ಕುಂಭಮೇಳದ ಸಾಧು, ಸಂತರನ್ನು ಬಿಟ್ಟು ಮೊನಲಿಸಾಳ ಹಿಂದೆ ಹೋಗ್ತಿರೋ ಮಾಧ್ಯಮದ ವಿರುದ್ಧ ಗುಡುಗಿದ ಪ್ರಥಮ್
ಕುಂಭಮೇಳದಲ್ಲಿ ಸಾಧು, ಸಂತರನ್ನು ಬಿಟ್ಟು ರುದ್ರಾಕ್ಷಿ ಮಾರುವ ಮೊನಲಿಸಾಳಹಿಂದೆ ಓಡುತ್ತಿರುವ ಮಾಧ್ಯಮದ ವಿರುದ್ಧ ಒಳ್ಳೆಹುಡುಗ ಪ್ರಥಮ್ ಗುಡುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿನ ಅವರ ಪೋಸ್ಟ್ ಸದ್ಯ ವೈರಲ್ ಆಗ್ತಿದೆ.

ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ (Kumbhmela) ಭಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಲಕ್ಷಾಂತರ ಜನ ಕುಂಭಮೇಳದ ಸಂಭ್ರಮದಲ್ಲಿ ಭಾಗಿಯಾಗಲು ದೇಶ, ವಿದೇಶದ ಮೂಲೆ ಮೂಲೆಯಿಂದ ಜನ ಬರುತ್ತಿದ್ದಾರೆ. ಅಲ್ಲಿನ ವ್ಯವಸ್ಥೆಯ ಕುರಿತು ಕೂಡ ದೇಶದೆಲ್ಲೆಡೆ ಮಾತು ಕೇಳಿ ಬರುತ್ತಿದೆ. ಅಷ್ಟೇ ಅಲ್ಲ ನಾಗ ಸಾಧುಗಳನ್ನು ನೋಡಲು ಸಹ ಜನಸ್ತೋಮ ಸೇರಿದೆ. ಬೇರೆ ಬೇರೆ ರೀತಿಯ ನಾಗ ಸಾಧುಗಳು, ಸಾಧು ಸಂತರು ಈ ಮಹಾ ಕುಂಭಮೇಳದ ಭಾಗವಾಗಿದ್ದಾರೆ. ಆದರೆ ಇದೆಲ್ಲದರ ನಡುವೆ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಇದೀಗ ಸೋಶಿಯಲ್ ಮೀಡಿಯಾ (social media) ಸೆನ್ಸೇಶನ್ ಆಗಿದ್ದಾರೆ.
ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾ ಪೂರ್ತಿಯಾಗಿ ಮೊನಲಿಸಾಳದ್ದೆ (Monalisa of Kumbh) ಸುದ್ದಿ. ಕುಂಭಮೇಳದಲ್ಲಿ ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ, ತನ್ನ ಬಟ್ಟಲು ಕಣ್ಣುಗಳ ಮೂಲಕ ಜನರ ಮನಸ್ಸು ಸೆಳೆದಿದ್ದರು. ಒಂದೇ ಸಲಕ್ಕೆ ಆಕೆ ಎಷ್ಟೊಂದು ವೈರಲ್ ಆಗಿಬಿಟ್ಟಳು ಅಂದ್ರೆ, ಆಕೆಯ ಫೋಟೊ, ರೀಲ್ಸ್, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಪ್ರಾರಂಭಿಸಿದವು. ದಿನಬೆಳಗಾಗುವುದರೊಳಗೆ ಆಕೆ ಎಷ್ಟೊಂದು ಜನಪ್ರಿಯತೆ ಪಡೆದಳು ಅಂದ್ರೆ, ಆಕೆಯನ್ನು ನೋಡಲೆಂದೇ ಕುಂಭಮೇಳಕ್ಕೆ ಸೇರಿದ ಜನರು ಹೋಗೋದು ಹೆಚ್ಚಾಗಿದೆ. ಆಕೆ ಕುಂತರೂ, ನಿಂತರೂ ಬಿಡದೆ ಹಿಂದೆ ಹಿಂದೆ ಅಲೆದು ಆಕೆಯ ಫೋಟೊ ತೆಗೆಯಲು, ಆಕೆಯ ವಿಡಿಯೋ ಮಾಡಲು ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ಆಕೆಯ ಅಣ್ಣ, ಅಕ್ಕ, ತಂಗಿಯರ ಫೋಟೋ, ಸಂದರ್ಶನ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿದೆ. ಮೊನಲಿಸಾ ಏನು ಮಾಡುತ್ತಾಳೆ, ಆಕೆಯ ಮನೆ ಎಲ್ಲಿ ಎಲ್ಲಾ ಮಾಹಿತಿಗಳನ್ನು ಬೇಕಾಬಿಟ್ಟಿಯಾಗಿ ಹರಿಬಿಡುತ್ತಿದ್ದಾರೆ ಜನ.
