ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ, 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಉದ್ದ ಉಗುರುಗಳಿಂದ ಪುರುಷ ಸ್ಪರ್ಧಿಗಳಿಗೆ ಸವಾಲು ಹಾಕಿದ್ದಾರೆ. ೨೪/೭ ಉಗುರು ಧರಿಸಿ, ನಿಯಮ ಪಾಲಿಸಿದರೆ ಹುಡುಗಿಯರ ಮಾತು ಕೇಳುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾ ಉಡುಗೆ, ಆಕೆಯ ಕನ್ನಡ ಜ್ಞಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಗಾಯಕ ಚಂದನ್​ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ಮೇಲೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದ ಸೆನ್ಸೇಷನಲ್​ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

ಇಂತಿಪ್ಪ ನಿವೇದಿತಾ ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬಾಯ್ಸ್​ ವರ್ಸಸ್​ ಗರ್ಲ್ಸ್​ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದುದ್ದ ಉಗುರು ಬಿಟ್ಟುಕೊಂಡು ಅದನ್ನೇ ಫೋರ್ಕ್​ ಮಾಡಿಕೊಂಡು ಮುದ್ದೆಯನ್ನೂ ತಿಂದಿರುವ ನಿವೇದಿತಾ, ಈಗ ಅಲ್ಲಿರುವ ಗಂಡಸರಿಗೆ ಓಪನ್​ ಚಾಲೆಂಜ್​ ಮಾಡಿದ್ದಾರೆ. ಇಷ್ಟು ಉದ್ದದ ಉಗುರನ್ನು ಯಾಕೆ ಬಿಟ್ಟುಕೊಂಡಿರುವುದು ಎಂದು ಪ್ರಶ್ನಿಸಿದಾಗ, ನೀವು ಹತ್ತಿರ ಬಂದರೆ ಹೀಗೆ ಚುಚ್ಚೋಣ ಎಂದು ಸೆಲ್ಫ್​ ಡಿಫೆನ್ಸ್​ ಎಂದು ಉದ್ದ ಬಿಟ್ಟುಕೊಂಡಿದ್ದೇನೆ ಎಂದಿದ್ದಾರೆ. ಆಗ ಬಾಯ್ಸ್​ ಗುಂಪಿನ ಕಡೆಯಿಂದ ಹಾಗೇನೂ ಇಲ್ಲ. ಇದು ಗಮ್ ಹಾಕಿರೋದು. ಹೀಗೆ ಎಳೆದರೆ ಬಂದು ಬಿಡುತ್ತದೆ ಎಂದಿದ್ದಾರೆ.

ಅರಗಿಸಿಕೊಳ್ಳಲಾಗದ ಶಾಕ್​ ಕೊಟ್ಟ ನಿವೇದಿತಾ! 24 ಗಂಟೆಗಳಲ್ಲಿ ಸುನಾಮಿ ಎಚ್ಚರಿಸಿದ ಕಮೆಂಟಿಗರು- ಅಂಥದ್ದೇನಿದೆ ನೋಡಿ!

ಆಗ ನಿವೇದಿತಾ ಓಪನ್​ ಚಾಲೆಂಜ್​ ಕೊಟ್ಟಿದ್ದಾರೆ. ಅದೇನೆಂದರೆ. ತಮ್ಮ ರೀತಿಯಲ್ಲಿಯೇ ಇಷ್ಟು ಉದ್ದದ ಉಗುರನ್ನು ಬಾಯ್ಸ್​ ಗುಂಪು ಧರಿಸಿ ಬರಬೇಕು. 24/7 ಶೂಟಿಂಗ್​ ಸಮಯದಲ್ಲಿ ಇದನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಸರಿಯಾಗಿ ಇಟ್ಟುಕೊಂಡರೆ ಎಲ್ಲಾ ಗರ್ಲ್ಸ್​ ಅವರು ಹೇಳಿದಂತೆ ಕೇಳುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ನಾನು ರಾತ್ರಿಯಿಡೀ ನಿದ್ದೆನೇ ಮಾಡಿಲ್ಲ ಗೊತ್ತಾ ಎಂದೂ ನಿವೇದಿತಾ ರಾಗ ಎಳೆದಿದ್ದಾರೆ. ಇದೀಗ ಉಗುರಿನ ಚಾಲೆಂಜ್​ ಕೊಡುವ ಮೂಲಕ ಪುರುಷರನ್ನು ಕೆಣಕಿದ್ದಾರೆ. ಯಾರು ನಿವೇದಿತಾ ಚಾಲೆಂಜ್​ ಸ್ವೀಕರಿಸುತ್ತಾರೋ ನೋಡಬೇಕು. 

ನಿವೇದಿತಾ ಪೋಸ್ಟ್​ ಹಾಕಿದಾಗಲೆಲ್ಲಾ, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದ ನೆಟ್ಟಿಗರು, ನಿವೇದಿತಾಗೆ ಕನ್ನಡ ಬರುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಕೆಟ್ಟ ಕೆಟ್ಟ ಕಮೆಂಟ್​ ಮಾಡಿದರೆ ಆಕೆಗೆ ಅದು ಅರ್ಥವಾಗುವುದಿಲ್ಲ ಎಂದೂ ಹೇಳುವುದು ಉಂಟು. ಆದರೆ, ತಮಗೆ ಕನ್ನಡ ಮಾತನಾಡಲು ಬರುತ್ತದೆ ಎಂದು ಈ ಹಿಂದೆ ವಿಡಿಯೋ ಮೂಲಕ ತೋರಿಸಿದ್ದ್ ನಟಿ, ಈಗ ಈ ಷೋನಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಆದರೆ ಕಮೆಂಟ್ಸ್​ ಓದಲು ಬರುತ್ತದೆಯೋ ಇಲ್ಲವೋ ಎನ್ನುವುದು ಈಗ ಅಭಿಮಾನಿಗಳಿಗೆ ಇರುವ ಪ್ರಶ್ನೆ.

ಶ್ರೀಲಂಕಾದ ಜೂಜು ಅಡ್ಡೆಯಿಂದ ಬಾತ್​ರೂಮ್​ ಸೇರಿದ ನಿವೇದಿತಾ: 'ಐ ಮಿಸ್​ ಯು' ಎನ್ನುತ್ತಲೇ ಕೊಟ್ಟ ಪೋಸ್​ಗೆ ಫ್ಯಾನ್ಸ್​ ಸುಸ್ತು!