ಕನ್ನಡದಲ್ಲಿ ಕೊನೆಯ ಶೋ ಎಂದ ಸುದೀಪ್ ತೆಲಗು ಬಿಗ್‌ಬಾಸ್‌ನಲ್ಲಿ! ವೈರಲ್ ವಿಡಿಯೋಗೆ ಫ್ಯಾನ್ಸ್ ಶಾಕ್
ತೆಲಗು ಬಿಗ್‌ಬಾಸ್‌ನಲ್ಲಿ ನಟ ಸುದೀಪ್ ಅವರು ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅಲ್ಲಿರುವ ಯುವತಿಯೊಬ್ಬರು ನೀವು ನನಗೆ ತುಂಬಾ ಇಷ್ಟ ಎಂದಾಗ ಸುದೀಪ್ ನಾಚಿ ನೀರಾಗಿದ್ದಾರೆ!
ಕನ್ನಡದ ಬಿಗ್‌ಬಾಸ್‌ನಲ್ಲಿ ಹತ್ತು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿ ಹನ್ನೊಂದನೆಯ ಸೀಸನ್ ಅನ್ನು ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್, ಇದೇ ತಮ್ಮ ಕೊನೆಯ ಸೀಸನ್ ಎಂದು ಹೇಳುವ ಮೂಲಕ ಇದಾಗಲೇ ಅಸಂಖ್ಯ ಅಭಿಮಾನಿಗಳಿಗೆ ಶಾಕ್ ಜೊತೆ ನೋವನ್ನೂ ನೀಡಿದ್ದಾರೆ. ನೀವಿದ್ದರಷ್ಟೇ ಬಿಗ್‌ಬಾಸ್, ದಯವಿಟ್ಟು ನೀವೇ ಮುಂದುವರೆಯಬೇಕು, ನಿಮ್ಮ ಜಾಗದಲ್ಲಿ ಯಾರನ್ನೂ ಊಹಿಸಿಕೊಳ್ಳಲು ಆಗುವುದಿಲ್ಲ ಎಂದೆಲ್ಲಾ ಇದಾಗಲೇ ಬಿಗ್‌ಬಾಸ್ ಪ್ರೇಮಿಗಳು ಗೋಗರೆಯುತ್ತಲೂ ಇದ್ದಾರೆ. ಇದರ ನಡುವೆಯೇ, ಸುದೀಪ್ ಅವರು ತೆಲಗು ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಸೃಷ್ಟಿಸುತ್ತಿದೆ. ಕನ್ನಡದಲ್ಲಿ ಕೊನೆಯ ಶೋ ಎಂದ ಸುದೀಪ್, ತೆಲಗುಗೆ ಎಂಟ್ರಿ ಕೊಡಲಿದ್ದಾರಾ ಎಂದು ಹಲವರು ಅನುಮಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಅಸಲಿಯತ್ತು ಇದಲ್ಲ. ಇದು ತೆಲಗು ಬಿಗ್‌ಬಾಸ್‌ನ 2020ರಲ್ಲಿ ನಡೆದ ಶೋ. ನಾಗಾರ್ಜುನ ಅವರು ನಡೆಸಿಕೊಡುತ್ತಿದ್ದ ಈ ಶೋನಲ್ಲಿ, ಸುದೀಪ್ ಅವರು ಅತಿಥಿಯಾಗಿ ಕಾಣಿಸಿಕೊಂಡಿದ್ದರಷ್ಟೇ. ಆ ವಿಡಿಯೋ ಪುನಃ ಈಗ ಕಾಣಿಸಿಕೊಂಡಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಸುದೀಪ್ ತೆಲಗು ಕೂಡ ಚೆನ್ನಾಗಿ ಮಾತನಾಡುತ್ತಾರೆ. ಅದೇ ರೀತಿ, ತೆಲಗು ಬಿಗ್‌ಬಾಸ್‌ನಲ್ಲಿಯೂ ಪ್ರತಿ ಬಾರಿಯೂ ಕನ್ನಡದ ಮೂಲಕ ಸ್ಪರ್ಧಿಗಳೇ ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಈ ಬಾರಿಯ ಸೀಸನ್‌ನಲ್ಲಿ ಕೂಡ ಕನ್ನಡಿಗರದ್ದೇ ಕಾರುಬಾರು. ಕನ್ನಡಿಗರು ಕನ್ನಡದಲ್ಲಿ ಮಾತನಾಡಿ ಇದಾಗಲೇ ಕನ್ನಡಾಭಿಮಾನಿಗಳಿಗೆ ಸಂತಸ ನೀಡಿದ್ದಾರೆ. ಅದೇ ರೀತಿ ಇದು ಹಳೆಯ ವಿಡಿಯೋ ಆಗಿದ್ದು, ಅಲ್ಲಿ ಸುದೀಪ್ ಅವರು ತೆಲಗು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ವೈಷ್ಣವಿ ಗೌಡ ಬಾಲಿವುಡ್‌ಗೆ ಎಂಟ್ರಿ? ತೂಕ ಇಳಿಸೋ ಟಿಪ್ಸ್ ಕೊಡುತ್ತಲೇ ಮನದ ಮಾತು ತೆರೆದಿಟ್ಟ 'ಸೀತಾ'
ಇದು ವಾರಾಂತ್ಯದ ಶೋ ಆಗಿತ್ತು. ಬಿಗ್‌ಬಾಸ್ ನಡೆಸಿಕೊಡುವ ನಾಗಾರ್ಜುನ ಅವರ ಬರುವಿಕೆಯನ್ನು ಸ್ಪರ್ಧಿಗಳು ಕಾಯುತ್ತಿದ್ದರೆ, ಅಲ್ಲಿ ಬಂದದ್ದು ಸುದೀಪ್! ಇವರನ್ನು ನೋಡಿ ಸ್ಪರ್ಧಿಗಳು ಶಾಕ್ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸ್ಪರ್ಧಿಗಳು ನಾಗಾರ್ಜುನ ಅವರ ಬಗ್ಗೆ ಪ್ರಶ್ನಿಸಿದಾಗ ಸುದೀಪ್, ಅವರು ಮನೆಗೆ ಹೋಗಿದ್ದಾರೆ. ಅವರೇ ನಿಮಗೆ ಏಕೆ ಬೇಕು ಎಂಬುದಕ್ಕೆ ಒಂದು ಕಾರಣ ಕೊಡಿ ಎಂದಾಗ ಸ್ಪರ್ಧಿಗಳು 'ನಾವೆಲ್ಲರೂ ನಾಗಾರ್ಜುನ ಅವರನ್ನು ಪ್ರೀತಿ ಮಾಡುತ್ತೇವೆ. ಅದಕ್ಕೇ ಬೇಕು' ಎಂದಾಗ ನಾಗಾರ್ಜುನ ಎಂಟ್ರಿ ಕೊಡುತ್ತಾರೆ. ಅವರನ್ನು ನೋಡಿ ಸ್ಪರ್ಧಿಗಳು ಖುಷಿ ಪಡುತ್ತಾರೆ.
ಬಳಿಕ ಅಲ್ಲಿ ಇದ್ದ ಸ್ಪರ್ಧಿಗಳಲ್ಲಿ ಒಬ್ಬರು ಕನ್ನಡ ಮಾತನಾಡುವ ಕಾರಣ ಸುದೀಪ್ ಅವರ ಬಳಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ. 'ಚೆನ್ನಾಗಿದ್ದೀರಾ ಸರ್' ಎಂದು ಸುದೀಪ್ ಅವರು ಕೇಳಿದ್ದಾರೆ. ನಂತರ ಅಲ್ಲಿಯೂ ತಮ್ಮ ಹಾಸ್ಯಪ್ರಜ್ಞೆಯನ್ನು ಮೆರೆದಿದ್ದಾರೆ ಸುದೀಪ್. ಕೊನೆಯ ಲೇಡಿಯೊಬ್ಬರು ನನಗೆ ನೀವೆಂದ್ರ ನನಗೆ ತುಂಬಾ ಇಷ್ಟ ಎಂದಾಗ ಸುದೀಪ್ ನಾಚಿ ನೀರಾಗಿದ್ದಾರೆ. ಇದನ್ನು ವಿಡಿಯೋದಲ್ಲಿ ನೋಡಬಹುದು.
ಭಾಗ್ಯ- ತಾಂಡವ್ ಒಂದಾಗ್ತಾರಾ? ವೀಕ್ಷಕರ ಪ್ರಶ್ನೆಗೆ ನೇರಪ್ರಸಾರದಲ್ಲಿ ಬಂದ ಪೂಜಾ ಹೇಳಿದ್ದೇನು?