ಕುಡಿದ ಮತ್ತಲ್ಲಿ ಕಂಬ ಏರಿ ಕುಳಿತ್ರಾ ನಿವೇದಿತಾ ಗೌಡ? ಹೊಸ ವರ್ಷದ ವಿಡಿಯೋಗೆ ಇನ್ನಿಲ್ಲದ ಕಮೆಂಟ್ಸ್
ನಿವೇದಿತಾ ಗೌಡ ಹೊಸ ವರ್ಷದ ವಿಡಿಯೋ ಒಂದನ್ನು ಶೇರ್ ಮಾಡಿದ್ರೆ, ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ನೋಡಿ!
2025 ಹೊಸ ವರ್ಷ ಆರಂಭವಾಗಿದೆ. ಇದಾಗಲೇ ಹಲವಾರು ಮಂದಿ ತಾವು ಆಚರಿಸಿಕೊಂಡಿರುವ ಹೊಸ ವರ್ಷದ ವಿಡಿಯೋ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ, ತಮ್ಮ ಆಚರಣೆಯ ಬಗ್ಗೆ ತಿಳಿಸಿದ್ದಾರೆ. ಇನ್ನು ಸೆಲೆಬ್ರಿಟಿಗಳಂತೂ ವಿವಿಧ ರೀತಿಯಲ್ಲಿ ಆಚರಣೆ ಮಾಡಿದ್ದು, ಅವುಗಳನ್ನು ತಮ್ಮ ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಂಡಿದ್ದಾರೆ. ಅದೇ ರೀತಿ, ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕೂಡ ಹೊಸ ವರ್ಷಾಚರಣೆ ಮಾಡಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ ಒಂಟಿಯಾಗಿ ಲೈಫ್ ಸಕತ್ ಎಂಜಾಯ್ ಮಾಡುತ್ತಿದ್ದಾರೆ ನಿವೇದಿತಾ. ಇದಾಗಲೇ ವಿದೇಶಗಳ ಟೂರ್ ಮಾಡುತ್ತಿದ್ದಾರೆ.
ನ್ಯೂಯಾರ್ಕ್, ಲಂಡನ್ ಎಂದೆಲ್ಲಾ ಹಲವಾರು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಹೊಸ ವರ್ಷದಲ್ಲಿ ವಿಭಿನ್ನ ರೀತಿಯ ಡ್ರೆಸ್ ತೊಟ್ಟು, ಕೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋ ಶೇರ್ ಮಾಡಿದ್ದಾರೆ. ಇದು ಯಾವ ದೇಶದಲ್ಲಿ ಎನ್ನುವುದನ್ನು ನಿವೇದಿತಾ ಹೇಳದಿದ್ದರೂ ನಿನ್ನೆಯಷ್ಟೇ ಲಂಡನ್ನ ವಿಡಿಯೋ ಶೇರ್ ಮಾಡಿದ್ದರಿಂದ ಬಹುಶಃ ಅಲ್ಲಿಯದ್ದೇ ಇರಬಹುದು ಎನ್ನುತ್ತಿದ್ದಾರೆ ಇವರ ಫ್ಯಾನ್ಸ್. ಆದರೆ ಅವುಗಳಿಗಿಂತಲೂ ಭಿನ್ನವಾಗಿ ಎಲ್ಲರ ಗಮನ ಹೋಗಿದ್ದು, ಅವರು ಕಂಬ ಏರಿರೋ ವಿಷಯ. ನಟಿ, ಸಹಜವಾಗಿ ನೃತ್ಯ ಮಾಡುತ್ತಾ ಅಲ್ಲಿರುವ ಕಂಬ ಏರಿದ್ದಾರೆ. ಆದರೆ ತರ್ಲೆ ಕಮೆಂಟಿಗರು ಸುಮ್ಮನೆ ಇರಬೇಕಲ್ಲಾ? ಹೊಸ ವರ್ಷದ ನಶೆ ಏರಿರಬೇಕು, ಅದಕ್ಕೇ ತಿಳಿಯದೇ ನಟಿ ಕಂಬ ಏರಿ ಬಿಟ್ಟಿದ್ದಾರೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ನಶೆ ಇಳಿದ ಮೇಲೆಯೇ ಕೆಳಗೆ ಇಳಿದಿರಬೇಕು ಎಂದೆಲ್ಲಾ ಅವರ ಕಾಲೆಳೆಯುತ್ತಿದ್ದಾರೆ.
ನ್ಯೂಯಾರ್ಕ್ ಬಳಿಕ ಲಂಡನ್ ನೈಟ್ ಕ್ಲಬ್ನಲ್ಲಿ ನಿವೇದಿತಾ! ನೀನೇ ಸರಿ ಬಿಡು ಕಣಮ್ಮಾ ಎನ್ನೋದಾ ಮಹಿಳೆಯರು?
