ವಿಚ್ಛೇದನದ ನಂತರ ಚರ್ಚೆಯಲ್ಲಿರುವ ನಿವೇದಿತಾ ಗೌಡ, ಈಗ ಸೀರೆಯುಟ್ಟು ಕನ್ನಡ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಸಾಮಾನ್ಯವಾಗಿ ಹಾಟ್ ಫೋಟೋಶೂಟ್‌ಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ನಿವೇದಿತಾ ಅವರ ಈ ಹೊಸ ರೂಪ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಕನ್ನಡದಲ್ಲಿ ಹಾಡಿರುವುದು ಕೂಡಾ ಅಚ್ಚರಿಗೆ ಕಾರಣವಾಗಿದೆ. ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಗಾಯಕ ಚಂದನ್​ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ಮೇಲೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದ ಸೆನ್ಸೇಷನಲ್​ ಆಗಿದ್ದಾರೆ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್​ ಬಾಕ್ಸ್​ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್​ ಆಗಿ ರೀಲ್ಸ್​ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್​ ನೋಡುತ್ತಾರೆ ಎನ್ನುವುದು. ಹಾಟ್​ ಆದಷ್ಟೂ ವ್ಯೂಸ್​ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್​ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್​ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.

ಆ ಮಾತು ಬದಿಗಿರಲಿ. ಇದೀಗ ನಿವೇದಿತಾರ ಹೊಸ ರೀಲ್ಸ್​ಗೆ ಬೈಯಬೇಕೊ, ಹೊಗಳಬೇಕೋ ಗೊತ್ತಾಗದೇ ನೆಟ್ಟಿಗರು ಸುಸ್ತಾಗಿ ಹೋಗಿದ್ದಾರೆ. ಏಕೆಂದರೆ, ನಿವೇದಿತಾ ಬಹುಶಃ ಇದೇ ಮೊದಲ ಬಾರಿಗೆ ಸೀರೆಯುಟ್ಟು ರೀಲ್ಸ್​ ಮಾಡಿದ್ದಾರೆ. ಅದೂ ಕನ್ನಡದ ಹಾಡನ್ನು ಹೇಳಿದ್ದಾರೆ. ಪೂರ್ತಿಯಾಗಿ ಹಾಡು ಕೇಳಿದ ಮೇಲೆ ಅದು ಕನ್ನಡ ಎಂದು ಗೊತ್ತಾಯ್ತು ಎಂದು ಹಲವರು ಕಮೆಂಟ್​ನಲ್ಲಿ ಹೇಳುತ್ತಿದ್ದರೂ, ಸೀರೆಯುಟ್ಟ ನಿವೇದಿತಾರನ್ನು ನೋಡಿ ಬಹಳಷ್ಟು ಮಂದಿ ಶಾಕ್​ ಆಗಿದ್ದಾರೆ. ನಿಜಕ್ಕೂ ಇದು ನಮ್ಮ ನಿವ್ವಿನಾ ಎಂದು ಕೇಳ್ತಿದ್ದಾರೆ. ಮಾತ್ರವಲ್ಲದೇ ನಿವೇದಿತಾರ ಈ ಹೊಸ ವೇಷ ನೋಡಿ ಮುಂದಿನ 24 ಗಂಟೆಗಳಲ್ಲಿ ಸುನಾಮಿಯ ಎಚ್ಚರಿಕೆಯನ್ನೂ ನೆಟ್ಟಿಗರು ನೀಡುತ್ತಿದ್ದಾರೆ!

ಶ್ರೀಲಂಕಾದ ಜೂಜು ಅಡ್ಡೆಯಿಂದ ಬಾತ್​ರೂಮ್​ ಸೇರಿದ ನಿವೇದಿತಾ: 'ಐ ಮಿಸ್​ ಯು' ಎನ್ನುತ್ತಲೇ ಕೊಟ್ಟ ಪೋಸ್​ಗೆ ಫ್ಯಾನ್ಸ್​ ಸುಸ್ತು!

