ಫ್ಯಾಮಿಲಿ ಪ್ಲಾನಿಂಗ್, ಸಂಬಳ ಮತ್ತು ಚಂದನ್ ಎಲ್ಲಿ? ಟ್ರೋಲಿಗರಿಗೆ ಉತ್ತರ ಕೊಟ್ಟ Niveditha Gowda
ಸಾಮಾನ್ಯ ಜನರು ಪದೇ ಪದೇ ಕೇಳುವ ಪ್ರಶ್ನೆಗಳನ್ನು ಸೆಲೆಕ್ಟ್ ಮಾಡಿಕೊಂಡು ನಿವೇದಿತಾ ಗೌಡ ಯೂಟ್ಯೂಬ್ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಬಾರ್ಬಿ ಡಾಲ್ ನಿವೇದಿತಾ ಗೌಡ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಜೊತೆಗೆ ಯೂಟ್ಯೂಬ್ ಚಾನೆಲ್ ನಡೆಸಿಕೊಂಡು ಬಂದಿದ್ದಾರೆ. ಬ್ಯೂಟಿ ಟಿಪ್ಟ್, ಸ್ಕಿನ್ ಕೇರ್, ಹೇರ್ ಕೇರ್, ಫುಡ್ ಮತ್ತು ಫ್ಯಾಷನ್ ವಿಡಿಯೋಗಳನ್ನು ಕ್ರಿಯೇಟ್ ಮಾಡುವ ನಿವೇದಿತಾ ಗೌಡ ಮೊದಲ ಬಾರಿಗೆ ನೆಟ್ಟಿಗರು ಪದೇ ಪದೇ ಕೇಳುವ ಪ್ರಶ್ನೆಗಳಿ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಪತಿ ಚಂದನ್‌ಗೂ ತಿಳಿಯದ ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ.
- ನಿಮ್ಮ ಏಜ್ ಅಂಡ್ ಹೈಟ್ ಎಷ್ಟು?
ಹುಡ್ಗೀರು ಯಾವತ್ತಾದ್ರೂ ಏಜ್ ಹೇಳ್ತಾರಾ?ನಾನು ರಿವೀಲ್ ಮಾಡೋಲ್ಲ ಆದರೆ 18 ಕ್ಕೂ ಹೆಚ್ಚು ವಯಸ್ಸು ಆಗಿದೆ. ಟಿವಿಯಲ್ಲಿ ನಾನು ತುಂಬಾ ಹೈಟ್ ಕಾಣಿಸುತ್ತೀನಿ ಆದರೆ ನಾನು ಇರೋದು 5'3'' ಅಷ್ಟೆ. ಹೀಲ್ಸ್ ಹಾಕೊಂದು 5'6'' ಕಾಣಿಸುತ್ತೀನಿ.
- ನೀವು ಪ್ರಗ್ನೆಂಟ್ ಅಂತ ರೂಮರ್ಸ್ ಇದೆ. ಇದಕ್ಕೆ ನಿಮ್ಮ ರೆಸ್ಪಾನ್ಸ್ ಏನು?
ನನಗೆ ಎಷ್ಟೊಂದು ಸಲ ಕಾಲ್ ಮಾಡಿ ಕೇಳುತ್ತಾರೆ. ಸದ್ಯಕ್ಕೆ ಮಕ್ಕಳು ಮಾಡಿಕೊಳ್ಳುವ ಪ್ಲ್ಯಾನ್ ಇಲ್ಲ. ಲೈಫ್‌ನ ಎಂಜಾಯ್ ಮಾಡಬೇಕು ಮಕ್ಕಳಿಗೆಂದು ಟೈಮ್ ಕೊಡಬೇಕು ತುಂಬಾ ಕೇರ್ ಮಾಡಬೇಕು. ಈಗ ಅದೆಲ್ಲಾ ಮಾಡಲು ಆಗುದಿಲ್ಲ. ಏನಾದರೂ ಇದ್ದರೆ ನಾನೇ ಅನೌನ್ಸ್ ಮಾಡ್ತೀನಿ...
- ನಿಮ್ಮ ಸ್ಯಾಲರಿ ಎಷ್ಟು?
ಎಷ್ಟು ಕಷ್ಟವಾದ ಪ್ರಶ್ನೆ ಕೇಳಿದ್ದೀರಿ. ತಿಂಗಳಿಗೊಂದು ರೀತಿ ಸಂಬಳ ಬರುತ್ತೆ. ಒಂದೊಂದು ತಿಂಗಳು ಬರೋದೇ ಇಲ್ಲ. ಬಂದಾಗ ಚೆನ್ನಾಗಿ ಇಟ್ಟಿಕೊಳ್ಳಬೇಕು ಬೇಕಾಗುತ್ತದೆ. ಹುಡುಗಿಯರ ವಯಸ್ಸು ಹೇಗೆ ಕೇಳಬಾರದು ಅವರ ಸಂಬಳ ಕೂಡ ಕೇಳಬಾರದು.
- ಮೀಟ್ ಆಂಡ್ ಗ್ರೀಟ್ ಮಾಡ್ದಾಗ ನಿಮಗೆ ಯಾವುದು ಟಾಪ್ 2 ಕೋಶನ್ಸ್ ಅನ್ನೋಯಿಂಗ್ ಆಗಿರುತ್ತದೆ?
