ನಿವೇದಿತಾ ಗೌಡ ವಿದೇಶ ಪ್ರವಾಸದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಆಚರಿಸಿದ್ದಾರೆ. ವಿಚ್ಛೇದನದ ನಂತರದ ಸ್ವತಂತ್ರ ಜೀವನದ ಬಗ್ಗೆ ಮಾತನಾಡುತ್ತಿದ್ದು, ಮಹಿಳೆಯರ ಬೆಂಬಲ ಪಡೆಯುತ್ತಿದ್ದಾರೆ.  

ನಿವೇದಿತಾ ಗೌಡ ದಿನಕ್ಕೊಂದರಂತೆ ವಿಡಿಯೋ ಹಾಕಿ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಈಕೆ ತೊಡುವ ಡ್ರೆಸ್​ಗಳು ದಿನದಿಂದ ದಿನಕ್ಕೆ ಚಿಕ್ಕದಾಗುತ್ತಾ ಬಂದಿರುವ ಕಾರಣ ಇನ್ನಿಲ್ಲದಂತೆ ಟ್ರೋಲ್​ ಕೂಡ ಮಾಡಲಾಗುತ್ತಿದೆ. ಈಕೆಯ ಜೊತೆ ಯಾರೇ ಕಾಣಿಸಿಕೊಂಡರೂ ಅವರ ಜೊತೆ ನಟಿಗೆ ಲಿಂಕ್​ ಮಾಡುವ ಪರಿಪಾಠವೂ ಹೆಚ್ಚಾಗಿದೆ. ಯಾರೇ ಕೆಟ್ಟ ಕಮೆಂಟ್​ ಮಾಡಲಿ, ಏನೇ ಹೇಳಲಿ ಅವುಗಳಿಗೆ ನಿವೇದಿತಾ ಡೋಂಟ್​ ಕೇರ್​. ಇದೀಗ ಲಂಡನ್​, ಅಮೆರಿಕ ಎಂದೆಲ್ಲಾ ಫಾರಿನ್​ ಟೂರ್​ ಮಾಡುತ್ತಿದ್ದಾರೆ. ಕ್ರಿಸ್​ಮಸ್​, ಹೊಸ ವರ್ಷ ಅಂತೆಲ್ಲಾ ವಿದೇಶಗಳಲ್ಲಿ ಸಕತ್​ ಎಂಜಾಯ್​ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ನ್ಯೂಯಾರ್ಕ್​ನಲ್ಲಿ ಯುವಕನ ಜೊತೆ ಆಕಾಶಬುಟ್ಟಿ ಬಿಡುವ ವಿಡಿಯೋ ಶೇರ್​ ಮಾಡಿಕೊಂಡಿದ್ದ ನಿವೇದಿತಾ, ಇದೀಗ ಲಂಡನ್​ನ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಇವರ ಫಾರಿನ್​ ಟೂರ್​ ವಿಡಿಯೋಗಳನ್ನು ನೋಡಿ ನೆಟ್ಟಿಗರು ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳು ನಟಿಯ ಪರವಾಗಿ ಬರೆಯುತ್ತಿರುವುದನ್ನು ನೋಡಬಹುದಾಗಿದೆ. ಇಷ್ಟು ದಿನ ಈಕೆಯ ವಿಚ್ಛೇದನ, ಗಂಡನಿಂದ ದೂರವಾದ ಮೇಲೆ ಈಕೆ ಹಾಕುತ್ತಿರುವ ಡ್ರೆಸ್​, ಮಾಡುತ್ತಿರುವ ರೀಲ್ಸ್ ಎಲ್ಲವೂ ಅಸಭ್ಯ, ಅಶ್ಲೀಲ ಎಂಬ ಕಮೆಂಟ್​ಗಳೇ ತುಂಬಿ ಹೋಗಿದ್ದವು. ಅಷ್ಟಕ್ಕೂ ಚಂದನ್​ ಶೆಟ್ಟಿ ಅವರ ಜೊತೆಗೆ ಇರುವಾಗಲೂ ನಿವೇದಿತಾ ರೀಲ್ಸ್​ ಮಾಡುತ್ತಿರಲಿಲ್ಲ ಎಂದೇನಲ್ಲ. ಆದರೆ ಡಿವೋರ್ಸ್​ ಆದ್ಮೇಲೆ ರೀಲ್ಸ್​ ಹೆಚ್ಚಾಗಿದೆ. ನೀವು ಮುಖ ತೋರಿಸಲು ರೀಲ್ಸ್ ಮಾಡ್ತಿರೋ, ಇನ್ನೇನು ತೋರಿಸಲೋ ಎನ್ನುವಷ್ಟರ ಮಟ್ಟಿಗೆ ಈಕೆಯ ರೀಲ್ಸ್​ ಕೆಟ್ಟ ಕಮೆಂಟುಗಳಿಂದಲೇ ಈಗಲೂ ತುಂಬಿ ಹೋಗುವುದೇ ಇದೆ. ಆದರೆ ಇದೀಗ ಅಪರೂಪಕ್ಕೆ ಎಂಬಂತೆ ನೆಟ್ಟಿಗರಿಂದ ವಿಭಿನ್ನ ರೀತಿಯ ಕಮೆಂಟ್​ಗಳು ಕೇಳಿಬರುತ್ತಿವೆ.

