ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ಸಾರಾ ಅಲಿಖಾನ್​? ಸೈಫ್​ ಪುತ್ರಿಯ ಕೈಹಿಡೀತೀರೋದ್ಯಾರು?

ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ಸಾರಾ ಅಲಿ ಖಾನ್​? ಸೈಫ್​ ಪುತ್ರಿಯ ಕೈಹಿಡೀತೀರೋದ್ಯಾರು? 
 

Sara Ali Khan To Get Married This Year  Allegedly Already Engaged To A Businessman suc

ಸೈಫ್​ ಅಲಿ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಪುತ್ರಿಯಾಗಿರುವ ಬಾಲಿವುಡ್​ ನಟಿ  ಸಾರಾ ಅಲಿ ಖಾನ್ ಸದ್ಯ ಸಕತ್​ ಸುದ್ದಿ ಮಾಡುತ್ತಿರುವುದು   ಹಿಂದೂ  ಧರ್ಮದ ಪಾಲನೆ ಮಾಡುತ್ತಿರುವ ಕಾರಣದಿಂದ. ಆಗಾಗ್ಗೆ ದೇವಾಲಯಗಳಿಗೆ ಭೇಟಿ ಕೊಟ್ಟು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗುವುದೂ ಇದೆ. ಕೇದಾರನಾಥ, ಅಮರನಾಥ ಯಾತ್ರೆ ಮಾಡಿ ಬಂದಿದ್ದಾರೆ. ಶಿವಧ್ಯಾನದಲ್ಲಿಯೂ ತೊಡಗಿಸಿಕೊಂಡು ಅದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾಗ ಕೆಲವರು ಸಾಕಷ್ಟು ಟೀಕೆ ಕೂಡ ಮಾಡಿದ್ದರು. ಇದೀಗ ನಟಿ ಸದ್ದಿಲ್ಲದೇ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಭಾರಿ ಸುದ್ದಿಯಾಗುತ್ತಿದೆ. 

ಸಾರಾ ಅಲಿ ಖ್ಯಾತ ಉದ್ಯಮಿಯೊಬ್ಬರ ಕೈಹಿಡಿಯಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಇವರ ಬಗ್ಗೆ ಹೆಚ್ಚು ಮಾಹಿತಿ ಹೊರಬಂದಿಲ್ಲ. ಆದರೆ ಸಾರಾ ಅವರು, ಮಾಜಿ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಶಿಂಧೆ ಮೊಮ್ಮಗ ವೀರ್‌ ಪಹಾರಿಯಾ ಜೊತೆ ಡೇಟಿಂಗ್​ನಲ್ಲಿ ಇದ್ದಾರೆ ಎಂದೇ ಹೇಳಲಾಗುತ್ತಿದೆ. ಕರಣ್​ ಜೋಹರ್​ ಅವರ ಷೋನಲ್ಲಿ ಕೂಡ ಈ ವಿಷಯವನ್ನು ಕರಣ್​ ಪ್ರಸ್ತಾಪಿಸಿದ್ದರು. ಇನ್ನೋರ್ವ ಪುತ್ರ ಶಿಖರ್​ ಜೊತೆ ಜಾಹ್ನವಿ ಕಪೂರ್​ ಡೇಟಿಂಗ್​ನಲ್ಲಿ ಇರುವ ವಿಷಯವೇನೂ ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಸಾರಾ ವಿಷಯ ಮಾತ್ರ ಅಷ್ಟು ಪ್ರಚಲಿತವಾಗಲಿಲ್ಲ. ಆದ್ದರಿಂದ ಇವರನ್ನೇ ನಟಿ ವರಿಸಿದ್ದಾರಾ ಎನ್ನುವ ಸಂದೇಹ ಕಾಡತೊಡಗಿದೆ. ಅದಕ್ಕೂ ಮುನ್ನ ಸಾರಾ ಅಲಿ ಖಾನ್​, ಕ್ರಿಕೆಟಿಗ ಶುಭ್​ಮನ್ ಗಿಲ್​ ಜೊತೆ ನಟಿ ಸಾರಾ ಅಲಿ ಖಾನ್​ ಸಂಬಂಧದಲ್ಲಿದ್ದರು. ನಂತರ ಅದು ಬ್ರೇಕಪ್​ ಆಗಿತ್ತು. ಅಸಲಿ ವಿಷಯ ಇನ್ನಷ್ಟೇ ಹೊರಬಯಬೇಕಿದೆ. 

