ಒಲವಿನ ನಿಲ್ದಾಣ: ಮದುವೆಯಾದ ಮಗ ಜತೆಲಿದ್ರೂ ದೂರ ಆಗ್ತಾನೆ; ಮಗ ಸಿದ್ಧಾಂತ್ ದೂರಿದ ನಿರುಪಮಾ
ಎಲ್ಲಾ ತಾಯಿಂದರ ಗತಿನೂ ಇದೇ ಆಗಿರುತ್ತೆ. ಮಗನ್ನ ವಿದ್ಯಾಭ್ಯಾಸ ಕೊಟ್ಟು ಬೆಳೆಸ್ತೀವಿ, ಲೈಫಲ್ಲಿ ಒಂದು ಒಳ್ಳೇ ಹಂತಕ್ಕೆ ತರ್ತೀವಿ. ಪ್ರೀತಿ, ಮಮತೆ ಅನ್ನೋ ಗುಣಗಳನ್ನೆಲ್ಲ ಅವ್ನಿಗೆ ತುಂಬಿ ಹೆಂಡ್ತಿಗೆ ಧಾರೆ ಎರೆದು ಕೊಡ್ತೀವಿ, ಮುಗೀತು ಅಷ್ಟೇ. ಆಮೇಲೆ ಮಗ ಹೆಂಡ್ತಿ ಮಾತು ಕೇಳಿ ಅಮ್ಮನ ಮನಸ್ಸನ್ನೇ ನೋಯಿಸ್ತಾನೆ.

ಸಿದ್ಧಾಂತ್ ತನ್ನ ತಾಯಿ ಬಳಿ ಬಂದು ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. "ಅಮ್ಮಾ ಪವಿತ್ರಾ ಅತ್ತೆ ಮಾತು ಕೇಳಿ ಸುಮ್ನೆ ಮನಸ್ಸಿಗೆ ಬೇಜಾರ್ ಮಾಡ್ಕೋಬೇಡಮ್ಮಾ. ಅವಳು ಹೇಗೆ ಅಂತ ನಿನಗೂ ಗೊತ್ತಲ್ವಾ?" ಎಂದು ಹೇಳಿದ್ದೇ ತಡ, ಸಿದ್ಧಾಂತ್ ವಿರುದ್ಧ ತಿರುಗಿ ಬೀಳುತ್ತಾಳೆ ತಾಯಿ ನಿರುಪಮಾ. "ಹೌದು ಕಣೋ, ಇಷ್ಟು ದಿನ ಮಗ ಅನ್ನೋ ಮಮಕಾರದಲ್ಲಿದ್ದೆ. ಮಗನೇ ಪ್ರಪಂಚ ಅಂದ್ಕೊಂಡಿದ್ದೆ. ಆದ್ರೆ ಈಗ ಅರ್ಥ ಆಗ್ತಾ ಇದೆ, ಪ್ರಪಂಚ ಯಾವ್ದು ಅಂತ. ಅಲ್ಲ, ಪ್ರಾಚಿ ಏನು ತಪ್ಪಿ ಮಾಡಿದ್ಳು ಅಂತ ನೀನು ಅವ್ಳಿಗೆ ಬೈದೆ? ಅವ್ಳು ಜಗದೀಶ್ವರಿ ಮನೆಗೆ ಹೋಗಿ ಕೇಳಿದ್ದು ತಪ್ಪಾ?