ಅಷ್ಟಕ್ಕೂ ನಿವೇದಿತಾಗೆ ಕನ್ನಡ ಬರುವುದಿಲ್ಲ ಎಂದೇ ಹಲವರು ಹೇಳುತ್ತಾರೆ. ಅದಕ್ಕಾಗಿ ಕನ್ನಡದಲ್ಲಿ ಕೆಟ್ಟ ಕೆಟ್ಟ ಕಮೆಂಟ್​ ಮಾಡಿದರೆ ಆಕೆಗೆ ಅದು ಅರ್ಥವಾಗುವುದಿಲ್ಲ ಎಂದೂ ಹೇಳುವುದು ಉಂಟು. ಆದರೆ, ತಮಗೆ ಕನ್ನಡ ಮಾತನಾಡಲು ಬರುತ್ತದೆ ಎಂದು ಈ ವಿಡಿಯೋ ಮೂಲಕ ತೋರಿಸಿರುವ ನಟಿ, ಸೀರೆಯುಟ್ಟರೆ ಎಷ್ಟು ಮುದ್ದಾಗಿ ಕಾಣಿಸುತ್ತೇನೆ ಎನ್ನುವುದನ್ನೂ ತೋರಿಸಿದ್ದಾರೆ. ಆದರೆ ಇವೆರಡೂ ನೆಟ್ಟಿಗರಿಗೆ ಯಾಕೋ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ನಿನ್ನೆ-ಮೊನ್ನೆಯವರೆಗೆ ಬಾತ್​ ರೂಮ್​, ಬೆಡ್​ ರೂಮ್​ ಅಂತೆಲ್ಲಾ ಹಾಟ್​ ಫೋಟೋಶೂಟ್​ ಮಾಡಿಸಿಕೊಂಡಾಕೆ ಏಕಾಏಕಿ ಸೀರೆಯುಟ್ಟಿದ್ದೂ ಅಲ್ಲದೇ ಕನ್ನಡದಲ್ಲಿ ಹಾಡಿದ್ದು ಕೇಳಿ ಏನೋ ಭಾರಿ ಅನಾಹುತ ಸಂಭವಿಸಲಿದೆ ಎಂದೇ ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. 

 ನಿವೇದಿತಾ ಗೌಡ, ಈಗ ಎಲ್ಲಾ ಹಂತವನ್ನೂ ಮೀರಿ ಹೋಗಿದ್ದಾರೆ ಎಂದು ಇಲ್ಲಿಯವರೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗೊಂಬೆಯಂತೆ ಮುದ್ದುಮುದ್ದಾಗಿ, ಡಿಸೆಂಟ್​ ಆಗಿದ್ದ ನಿವ್ವಿ ಇದ್ಯಾಕೆ ಬಿಕಿನಿ ಮಟ್ಟಿಗೆ ಇಳಿದಳು ಎಂದು ಕೇಳುವವರೇ ಎಲ್ಲಾ. ಕೆಲ ದಿನಗಳಿಂದ ಬಿಕಿನಿಯಲ್ಲಿ ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ತಿರೋ ನಿವೇದಿತಾ, ಇದೀಗ ಮಂಚದ ಮೇಲೇರಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ! ಇದನ್ನು ನೋಡಿದ ನೆಟ್ಟಿಗರು, ಫೋಟೋಶೂಟ್​ ಮಾಡಿದ ಪುಣ್ಯಾತ್ಮ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ! ಹೋದಲ್ಲಿ, ಬಂದಲ್ಲಿ ಬಿಕಿನಿ ಫೋಟೋಶೂಟ್​ ಮಾಡಿಸಿಕೊಳ್ಳಲು ಯಾವ ಫೋಟೋಗ್ರಾಫರ್​ ಅನ್ನು ಅಪಾಯಿಂಟ್​ ಮಾಡಿಕೊಂಡಿದ್ದಿ ಎಂದು ಕೇಳ್ತಿರೋ ನೆಟ್ಟಿಗರು, ಮಂಚದ ಫೋಟೋಶೂಟ್​ ಸಮಯದಲ್ಲಿ ಮುಂದೆ ಇರೋದು ಯಾರು ಎಂದೆಲ್ಲಾ ಪ್ರಶ್ನಿಸಿದ್ದರು. ಆದರೆ ಈಗ ಶಾಕ್​ ಆಗಿದೆ. ನಾಳೆ ಮತ್ತೆ ಇನ್ನೇನೋ ಎನ್ನುವ ಚಿಂತೆಯೂ ಕಾಡುತ್ತಿದೆ ಅಭಿಮಾನಿಗಳಿಗೆ!

ಶ್ರೀಲಂಕಾದ ಪಬ್​ನಲ್ಲಿ ಕನ್ನಡಿಗರ ಜೊತೆ ನಿವೇದಿತಾ ಗೌಡ ಸಂವಾದ! ಅಲ್ಲಿದ್ದೋರು ಕೇಳಿದ್ದೇನು ನೋಡಿ..

View post on Instagram