ಮೊನ್ನೆಯಷ್ಟೇ ನಿವೇದಿತಾ ತಾವು ನ್ಯೂಯಾರ್ಕ್ನಲ್ಲಿ ಇದ್ದಿರುವ ವಿಡಿಯೋ ಶೇರ್ ಮಾಡಿದ್ದರು. ಈ ವಿಡಿಯೋ ಅನ್ನು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್ ಮಾಡಿದ್ದರು. ಕ್ರಿಸ್‌ಮಸ್ ಆಚರಿಸುತ್ತಿರುವುದಾಗಿ ನಿವೇದಿತಾ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮತಾಂತರಗೊಂಡ್ರಾ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ಈ ಹೊಸ ಹುಡುಗ ಯಾರು ಎನ್ನುವ ಬಗ್ಗೆ ಇನ್ನೂ ತಡಕಾಟ ನಡೆಯುತ್ತಿದೆ. ಇದಾಗಲೇ ಕ್ರಿಸ್ಮಸ್ನಲ್ಲಿ ವೈನ್ ಹೀರುವ ಫೋಟೋ ಒಂದನ್ನು ಇವರು ಈಗಾಗಲೇ ಅಪ್ಲೋಡ್ಮಾಡಿದ್ದರು. ಇದೀಗ ಕ್ರಿಸ್‌ಮಸ್ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಬಳಿಕ ಲಂಡನ್ನಲ್ಲಿರೋ ವಿಡಿಯೋ ಶೇರ್ ಮಾಡಿದ ಮೇಲಂತೂ ನಿವೇದಿತಾ ಪರವಾಗಿ ಮಹಿಳೆಯರು ಬ್ಯಾಟಿಂಗ್ ಮಾಡಲು ಶುರು ಮಾಡಿದರು.
ನಿವೇದಿತಾ ಇದೀಗ ಸ್ವತಂತ್ರಳಾಗಿದ್ದಾಳೆ. ಸಂಸಾರದ ಬಂಧನವಿಲ್ಲ. ಇದೇ ಕಾರಣಕ್ಕೆ ಜಾಲಿ ಮೂಡ್ನಲ್ಲಿ ಇದ್ದಾಳೆ. ತನಗೆ ಇಷ್ಟದಂತೆ ಆಕೆ ಏನಾದರೂ ಮಾಡಬಹುದಾಗಿದೆ. ಅವಳು ಎಲ್ಲಿಯಾದರೂ ಹೋಗಬಹುದು. ಸಂಸಾರವೆಂಬ ಬಂಧನದಲ್ಲಿ ಸಿಲುಕಿದರೆ ಹೆಣ್ಣುಮಕ್ಕಳು ಇಷ್ಟು ಫ್ರೀ ಆಗಿ ಇರಲು ಆಗುವುದಿಲ್ಲ. ಏನೇಮಾಡುವುದಿದ್ದರೂ ಎಲ್ಲರ ಒಪ್ಪಿಗೆ ಪಡೆದು ಮಾಡಬೇಕು. ಹೀಗೆ ಸ್ವತಂತ್ರವಾಗಿ ಟ್ರಿಪ್-ಟೂರ್ ಎನ್ನುವುದು ಕನಸಿನ ಮಾತೇ ಎಂದೆಲ್ಲಾ ಹೇಳುವ ಮೂಲಕ ನಿವೇದಿತಾ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂಥ ಕಮೆಂಟ್ಗಳಿಗೆ ಹಲವರು ರಿಪ್ಲೈ ಮಾಡಿದ್ದಾರೆ. ಅದರಲ್ಲಿ ಕೆಲವರು ಈ ಪರಿಯ ಕಮೆಂಟ್ಗಳನ್ನು ವಿರೋಧಿಸಿದ್ದರೆ, ಮತ್ತೆ ಕೆಲವರು ಇದು ನಿಜ ನಿಜ ಎನ್ನುತ್ತಿದ್ದಾರೆ. ಕೆಲವರು, ನಿನಗೆ ಇಷ್ಟೊಂದು ಫ್ರೀ ಬೇಕಿದ್ದರೆ ಚಂದನ್ ಶೆಟ್ಟಿಯನ್ನು ಯಾಕೆ ಮದ್ವೆಯಾಗಬೇಕಿತ್ತು ಅಂತ ಕೇಳಿದ್ರೆ, ಮತ್ತೆ ಕೆಲವರು ಎರಡನ್ನೂ ಬ್ಯಾಲೆನ್ಸ್ ಮಾಡ್ಬೋದಿತ್ತಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಫಾರಿನ್ ಟೂರ್, ಹಲವರ ಮನಸ್ಸನ್ನು ಪರಿವರ್ತನೆ ಮಾಡಿದ್ದಂತೂ ನಿಜ.
ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್!