ಎಲ್ಲಾ ತಾಯಿಂದರ ಗತಿನೂ ಇದೇ ಆಗಿರುತ್ತೆ. ಮಗನ್ನ ವಿದ್ಯಾಭ್ಯಾಸ ಕೊಟ್ಟು ಬೆಳೆಸ್ತೀವಿ, ಲೈಫಲ್ಲಿ ಒಂದು ಒಳ್ಳೇ ಹಂತಕ್ಕೆ ತರ್ತೀವಿ. ಪ್ರೀತಿ, ಮಮತೆ ಅನ್ನೋ ಗುಣಗಳನ್ನೆಲ್ಲ ಅವ್ನಿಗೆ ತುಂಬಿ ಹೆಂಡ್ತಿಗೆ ಧಾರೆ ಎರೆದು ಕೊಡ್ತೀವಿ, ಮುಗೀತು ಅಷ್ಟೇ. ಆಮೇಲೆ ಮಗ ಹೆಂಡ್ತಿ ಮಾತು ಕೇಳಿ ಅಮ್ಮನ ಮನಸ್ಸನ್ನೇ ನೋಯಿಸ್ತಾನೆ. ಮಗಳು ಮದ್ವೆ ಆದ್ಮೇಲೆ ದೂರ ಆಗ್ತಾಳೆ ಅಂತ ಹೇಳ್ತಾರೆ, ಆದ್ರೆ ಅದು ಸುಳ್ಳು. ಮಗ್ಳು ಮದ್ವೆಯಾಗಿ ಮನೆಯಿಂದ ದೂರ ಇದ್ರೂ ಮನಸ್ಸಿಗೆ ಹತ್ತಿರವೇ ಇರ್ತಾಳೆ. ಆದರೆ, ಮಗ ಜತೆಯಿದ್ರೂ ದೂರ ಆಗ್ತಾನೆ.
ಮಗನಿಗೆ ಊಟದಲ್ಲಿ ವಿಷ ಹಾಕಿ ಸಾಯಿಸ್ಬಿಡಿ ಅಂದಿದ್ರು; ತಾರಾ ಬಳಿ ದುಃಖ ತೋಡಿಕೊಂಡ ಪ್ರತಾಪ್!
ಅಮ್ಮನ ಮಾತು ಕೇಳಿ ಸಿದ್ಧಾಂತ್ ಬೇಸರಗೊಳ್ಳುತ್ತಾನೆ. ಆದರೆ, ಅಮ್ಮನ ಮನಸ್ಸಿಗೆ ನೋವಾಗಿರುವುದನ್ನು ತಿಳಿದು ತಾನೂ ನೋವು ಪಡುತ್ತಾನೆ. ಅಮ್ಮನ ಎದುರಿನಿಂದ ಹೊರಟ ಆತ ಬಾಗಿಲ ಬಳಿ ಹೋಗಿ ಮನಸ್ಸಿನಲ್ಲಿ "ಅಮ್ಮಾ, ನಿನ್ನ ಮಗ ನಿನಗೆ ಯಾವತ್ತೂ ದ್ರೋಹ ಮಾಡುವುದಿಲ್ಲ. ನಿನ್ನ ಮಗನನ್ನು ಅಪಾರ್ಥ ಮಾಡಿಕೊಳ್ಳಬೇಡ ಅಮ್ಮಾ' ಎನ್ನುತ್ತ ಅಮ್ಮನ ರೂಮಿನಿಧ ಹೊರಡುತ್ತಾನೆ. ಒಲವಿನ ನಿಲ್ದಾಣ ಧಾರಾವಾಹಿಯ ಈ ಸೀನ್ ಎಂಥವರ ಹೃದಯವನ್ನೂ ಕಲಕುವಂತಿದೆ. ಇಂದಿನ ಈ ಸಂಚಿಕೆ ನೋಡಿದರೆ ಹಿಂದೆ-ಮುಂದೆ ಈ ಧಾರಾವಾಹಿಯಲ್ಲಿ ಏನಾಗಿದೆ-ಏನಾಗಲಿದೆ ಎಂಬುದು ತಿಳಿದು ಬರಲಿದೆ. ಅಂದಹಾಗೆ, ಈ ಸೀರಿಯಲ್ ಸೋಮವಾರದಿಂದ ಶನಿವಾರ ಸಂಜೆ 5.00ಕ್ಕೆ ಪ್ರಸಾರವಾಗುತ್ತಿದೆ.