Asianet Suvarna News Asianet Suvarna News

ಪುಟ್ಟಗೌರಿ ಮದುವೆ ಸೀರಿಯಲ್​ಗೆ ನಮ್ರತಾ ಗೌಡ ದಿನವೊಂದಕ್ಕೆ ಪಡೆದ ಸಂಭಾವನೆ ರಿವೀಲ್​...


ಬಿಗ್​ಬಾಸ್​​ ಖ್ಯಾತಿಯ ನಮ್ರತಾ ಗೌಡ ಅವರು ಪುಟ್ಟಗೌರಿ ಮದುವೆ ಸೀರಿಯಲ್​ಗೆ ಪಡೆದ ಸಂಭಾವನೆ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Bigg Boss Namrutha Gowda open up about remuneration  for the Puttagauri Maduve suc
Author
First Published May 29, 2024, 9:56 PM IST

ಪುಟ್ಟಗೌರಿ ಮದುವೆ, ನಾಗಿಣಿ ಸೀರಿಯಲ್​ ಹೆಸರು ಕೇಳುತ್ತಿದ್ದಂತೆಯೇ ಎಲ್ಲರ ಕಣ್ಣಮುಂದೆ ಬರುವುದು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ. ಬಿಗ್​ಬಾಸ್​​ ಸೀಸನ್​ 10ಗೆ ಬಂದ ಮೇಲೆ ಇವರ ಕೀರ್ತಿ ಹೆಚ್ಚಾಗಿ, ಜನರು ಗುರುತಿಸುವುದೂ ಹೆಚ್ಚಾದರೂ ಇವರು ಇದಾಗಲೇ ಕೆಲವು ಧಾರಾವಾಹಿಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲ ಕಲಾವಿದೆಯಾಗಿಯೂ ಇವರು ನಟಿಸಿದ್ದಾರೆ. ಆ್ಯಂಕರ್​ ರ್‍ಯಾಪಿಡ್ ರಶ್ಮಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ನಮ್ರತಾ ಗೌಡ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದು, ಅದರಲ್ಲಿ ಸಂಭಾವನೆ ವಿಷಯವೂ ಒಂದಾಗಿದೆ.

ಆರಂಭದಲ್ಲಿ ಹಣಕ್ಕಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ನಮ್ರತಾ ಹೇಳಿಕೊಂಡಿದ್ದಾರೆ. ಏಕೆಂದರೆ ಬಹುತೇಕ ಎಲ್ಲಾ ತಾರೆಯರಿಗೂ ಮೊದಲು ಬೇಕಿರುವುದು ಹೆಸರು. ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವುದು. ಅದಕ್ಕಾಗಿಯೇ ಆರಂಭದಲ್ಲಿ ಹಣದ ಹಿಂದೆ ಹೋಗುವುದಿಲ್ಲ. ಹೆಸರು, ಕೀರ್ತಿ ಬರುತ್ತಿದ್ದಂತೆಯೇ ಸಂಭಾವನೆ ಹೆಚ್ಚಿಸಿಕೊಳ್ಳುವುದು ಮಾಮೂಲು. ಅದನ್ನೇ ನಮ್ರತಾ ಗೌಡ ಅವರೂ ಹೇಳಿದ್ದಾರೆ.   ನನಗೆ ಆಂಭದಲ್ಲಿ ಒಳ್ಳೆಯ ಸಂಭಾವನೆ ಸಿಗಲಿಲ್ಲ. ಬಾಲ ಕಲಾವಿದೆಯಾಗಿ ದಿನವೊಂದಕ್ಕೆ 400 ರೂಪಾಯಿ ಪಡೆದದ್ದು ಇದೆ. ಇದು ನನ್ನ ಮೊದಲ ಸಂಭಾವನೆ. ಆ ಬಳಿಕ ಕೆಲವು ಸೀರಿಯಲ್​ಗಳಲ್ಲಿ ನಟಿಸಿದರೂ ಅಷ್ಟಾಗಿ ಸಂಭಾವನೆ ಸಿಗಲಿಲ್ಲ. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನಾನು ಪ್ಯಾಷನ್‌ಗೋಸ್ಕರನೇ ಮಾಡುತ್ತಿದ್ದೆ. ಹೆಸರು ಮಾಡಬೇಕು ಅಂತಾನೇ ಮಾಡುತ್ತಿದ್ದೆ. ಗುರುತಿಸಿಕೊಳ್ಳುವುದಕ್ಕೆ ಮಾಡುತ್ತಿದ್ದೆ. ಅದಕ್ಕೆ ಕಡಿಮೆ ಸಂಭಾವನೆ ಕೊಟ್ಟರೂ ಓಕೆ ಅನ್ನುತ್ತಿದ್ದೆ. ಅದಕ್ಕಾಗಿಯೇ ಶ್ರಮಕ್ಕೆ ತಕ್ಕಂತೆ ಸಂಭಾವನೆ ಸಿಗಲಿಲ್ಲ ಎನ್ನುವುದೂ ನಿಜವೇ ಎಂದಿದ್ದಾರೆ.

ಬ್ಯಾಂಕ್​ ಲೋನ್​ ಪಡೆಯಲು ನಟರಿಗೆ ಈ ಪರಿ ಕಷ್ಟನಾ? ಬಿಗ್​ಬಾಸ್​ ನಮ್ರತಾ ಗೌಡ ಬಿಚ್ಚಿಟ್ಟ ಕಹಿ ಅನುಭವ...

ಪುಟ್ಟಗೌರಿ, ನಾಗಿಣಿ ಧಾರಾವಾಹಿಗಳು ನನಗೆ ಹೆಸರು ತಂದುಕೊಟ್ಟವು. ಆಗ ಇಷ್ಟೇ ಕೊಡಿ ಅಂತೇನೂ ಹೇಳುತ್ತಿರಲಿಲ್ಲ. ಆದರೆ ಈಗ ನಾನು ಡಿಮಾಂಡ್​ ಮಾಡುತ್ತೇನೆ. ಇಷ್ಟು ಕೊಟ್ಟರೆ ಮಾತ್ರ ಬರುವುದಾಗಿ ಹೇಳುತ್ತೇನೆ ಎಂದು ಓಪನ್​ ಆಗಿ ನಮ್ರತಾ ಗೌಡ ಹೇಳಿಕೊಂಡಿದ್ದಾರೆ. ಇದೇ ವೇಳೆ ಪುಟ್ಟಗೌರಿ ಮದುವೆ ಸೀರಿಯಲ್​ಗೆ ತಮಗೆ ಕೊಟ್ಟಿರುವ ಸಂಭಾವನೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ಪುಟ್ಟಗೌರಿ ಮದುವೆ ಸೀರಿಯಲ್​ಗೆ ಕೊನೆ ಕೊನೆಯಲ್ಲಿ ದಿನವೊಂದಕ್ಕೆ 9 ರಿಂದ 10 ಸಾವಿರ ರೂಪಾಯಿ ಸಂಭಾವನೆ ಸಿಗುತ್ತಿತ್ತು ಎಂದಿದ್ದಾರೆ.  ಪುಟ್ಟಗೌರಿಯಲ್ಲಿ ಕೊನೆ ಕೊನೆಗೆ ನನಗೆ 9-10 ಸಾವಿರ ಸಿಗುತ್ತಿತ್ತು. ಮೊದ ಮೊದಲು ತಿಂಗಳಿಗೆ 20 ದಿನ ಇರುತ್ತಿತ್ತು. ಅದಾದ್ಮೇಲೆ ಕಮ್ಮಿ ಮಾಡಿಬಿಡ್ತಾರೆ. ಆರು ತಿಂಗಳು ನನ್ನ ಟ್ರ್ಯಾಕ್ ಕಡಿಮೆ ಆಗಿತ್ತು. ತಿಂಗಳಿಗೆ ಒಂದು ದಿನ ಬರುತ್ತಿತ್ತು. ಆಗ ತುಂಬಾ ಕಷ್ಟ ಆಗ್ತಿತ್ತು. ಡಿಪ್ರೆಷನ್‌ಗೆ ಹೋಗಿದ್ದೆ ಎಂದಿದ್ದಾರೆ.  

