ಮಾಸ್ಕ್‌ನಲ್ಲೂ ಸ್ಟೈಲ್; ನಿವೇದಿತಾ ಗೌಡಾಗೆ ಟ್ರೋಲಿಗರ ಕಾಟ, ಕಾಲೆಳೆದ ನೆಟ್ಟಿಗರಿಂದ?

ಬಿಗ್ ಬಾಸ್ ಬಾರ್ಬಿ ಡಾಲ್, ಸೋಷಿಯಲ್ ಮೀಡಿಯಾ ಸ್ಟೈಲ್ ಐಕಾನ್ ನಿವೇದಿತಾ ಗೌಡ ಮತ್ತೊಮ್ಮೆ ಟ್ರೋಲ್ ಅಗಿದ್ದಾರೆ. ಯಾವ ಕಾಮಿಡಿ ವಿಡಿಯೋ ಅಥವಾ ಹೇಳಿಕೆಗಲ್ಲ...ಈ ಮಾಸ್ಕಿನಿಂದ.
 

Bigg boss niveditha gowda trolled for wearing net mask vcs

ಬಿಗ್ ಬಾಸ್‌ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್, ಚಂದನ್ ಮುದ್ದಿನ ಮಡದಿ ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದು, ಸದಾ ವಿಭಿನ್ನವಾದ ಫೋಟೋ, ವಿಡಿಯೋ ಶೇರ್ ಮಾಡಿಕೊಂಡು ಫಾಲೋವರ್ಸ್‌ ಅನ್ನು ಎಂಗೇಜ್‌ ಆಗಿಟ್ಟಿರುತ್ತಾರೆ.

ನಿವೇದಿತಾ-ಚಂದನ್ ಶೆಟ್ಟಿ ಪೋಸ್ಟ್ ವೆಡ್ಡಿಂಗ್, ದೀಪಾವಳಿ ಫೋಟೋ ಶೂಟ್‌ ಹೇಗಿದೆ ನೋಡಿ! 

ಇತ್ತೀಚಿಗೆ ಮೊದಲ ದೀಪಾವಳಿ ಆಚರಣೆಯನ್ನು ಅದ್ಧೂರಿಯಾಗಿ ಮಾಡಿದ ಚಂದನ್ ದಂಪತಿ, ಪೋಸ್ಟ್‌ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಬಾರ್ಬಿ ಡಾಲ್‌ ರೀತಿಯ ದೊಡ್ಡ ಗೌನ್ ಧರಿಸುವುದು ನಿವೇದಿತಾ ಟ್ರೇಡ್ ಮಾರ್ಕ್‌. ಇನ್ನು ಕೊರೋನಾ ಅಂದ್ಮೇಲೆ ಸುಮ್ಮನೆನಾ? ಮಾಸ್ಕ್‌ಗೂ ಏನಾದರೂ ವಿನ್ಯಾಸ ಮಾಡಿಸಬೇಕು ಅಲ್ವಾ? ಹೌದು ಅದನ್ನ ಮಾಡಿಯೇ ಎಡವಟ್ಟು ಮಾಡಿಕೊಂಡಿದ್ದಾರೆ.

Bigg boss niveditha gowda trolled for wearing net mask vcs

ಟ್ರಾನ್ಸಪರೆಂಟ್ ರೀತಿಯಲ್ಲಿ ಮಾಸ್ಕ್‌ಗೆ bow ಹಾಕಿಸಿ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ. ಟ್ರೋಲ್ ಪೇಜ್‌ಗಳು ಈ ಫೋಟೋ ಶೇರ್ ಮಾಡಿ ನಿವೇದಿತಾ ಕಾಲೆಳೆಯುತ್ತಿದ್ದಾರೆ. 'ಈ ರೀತಿಯ ಮಾಸ್ಕ್ ಯಾವ ರಕ್ಷಣೆಯೂ ನೀಡುವುದಿಲ್ಲ', 'ರಕ್ಷಣೆಯನ್ನು ಶೋಕಿ ಮಾಡಿಕೊಂಡಿದ್ದಾರೆ ಜನರು' ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. 

ಫೋರ್ಕ್‌ನಲ್ಲಿ ಮುದ್ದೆ ತಿಂದ ನಿವೇದಿತಾ ಗೌಡ; ನೆಟ್ಟಿಗರಿಂದ ಫುಲ್ ಟ್ರೋಲ್! 

ಕೆಲವು ದಿನಗಳ ಹಿಂದೆ ಮಜಾ ಟಾಕೀಸ್ ಶೋನಲ್ಲಿ ನಿವೇದಿತಾ ಮುದ್ದೆಯನ್ನು ಫೋರ್ಕ್‌ನಲ್ಲಿ ತಿಂದು ಟ್ರೋಲ್ ಆಗಿದ್ದರು. ಅಲ್ಲದೇ ಚಂದನ್‌ಗೆ ಟೇಬಲ್ ಮ್ಯಾನ್ಸರ್ಸ್ ಹೇಳಿಕೊಟ್ಟಿದ್ದೀರಾ? ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಗೌಡರ ಹುಡುಗಿಯಾಗಿ ಕೈಯಲ್ಲಿ ಮುದ್ದೆ ತಿಂದಿಲ್ಲ ಅಂದ್ರೆ ಇದನ್ನ ಏನಂತ ಹೇಳಬೇಕು ಎಂದು ಟೀಕೆ ಮಾಡಿದ್ದಾರೆ.  ಒಟ್ಟಿನಲ್ಲಿ ನಿವೇದಿತಾ ಯಾವುದಾದರೂ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಉದ್ದ ಕೂದಲು ಗೌನ್‌ನಂಥ ಡ್ರೆಸ್ ಜೊತೆ ಟ್ರೋಲ್ ಆಗುವುದೂ ನಿವೇದಿತಾ ಟ್ರೇಡ್ ಮಾರ್ಕ್ ಆಗುತ್ತಿದೆ. 

Latest Videos
Follow Us:
Download App:
  • android
  • ios