ಸಾನಿಯಾ ಮಿರ್ಜಾಗೆ ಮರು ಮದುವೆ: ಅರಬ್​ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್​ ನಟ ಹೇಳಿದ್ದೇನು?

ಅಂದಹಾಗೆ ಸಾರಾ ಅವರು ಸಿಂಪಲ್​ ಎಂದೇ ಖ್ಯಾತಿ ಪಡೆದವರು. ಸೋಲಿನ ಹಾದಿಯಲ್ಲಿದ್ದ ಸಾರಾ ಅಲಿ,  ಇತ್ತೀಚೆಗೆ ಬಿಡುಗಡೆಗೊಂಡ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಮೂಲಕ ಸುಧಾರಿಸಿಕೊಂಡಿದ್ದಾರೆ. ಹೀಗಿದ್ದರೂ ಆಕೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಈಕೆ ಫೋಟೋ ಮತ್ತು ಒಂದಿಷ್ಟು ಗಾಸಿಪ್​ಗಳಿಂದ ಎಷ್ಟೇ ಟ್ರೋಲ್​ ಆಗುತ್ತಿದ್ದರೂ ಈಕೆಯನ್ನು ಪ್ರೀತಿಸುವ ಒಂದು ವರ್ಗವೂ ಇದೆ. ಹೆಚ್ಚಿನವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕಳೆದ ವಾರ ಈಕೆ  ಬೀಚ್​ (Beach) ಒಂದರಿಂದ ಆಟೋದಲ್ಲಿ ಹೋದ ಸಂದರ್ಭದಲ್ಲಿಯೂ ಹಲವರು ಈಕೆಯ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೆ. ಅದಾದ ಬಳಿಕ ವೈರಲ್​ ಆಗಿದ್ದ ವಿಡಿಯೋದಲ್ಲಿ ನಟಿ, ನಡೆದುಕೊಂಡು ಹೋಗುವುದನ್ನು ನೋಡಬಹುದಾಗಿತ್ತು. ರಸ್ತೆ ಬದಿ ಅಂಗಡಿಯಲ್ಲಿ ಸಾಮಾನ್ಯರಂತೆ ತೆರಳಿ ಬಟ್ಟೆ ಖರೀದಿ ಮಾಡಿದ್ದರು. ಈ ವಿಡಿಯೋನ ಪಾಪರಾಜಿಗಳು ಹಂಚಿಕೊಂಡಿದ್ದರು. ಸಾರಾ ಅವರನ್ನು ಎಲ್ಲರೂ ಹೊಗಳಿದ್ದಾರೆ. ಈ ಸರಳತೆ ಹೀಗೆಯೇ ಮುಂದುವರಿಯಲಿ ಎಂದು ಅನೇಕರು ಹೇಳಿದ್ದರು. 

ಇನ್ನು ಸಾರಾ ಅಲಿ ಖಾನ್​ ಅವರನ್ನು ಹಿಂದೂ ಧರ್ಮಕ್ಕೆ ಬಂದುಬಿಡಿ ಎನ್ನುವ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಹಿಂದೂ ಧರ್ಮ ಪಾಲನೆ ಮಾಡುತ್ತಿರುವ ನಟಿಯ ವಿರುದ್ಧ ಕಿಡಿ ಕಾರುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿದ್ದ ಸಾರಾ ಫ್ಯಾನ್ಸ್​, ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ  ಎಂದಿದ್ದರು, ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದರು. ಸಾರಾ ಅಲಿ ಖಾನ್​ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಅಮರನಾಥ ಯಾತ್ರೆಗೆ ಹೋದ ಮೇಲೆ ಹಲವರು ಬಾಯಿ ಮುಚ್ಚಿದ್ದಾರೆ.   

ವಿರಾಟ್-ಅನುಷ್ಕಾ ತಮ್​​ ಫೋನ್​ನಲ್ಲಿ ಪರಸ್ಪರ ಹೆಸ್ರನ್ನು ಹೀಗೆ ಸೇವ್​ ಮಾಡಿಕೊಂಡಿದ್ದಾರಂತೆ!

Latest Videos
Follow Us:
Download App:
  • android
  • ios