ಹೊಸ ವರ್ಷಕ್ಕೆ ಹೊಸ ಹುಡುಗನ ಜೊತೆ ಫಾರಿನ್​ನಲ್ಲಿ ನಿವೇದಿತಾ ಗೌಡ: ಮತಾಂತರಗೊಂಡ್ರಾ ಕೇಳ್ತಿರೋ ಫ್ಯಾನ್ಸ್​!

View post on Instagram

ನಿವೇದಿತಾ ಇದೀಗ ಸ್ವತಂತ್ರಳಾಗಿದ್ದಾಳೆ. ಸಂಸಾರದ ಬಂಧನವಿಲ್ಲ. ಇದೇ ಕಾರಣಕ್ಕೆ ಜಾಲಿ ಮೂಡ್​ನಲ್ಲಿ ಇದ್ದಾಳೆ. ತನಗೆ ಇಷ್ಟದಂತೆ ಆಕೆ ಏನಾದರೂ ಮಾಡಬಹುದಾಗಿದೆ. ಅವಳು ಎಲ್ಲಿಯಾದರೂ ಹೋಗಬಹುದು. ಸಂಸಾರವೆಂಬ ಬಂಧನದಲ್ಲಿ ಸಿಲುಕಿದರೆ ಹೆಣ್ಣುಮಕ್ಕಳು ಇಷ್ಟು ಫ್ರೀ ಆಗಿ ಇರಲು ಆಗುವುದಿಲ್ಲ. ಏನೇಮಾಡುವುದಿದ್ದರೂ ಎಲ್ಲರ ಒಪ್ಪಿಗೆ ಪಡೆದು ಮಾಡಬೇಕು. ಹೀಗೆ ಸ್ವತಂತ್ರವಾಗಿ ಟ್ರಿಪ್​-ಟೂರ್​ ಎನ್ನುವುದು ಕನಸಿನ ಮಾತೇ ಎಂದೆಲ್ಲಾ ಹೇಳುವ ಮೂಲಕ ನಿವೇದಿತಾ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಇಂಥ ಕಮೆಂಟ್​ಗಳಿಗೆ ಹಲವರು ರಿಪ್ಲೈ ಮಾಡಿದ್ದಾರೆ. ಅದರಲ್ಲಿ ಕೆಲವರು ಈ ಪರಿಯ ಕಮೆಂಟ್​ಗಳನ್ನು ವಿರೋಧಿಸಿದ್ದರೆ, ಮತ್ತೆ ಕೆಲವರು ಇದು ನಿಜ ನಿಜ ಎನ್ನುತ್ತಿದ್ದಾರೆ. ಕೆಲವರು, ನಿನಗೆ ಇಷ್ಟೊಂದು ಫ್ರೀ ಬೇಕಿದ್ದರೆ ಚಂದನ್ ಶೆಟ್ಟಿಯನ್ನು ಯಾಕೆ ಮದ್ವೆಯಾಗಬೇಕಿತ್ತು ಅಂತ ಕೇಳಿದ್ರೆ, ಮತ್ತೆ ಕೆಲವರು ಎರಡನ್ನೂ ಬ್ಯಾಲೆನ್ಸ್​ ಮಾಡ್ಬೋದಿತ್ತಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಫಾರಿನ್​ ಟೂರ್​, ಹಲವರ ಮನಸ್ಸನ್ನು ಪರಿವರ್ತನೆ ಮಾಡಿದ್ದಂತೂ ನಿಜ. 

ಮೊನ್ನೆಯಷ್ಟೇ ನಿವೇದಿತಾ ತಾವು ನ್ಯೂಯಾರ್ಕ್​ನಲ್ಲಿ ಇದ್ದಿರುವ ವಿಡಿಯೋ ಶೇರ್​ ಮಾಡಿದ್ದರು. ಈ ವಿಡಿಯೋ ಅನ್ನು ಜೈ ಮದ್ದಳೇನ ಎನ್ನುವವರಿಗೆ ನಿವೇದಿತಾ ಟ್ಯಾಗ್​ ಮಾಡಿದ್ದರು. ಕ್ರಿಸ್​ಮಸ್​ ಆಚರಿಸುತ್ತಿರುವುದಾಗಿ ನಿವೇದಿತಾ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮತಾಂತರಗೊಂಡ್ರಾ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ಈ ಹೊಸ ಹುಡುಗ ಯಾರು ಎನ್ನುವ ಬಗ್ಗೆ ಇನ್ನೂ ತಡಕಾಟ ನಡೆಯುತ್ತಿದೆ. ಇದಾಗಲೇ ಕ್ರಿಸ್​ಮಸ್​ನಲ್ಲಿ ವೈನ್​ ಹೀರುವ ಫೋಟೋ ಒಂದನ್ನು ಇವರು ಈಗಾಗಲೇ ಅಪ್​ಲೋಡ್​ಮಾಡಿದ್ದರು. ಇದೀಗ ಕ್ರಿಸ್​ಮಸ್​ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ.

ಬೀಚ್​ನಲ್ಲಿರೋ ನಿವೇದಿತಾ ಗೌಡ ವಿಡಿಯೋ ವೈರಲ್​! ಪೂನಂ ಪಾಂಡೆಗೆ ಹೋಲಿಕೆ ಮಾಡೋದಾ ನೆಟ್ಟಿಗರು?

View post on Instagram