ಸೀದೋಗಿರೋ ಚಿಕನ್: Niveditha Gowda ಅಡುಗೆ ನೋಡಿ ತಲೆ ಸುತ್ತಿಬಿದ್ದ ಪತಿ ಚಂದನ್ ಶೆಟ್ಟಿ?
ಯೂಟ್ಯೂಬ್‌ಗಾಗಿ ಅಡುಗೆ ಮಾಡುವ ನಿವೇದಿತಾ ಗೌಡ. ವಾರ ವಾರವೂ ಮನೆಗೆ ಬನ್ನಿ ಎಂದ ಚಂದನ್ ಶೆಟ್ಟಿ...
ಕನ್ನಡ ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ (Niveditha Gowda) ರಿಯಾಲಿಟಿ ಶೋ ಜೊತೆಗೆ ಯೂಟ್ಯೂಬ್ ನಡೆಸಿಕೊಂಡು ಹೋಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಬ್ಯೂಟಿ ಬಗ್ಗೆ ಅದೆಷ್ಟು ಮಾತನಾಡುವುದು ಎಂದು ಈಗ ಅಡುವೆ ಮಾಡುವುದಕ್ಕೂ ಶುರು ಮಾಡಿದ್ದಾರೆ. ಇಷ್ಟು ದಿನ ಸಿಂಪಲ್ ಆಗಿರುವ ರೆಸಿಪಿ ಟ್ರೈ ಮಾಡಿರುವ ನಿವಿ ಮೊದಲ ಬಾರಿಗೆ ಚಂದನ್‌ಗಾಗಿ ಚಟ್‌ಪಟಾ ಚಿಕನ್ (Chatpatta chicken) ತಯಾರಿಸಿದ್ದಾರೆ.
'ಇದೇ ಮೊದಲು ನಾನು ವೆಚ್ ತಯಾರಿಸುತ್ತಿರುವುದು. ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿದಾಗ ತುಂಬಾನೇ ಸಿಂಪಲ್ ಆಗಿತ್ತು ಮಾಡುವಾಗ ಹೇಗಿರುತ್ತದೆ ನೋಡಬೇಕು. ಮೊದಲು ಚಿಕನ್ ಚೆನ್ನಾಗಿ ತೊಳೆಯಬೇಕು. ನನಗೆ ಚಿಕನ್ ತೊಳೆಯುವುದು ಅಂದ್ರೆ ಇಷ್ಟನೇ ಇಲ್ಲ ಅದನ್ನು ಹೇಗೆ ತೊಳೆಯಬೇಕು ಎಂದು ನನಗೆ ಗೊತ್ತಿಲ್ಲ ಇವತ್ತು ಚಿಕನ್ ಅಡುಗೆ ಮಾಡಬಹುದು ಆದರೆ ಅದನ್ನು ತೊಳೆಯುತ್ತಿರುವುದು ಇದೇ ಮೊದಲು. ನಾನು ಸೂಪರ್ ಆಗಿ ಮಾಡುತ್ತೀನಿ ಚಂದನ್ ಏನೂ ಮಾಡುವುದಿಲ್ಲ ಅಡುಗೆ ಮಾಡುವಾಗ ಅದರ ಮೇಲಿರುವ ಎಲ್ಲಾ ಕ್ರಿಮಿಗಳು ಸಾಯುತ್ತದೆ ಎಂದು ಹೇಳುತ್ತಾರೆ' ಎಂದು ನಿವೇದಿತಾ ಗೌಡ ಮಾತನಾಡಿದ್ದಾರೆ.
'ಯೂಟ್ಯೂಬ್ ವಿಡಿಯೋ ಮಾಡುವವರು ಆಗಾಗ ನಮ್ಮ ಮನೆಗೆ ಬರಬೇಕು. ವಾರಕ್ಕೆ ನಾಲ್ಕು ದಿನ ಆದರೂ ಅಡುಗೆ ವಿಡಿಯೋ ಮಾಡಬೇಕು ಹಂಗಾದರೂ ನಮ್ಮ ಮನೆಯಲ್ಲಿ ಒಲೆ ಹತ್ತುತ್ತೆ. ಅಡುಗೆ ಮಾಡಿ ಮಾಡಿ ನನಗೆ ಸಾಕಾಗಿದೆ. ನನ್ನ ಹೆಂಡತಿ ಚಿಕನ್ ಕ್ಲೀನ್ ಮಾಡುವುದನ್ನು ನೀವು ನೋಡಬೇಕು ಅದು ಸೇಮ್ ಚಿಕನ್ ಮಜಾಸ್ ಮಾಡುತ್ತಿರುವ ರೀತಿ ಇದೆ. ಇಷ್ಟೊಂದು ಸ್ಲೋ ಮಾಡಿದ್ದರೆ ತಿನ್ನುವ ಮನಸ್ಸು ಹೋಗುತ್ತದೆ. ಇದು ಚಟ್‌ಪಟಾ ಚಿಕನ್ ಅಲ್ಲ ಮಸಾಜ್ ಚಿಕನ್' ಎಂದು ಚಂದನ್ ಹೇಳುತ್ತಾರೆ.
