ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ನಂತರ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ನಿವೇದಿತಾ ಗೌಡ ದಿನೇ ದಿನೆ ಯಾವುದಾದರೂ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಪತಿ ಜೊತೆ ಇಲ್ಲವಾದರೆ, ತಾವು ಮಾಡಿಕೊಂಡ ಎಡವಟ್ಟಿನಿಂದ ಹೆಡ್‌ಲೈನ್‌ ಆಗುತ್ತಿದ್ದ ನಿವೇದಿತಾ, ಈಗ ಅತ್ತೆ ಜೊತೆ ಕಿರಿಕ್ ಮಾಡಿಕೊಂಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

ಮಾಸ್ಕ್‌ನಲ್ಲೂ ಸ್ಟೈಲ್; ನಿವೇದಿತಾ ಗೌಡಾಗೆ ಟ್ರೋಲಿಗರ ಕಾಟ, ಕಾಲೆಳೆದ ನೆಟ್ಟಿಗರಿಂದ? 

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಚಂದನ್ ಹಾಗೂ ನಿವೇದಿತಾ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇಬ್ಬರೇ ಇದ್ದರೆ ಮನೆಯಲ್ಲಿ ಬೋರ್‌ ಆಗುತ್ತದೆ ಎಂಬ ಕಾರಣಕ್ಕೆ Shih Tzu ತಳಿಯ ನಾಯಿಯೊಂದನ್ನು ಸಾಕಿದ್ದಾರೆ. ನಿವಿ ಹಾಗೂ ಚಂದು ತಮ್ಮ ನಾಯಿಗೆ ಪ್ರೀತಿಯಿಂದ ಆ್ಯಪಲ್ ಎಂದು ಕರೆಯುತ್ತಾರೆ. ಆ್ಯಪಲ್‌ ಕೂಡ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದು, ಎರಡೂವರೆ ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದೆ.

ಏನಿದು ವಿಡಿಯೋ?:
ಸಮಯಕ್ಕೆ ಸರಿಯಾಗಿ ನಿವೇದಿತಾ ಊಟ ಮಾಡುವುದಿಲ್ಲ ಎಂದು ಚಂದನ್ ತಾಯಿ ತಮಾಷೆಗಾಗಿ ನಿವೇದಿತಾಗೆ ಹೊಡೆಯುತ್ತಾರೆ. ಇವರಿಬ್ಬರ ನಡುವೆ ಆ್ಯಪಲ್‌ ಬಂದು ನಿವೇದಿತಾಳನ್ನು ಬಚಾವ್‌ ಮಾಡಲು ಪ್ರಯತ್ನಿಸುತ್ತದೆ. ಚಂದನ್‌ ತಾಯಿಗೆ ಕಚ್ಚಲು ಮುಂದಾಗುತ್ತದೆ. 

ಕುಟುಂಬಕ್ಕೆ ಹೊಸ ಅತಿಥಿ ಬರ ಮಾಡಿಕೊಂಡ ನಿವೇದಿತಾ; ಚಂದನ್ ಗಿಫ್ಟ್! 

ನೆಟ್ಟಿಗರ ಕಮೆಂಟ್:
ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರ ಕಾಮೆಂಟ್ಸ್‌ ಕೂಡ ಹೆಚ್ಚಾಗಿದೆ. 'ಚಂದನ್ ತರ ಓವರ್ ಆ್ಯಕ್ಟಿಂಗ್', 'ಪ್ರಾಣಿಗಳ ಪ್ರೀತಿನೇ ಬೆಸ್ಟ್', 'ಸಾಕು ಬಿಡವ್ವ..' ಎಂದೆಲ್ಲಾ ಹೇಳಿ ಕಾಲೆಳೆದಿದ್ದಾರೆ.