ಕೊನೆಗೆ ಮೊನಲಿಸಾ ಪರಿಸ್ಥಿತಿ ಹೇಗಾಯ್ತು ಅಂದರೆ, ಆಕೆಯ ಬಳಿ ಸರ ಖರೀದಿಸಲು ಬರುವವರ ಸಂಖ್ಯೆ ಕಡಿಮೆಯಾಗಿ, ಆಕೆಯ ಜೊತೆ ರೀಲ್ಸ್, ವಿಡಿಯೋ ಮಾಡಲು ಬರುವವರ, ಸೆಲ್ಫಿ (selfie) ತೆಗೆದುಕೊಳ್ಳಲು ಬರುವರ ಸಂಖ್ಯೆ ಅತಿಯಾಗಿ, ಆಕೆ ಮುಖ ಮುಚ್ಚಿಕೊಂಡು ಓಡಾಡುವಂತಾಯಿತು, ಕೊನೆಗೆ ಹೆಚ್ಚಿನ ಸಮಸ್ಯೆ ಉಂಟಾಗಿ ಆಕೆಯನ್ನು ಮನೆಗೆ ಕಳುಹಿಸಲಾಗಿದೆ. ಇದೀಗ ಇದೇ ವಿಷ್ಯದ ಬಗ್ಗೆ ಕನ್ನಡ ಬಿಗ್ ಬಾಸ್ ವಿನ್ನರ್ (Kannada Bigg Boss Winner) ಹಾಗೂ ನಟನಾಗಿರುವ ಒಳ್ಳೆ ಹುಡುಗ ಪ್ರಥಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂದೇಶ ಒಂದನ್ನು ಬರೆದು ಕಿಡಿಕಾರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಥಮ್ (Olle Huduga Pratham) ‘ಸಾಧು ಸಂತರನ್ನ ತೋರಿಸಿ ಅಂದ್ರೆ ಸರ ಮಾರೋಳನ್ನ super model ಅಂತ 24 ಗಂಟೆ ತೋರಿಸ್ತಾ ಇದರಲ್ಲಾ, ನಮ್ ದೇಶ ಹೆಂಗಪ್ಪ ಉದ್ಧಾರ ಆಗುತ್ತೆ? ಎಂದಿದ್ದಾರೆ. ಅಷ್ಟೇ ಅಲ್ಲ ಕೋಟಿ ಜನ ಸೇರೋ ಕುಂಭಮೇಳದ ವಿಡಿಯೋ ತೋರಿಸಿ ಅಂದ್ರೆ, ಅದ್ಯಾರೋ ಮೊನಾಲಿಸಾ ಹಿಂದೆ ಬಿದ್ದು, ಆಕೆ ಕ್ಯಾಮೆರಾ ಕಿತ್ತು ಬಿಸಾಕೋವರೆಗೂ ಅವಳಲ್ಲ ಬಿಡಲಿಲ್ಲ ನಮ್ ಜನ. ಮೊಘಲರ ನಡುಗಿಸಿದ ನಾಗ ಸಾಧುಗಳನ್ನು ತೋರಿಸಿ ಅಂದ್ರೆ, ಸರ ಮಾರೋಳನ್ನು ಮಾಡೆಲ್ ಅಂತ ತೋರಿಸ್ತಿದ್ದಾರೆ ಈ ಮೀಡಿಯಾ. ಇನ್ನು ಈ ದೇಶ ಉದ್ಧಾರ ಆಗು ಅಂದ್ರೆ ಹೆಂಗಪ್ಪಾ ಎಂದು ಮೀಡಿಯಾ ವಿರುದ್ಧ ಕಿಡಿ ಕಾರಿದ್ದಾರೆ.