ಇದೇ ಷೋನಲ್ಲಿ ಅವರು ನಟರಿಗೆ ಬ್ಯಾಂಕ್​ ಲೋನ್​ ಪಡೆಯಲು ಎಷ್ಟು ಕಷ್ಟಪಡಬೇಕು ಎಂಬ ಬಗ್ಗೆ ತಿಳಿಸಿದ್ದಾರೆ.   ಬ್ಯಾಂಕ್​ನವರು ಬಂದಾಗ ಪ್ಯಾಷನ್​ ಇರುವವರಿಗೆ ಸಾಲ ಕೊಡುವುದಿಲ್ಲ ಎನ್ನುವ ಮಾತಿದೆ. ಇದನ್ನು ನೀವು ಒಪ್ಪುತ್ತೀರಾ ಎಂದು ರಶ್ಮಿ ಅವರು ನಮ್ರತಾಗೆ ಕೇಳಿದಾಗ, ತಮ್ಮ ಕಹಿ ಅನುಭವವನ್ನು ಅವರು ಬಿಚ್ಚಿಟ್ಟರು. ಎಂಟರ್​ಟೇನ್​ಮೆಂಟ್​ ಇಂಡಸ್ಟ್ರಿಯವರಿಗೆ ಮನೆಗೆ ಲೋನ್​ ಬೇಕು ಎಂದರೆ ಸಿಗೋದು ತುಂಬಾ ಕಷ್ಟ. ನನಗೆ ಅದರ ಕೆಟ್ಟ ಅನುಭವವಾಗಿದೆ ಎಂದರು. ಹೋದ ಬ್ಯಾಂಕ್​ಗಳೆಲ್ಲವೂ ಸಾಲ ಕೊಡಲೇ ಇಲ್ಲ. ಎಲ್ಲರೂ ರಿಜೆಕ್ಟ್​ ಮಾಡಿದ್ರು. ಇದಕ್ಕೆ ಕಾರಣ ನಾನು ಮನರಂಜನಾ ಉದ್ಯಮದವಳು ಎನ್ನುವುದು ಎಂದು ಹೇಳಿದರು. ನಮಗೆ ಸಂಬಳ ಇರದ ಕಾರಣ ಈ ಸಮಸ್ಯೆ. 2-3 ತಿಂಗಳು ಹಲವು ಬ್ಯಾಂಕ್​ ಓಡಾಟ ಮಾಡಿದ ಮೇಲೆ ಒಂದು ಬ್ಯಾಂಕ್​ ಸಾಲ ಕೊಟ್ಟಿತು. ಐಟಿ ನೋಡಿ, ಅದೂ ಇದೂ ಡಾಕ್ಯುಮೆಂಟ್ಸ್​ ತೋರಿಸಿದ ಬಳಿಕ ಅವರು ಕನ್​ವಿನ್ಸ್​ ಆದರು. ಕೊನೆಗೆ ರಿಯಾಲಿಟಿ ಷೋಗೆ (ಬಹುಶಃ ಬಿಗ್​ಬಾಸ್​ಗೆ ಇದ್ದಿರಬಹುದು) ಹೋಗ್ತಾ ಇದ್ದೇನೆ ಎಂದೆಲ್ಲಾ ಹೇಳಿದ ಮೇಲೆ ಅವರು ಹಾಗೂ ಹೀಗೂ ಸಾಲ ಕೊಟ್ಟರು. ಆ ಎಕ್ಸ್​ಪೀರಿಯನ್ಸ್​ ಹಾರಿಬಲ್​. ನಾನು ನಟಿ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಅನುಭವಿಸಬೇಕಾಯಿತು ಎಂದಿದ್ದಾರೆ.  

ತೂಕ ಇಳಿಸಲು ತಣ್ಣೀರಿನ ಶವರ್​ ಬಾತ್​: ಹೇಗೆ? ಏಕೆ? ಫಿಟ್​ನೆಸ್​ ತಜ್ಞೆ ಶ್ವೇತಾ ಸುಲಭದ ಟಿಪ್ಸ್​

Latest Videos
Follow Us:
Download App:
  • android
  • ios