3 ಹೇಳಬೇಕು ಅಂದರೆ ಮೊದಲು ಕೇಳುವುದು ಚಂದನ್ ಎಲ್ಲಿ? ಚಂದನ್ ಬಂದಿಲ್ವಾ? ಯಾವಾಗಲೂ ಕೇಳುತ್ತಾರೆ. ದಿನಕ್ಕೆ1000 ಜನರನ್ನು ಭೇಟಿ ಮಾಡಿದಾಗ ಅಷ್ಟು ಜನರು ಕೇಳುತ್ತಾರೆ ಆಗ ಕತ್ತಿಗೆ ಚಂದನ್ ಮನೆಯಲ್ಲಿದ್ದಾರೆ ಅಂತ ಬೋರ್ಡ್ ಹಾಕಿಕೊಳ್ಳಬೇಕು ಅನಿಸುತ್ತದೆ. ಎರಡನೇ ವಿಚಾರ ಕೂದಲು ಕಟ್ ಮಾಡಿಸಿದ್ದೀರಿ ಅಂತ. ಹೌದು ನಾನು ಕಟ್ ಮಾಡಿಸುತ್ತೀನಿ ಏನೆಂದರೆ ನೋಡಿಕೊಳ್ಳುವುದಕ್ಕೆ ಕಷ್ಟ ಆಗುತ್ತದೆ. ತುಂಬಾ ಉದ್ದ ಇದ್ರೆ ಕಷ್ಟ ಅಗುತ್ತೆ ಅಂತ ಪದೇ ಪದೇ ಉತ್ತರ ಕೊಡ್ತೀನಿ. ಮೂರನೇ ಪ್ರಶ್ನೆ ನನ್ನ ಹೈಟ್ ಬಗ್ಗೆ. ಟಿವಿಯಲ್ಲಿ ನೋಡಲು ಇಷ್ಟೊಂದು ಉದ್ದ ಇದ್ದೀರಾ ಆದರೆ ಈಗ ಯಾಕೆ ಇಷ್ಟೊಂದು ಸಣ್ಣ ಮತ್ತು ಕುಳ್ಳಗಿದ್ದೀರಾ ಎಂದು ಕೇಳುತ್ತಾರೆ. ನಾನು ಅವರಿಗೆ ಉತ್ತರ ಕೊಟ್ಟರೂ ಕೇಳಿಸಿಕೊಳ್ಳುವುದಿಲ್ಲ ಅವರೇ ಹೇಳುತ್ತಾರೆ.
- ಚಂದನ್ ಅವರಿಗೆ ಇನ್ನೂ ತನಕ ಗೊತ್ತಿಲ್ಲದೇ ಇರುವ ಸೀಕ್ರೆಟ್ ಯಾವುದು?
ನಾನು ತೂಟ್ ಬ್ರಶ್‌ನ ಹೆಚ್ಚಿಗೆ ಬದಲಾಯಿಸುತ್ತೀನಿ. ಒಂದು ದಿನ ಚಂದನ್‌ಗೆಂದು ತಂದಿರುವ ಬ್ರಶ್‌ನ ನಾನು ಬಳಸಿರುವೆ. ಹೇಳಿದರೆ ಬೈತಾನೆ ಅಂತ ಬಳಸಿ ಹಾಗೆ ಅದೇ ಜಾಗದಲ್ಲಿ ಇಟ್ಟೆ. ಆಮೇಲೆ ಅದನ್ನು ಬಳಸಲು ಶುರು ಮಾಡಿದ್ದರು. Hygein ಬಗ್ಗೆ ಚಂದನ್ ತುಂಬಾ ಕೇರ್ ಮಾಡುತ್ತಾರೆ. ಇದುವರೆಗೂ ಚಂದನ್‌ಗೆ ಈ ವಿಚಾರ ಗೊತ್ತಿರಲಿಲ್ಲ.
ಹೂವಿನಲ್ಲಿ ಗಣೇಶ ಮಾಡಿದ ನಿವೇದಿತಾ ಗೌಡ; ಮೊದ್ಲು ಬಟ್ಟೆ ಸರಿ ಹಾಕಮ್ಮ ಎಂದ ನೆಟ್ಟಿಗರು
- ಗಿಚ್ಚಿ ಗಿಲಿಗಿಲಿ ಶೋ ಆದ್ಮೇಲೆ ನಿಮ್ಮ ಫ್ಯೂಚರ್ ಪ್ಲಾನ್ ಏನು?
ನನಗೆ ಸಿನಿಮಾ ಆಫರ್‌ಗಳು ಬಂದಿದೆ ಆದರೆ ಇನ್ನೂ ಯೋಚನೆ ಮಾಡುತ್ತಿರುವೆ. ಸಿನಿಮಾ ಮಾಡಲು ಭಯ ಇದೆ. ಮೊದಲ ಸಿನಿಮಾ ಮಾಡಿದರೆ ಚೆನ್ನಾಗಿ ಮಾಡಬೇಕು ಅಂದುಕೊಂಡಿರುವೆ. ಆದರೆ ಗಿಚ್ಚಿ ಗಿಲಿಗಿಲಿ ಆದ್ಮೇಲೆ ಒಂದು ತಿಂಗಳು ಬ್ರೇಕ್ ತೆಗೆದುಕೊಳ್ಳಬೇಕು ಅಂದುಕೊಂಡಿರುವೆ.