕ್ಕೂ ಅತ್ತೆ- ಸೊಸೆ ಇಬ್ಬರೂ ಅಕ್ಕ ಪಕ್ಕದ ಹೋಟೆಲ್​ನಲ್ಲಿಯೇ ಕೆಲಸಕ್ಕೆ ಸೇರಿರುತ್ತಾರೆ. ಆದರೆ ಅದು ಗೊತ್ತಿರುವುದಿಲ್ಲ. ಮನೆಯಲ್ಲಿ ಸುಳ್ಳು ಹೇಳಿ ಹೊರಟಿರುತ್ತಾರೆ. ಕೆಲಸಕ್ಕೆ ಹೊರಡುವ ಮುನ್ನ ಭಾಗ್ಯ ಇಬ್ಬರ ಆಶೀರ್ವಾದ ಪಡೆಯುತ್ತಾಳೆ.  ಆದರೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳುತ್ತಾಳೆ. ಇಬ್ಬರೂ ಬೆಳಿಗ್ಗೆ ಹೋಗಿ ಸಂಜೆ ಮನೆಗೆ ಬರುವುದನ್ನು ನೋಡುವ ತಾಂಡವ್​ ಮತ್ತು ಮನೆಯವರ ಎದುರು ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ ಈ ಅತ್ತೆ- ಸೊಸೆ ಎನ್ನುವುದು ಮುಂದಿರುವ ಕುತೂಹಲ.

ನೋಡ್ರೋ... ನಮ್ಮಕ್ಕ ಅದೃಷ್ಟ ಕಣ್ರೋ... ಅಪಶಕುನ ಅಲ್ಲ... ಅಶ್ವಿನಿ ಪರ ಫ್ಯಾನ್ಸ್​ ಬ್ಯಾಟಿಂಗ್​...

Latest Videos
Follow Us:
Download App:
  • android
  • ios