ಫ್ಯಾಮಿಲಿ ಪ್ಲಾನಿಂಗ್, ಸಂಬಳ ಮತ್ತು ಚಂದನ್ ಎಲ್ಲಿ? ಟ್ರೋಲಿಗರಿಗೆ ಉತ್ತರ ಕೊಟ್ಟ Niveditha Gowda
'ಕೋಳಿ ಸತ್ತಿರುತ್ತೋ ಇಲ್ವೋ ಆದರೆ ಅದನ್ನು ತೊಳೆದು ತೊಳೆದು ನಾನೇ ಸಾಯಿಸಿರುವೆ' ಎಂದು ಹೇಳುವ ಮೂಲಕ ಏನೆಲ್ಲಾ ಹಾಕಬೇಕು ಎಂದು ತೋರಿಸಿದ್ದಾರೆ. ಅಳತೆ ಮಾಡಿ ಅಡುಗೆ ಪುಡಿ ಹಾಕುತ್ತಿರುವುದನ್ನು ನೆಟ್ಟಿಗರು ನೋಡಿ ಶಾಕ್ ಆಗಿದ್ದಾರೆ. ತಪ್ಪಾದರೆ ಏನಂದುಕೊಳ್ಳುತ್ತಾರೋ ಅಂತ 'ಚಿಕನ್‌ಗೆ ಮಸಾಲ ಜಾಸ್ತಿ ಆದ್ರೂ ಏನೂ ಸಮಸ್ಯೆ ಇಲ್ಲ ರುಚಿ ಚೆನ್ನಾಗಿರುತ್ತೆ' ಎಂದಿದ್ದಾರೆ.
'ಮನೆಯಲ್ಲಿ ಏನಾದರೂ ಮಾಡಿಕೊಂಡು ತಿನ್ನಬೇಕು ಅನಿಸುತ್ತದೆ ಆಗ ಈ ಸುಲಭ ರೆಸಿಪಿ ಮಾಡಬಹುದು. ಏನೇ ಆರ್ಡರ್ ಮಾಡ್ತೀವಿ ಅಂದ್ರೂ ಬರೋಕೆ ಸಮಯ ತೆಗೆದುಕೊಳ್ಳುತ್ತದೆ. 30 ನಿಮಿಷ ಬಿಟ್ಟು ಆಮೇಲೆ ಬಿಸಿ ತವಾ ಮೇಲೆ ಹಾಕಬೇಕು' ಎಂದು ಟ್ರೈ ಮಾಡುತ್ತಿರುವುದನ್ನು ತೋರಿಸಿದ್ದಾರೆ. ಅಡುಗೆ ಆದ ಮೇಲೆ ನಾನು ಚಪ್‌ಪಟಾ ಚಿಕನ್ ಮಾಡಿಲ್ಲ ಸಿದೋಗಿರುವ ಚಿಕನ್ ಮಾಡಿರುವೆ ಎಂದಿದ್ದಾರೆ.
ಹೇರ್ ಕ್ಲಿಪ್‌ಗಾಗಿ ಮಧ್ಯರಾತ್ರಿ ಪಕ್ಕದ ಮನೆ ಬಾಗಿಲು ಬಡಿದ ನಿವೇದಿತಾ ಗೌಡ!
ಚಿಕನ್ ರುಚಿ ನೋಡಿದ ಚಂದನ್ (Chandan Shetty) 'ಚಿಕನ್ ಸೂಪರ್ ಆಗಿದೆ. ರುಚಿ ಇದೆ. ಸಖತ್ ಆಗಿದೆ. ಇದರ ಜೊತೆ ಕುಡಿಯುವುದಕ್ಕೆ ಏನಾದರೂ ಇದ್ದರೆ ಇನ್ನೂ ಚೆನ್ನಾಗಿ ಇರುತ್ತದೆ. ನಿಜವಾಗಲ್ಲೂ ನನ್ನ ಹೆಂಡತಿ ಚೆನ್ನಾಗಿ ಮಾಡಿಲ್ಲ. ನಾನು ಸುಕ್ಕಾ ಪಾರ್ಟಿ ಹಾಡು ಮಾಡಿದ್ದೆ ಈಗ ಇದು ಸುಕ್ಕಾ ಚಿಕನ್. ಆಗಾಗ ಮಾಡು ಅಂದ್ರೆ ಮಾಡೋಲ್ಲ ಯೂಟ್ಯೂಬ್‌ಗೆ ಇದೆಲ್ಲಾ ಮಾಡ್ತೀಯಾ. ಯಾವಾಗಲೂ ಒಂದು ಸಲ ಟ್ಯಾಲೆಂಟ್ ತೋರಿಸಬಾರದು ಪದೇ ಪದೇ ಮಾಡಬೇಕು' ಎಂದು ಫುಡ್ ಎಂಜಾಯ್ ಮಾಡಿದ್ದಾರೆ.
ಆರಂಭದಲ್ಲಿ ಚಂದನ್ ರಿಯಾಕ್ಟ್ ಮಾಡುತ್ತಿದ್ದ ರೀತಿಯನ್ನು ನೋಡಿ ನೆಟ್ಟಿಗರು 'ಚಿಕನ್ ತಿಂದು ಚಂದನ್ ತಲೆ ಸುತ್ತಿ ಬೀಳೋದು ಗ್ಯಾರಂಟಿ' ಎಂದು ಕಾಲೆಳೆದಿದ್ದಾರೆ.