Asianet Suvarna News Asianet Suvarna News

ಮಗನಿಗೆ ಊಟದಲ್ಲಿ ವಿಷ ಹಾಕಿ ಸಾಯಿಸ್ಬಿಡಿ ಅಂದಿದ್ರು; ತಾರಾ ಬಳಿ ದುಃಖ ತೋಡಿಕೊಂಡ ಪ್ರತಾಪ್!

"ಯಾಕೆ ನಿನಗೆ ಊಟದಲ್ಲಿ ಏನೋ ಹಾಕಲು ಹೇಳಿದ್ದು?" ಎಂದು ಕೇಳಿದ ತಾರಾಗೆ ಪ್ರತಾಪ್ "ನಾನು ದುಡ್ಡು ಮಾಡಿದೀನಿ, ಡ್ರೋನ್ ಬಗ್ಗೆ ಏನೇನೋ ಮಾತಾಡಿದೀನಿ..ಅಂತ" ಎಂದಿದ್ದಾನೆ. ತಾರಾ ಮುಂದೆ ಮಾತನಾಡಿರುವ ಡ್ರೋನ್ ಪ್ರತಾಪ್ ಕೊನೆಯಲ್ಲಿ ಬೇಸರದಿಂದ ಕಣ್ಣೀರಾಗಿದ್ದಾನೆ. 

Drone Prathap says somebody told to kill him by putting something in his meals srb
Author
First Published Oct 25, 2023, 1:49 PM IST

ಬಿಗ್ ಬಾಸ್ ಮನೆಗೆ ನಟಿ ತಾರಾ ಅನುರಾಧಾ ವಿಜಯದಶಮಿ ದಿನ ಅತಿಥಿಯಾಗಿ ಬಂದಿದ್ದರು. ಅಲ್ಲಿ ಅವರು ಹಲವು ಸ್ಪರ್ಧಿಗಳನ್ನು ಮಾತನಾಡಿಸಿದ್ದಾರೆ. ಅವರಲ್ಲೊಬ್ಬರು ಡ್ರೋನ್ ಪ್ರತಾಪ್. ನಟಿ ತಾರಾ ಡ್ರೋನ್ ಪ್ರತಾಪ್ ಪಕ್ಕದಲ್ಲಿ ಕುಳಿತು ತಾಯಿ ಮಮತೆ ವ್ಯಕ್ತಪಡಿಸುತ್ತ 'ನಾನು ನಿನ್ನ ತಾಯಿ ಅಂದ್ಕೊಂಡು ಹೇಳು, ಸುಳ್ಳು ಹೇಳ್ಬೇಡ.. ನೀನು ಏನೋ ಹೇಳ್ಬೇಕು ಅಂತ ಇದ್ದೀಯ, ಅದನ್ನು ಹೇಳು ಅಂತ ಡ್ರೋನ್ ಪ್ರತಾಪ್ ಕೈ ಹಿಡಿದು ಮಮತಾಮಯಿಯಂತೆ ಕೇಳಿದ್ದಾರೆ. ಅದನ್ನು ಕಂಡು ಡ್ರೋನ್ ಪ್ರತಾಪ್ ತಾರಾ ಮಮತೆಗೆ ಕರಗಿ ನೀರಾಗಿ ಇಲ್ಲಿವರೆಗೂ ಸೀಕ್ರೆಟ್‌ ಆಗಿದ್ದ ಒಂದು ಸಂಗತಿ ಬಿಚ್ಚಿಟ್ಟಿದ್ದಾನೆ. 

'ನಾನು ಕೆಲವು ತಪ್ಪು ಮಾಡಿದಾಗ ಮನೆಯವರಿಗೆ ಹಲವರು ಕಾಲ್ ಮಾಡಿ 'ನಿಮ್ ಮಗಂಗೆ ಊಟದಲ್ಲಿ ಏನಾದ್ರೂ ಹಾಕಿ ಸಾಯಿಸ್ಬಿಡಿ.. ಅಂಥ ಮಗ ಯಾಕ? ಅವನು ಎಲ್ಲ ಕಡೆ ನಿಮ್ಮ ಮರ್ಯಾದೆ ತಗೆದಿದ್ದಾನೆ' ಎಂದಿದ್ದಾರೆ. ಮುಂದುವರಿದ ಪ್ರತಾಪ್ 'ನಾನು ನನ್ನ ಅಪ್ಪ, ತಂಗಿ ನಂಬರ್‌ ಅನ್ನು ಬ್ಲಾಕ್ ಮಾಡಿದ್ದೇನೆ, ಅಮ್ಮನ ನಂಬರ್ ಕೂಡ ಬ್ಲಾಕ್ ಮಾಡಿದ್ದೇನೆ. ನನಗೆ ಮುದುವೆ ವಯಸ್ಸಿಗೆ ಬಂದಿರುವ ತಂಗಿ ಇದ್ದಾಳೆ'ಎಂದಿದ್ದಾನೆ. ಆತನ ಮಾತಿಗೆ ತಾರಾ ಬೇಸರಗೊಂಡು ಮರುಪ್ರಶ್ನೆ ಕೇಳಿದ್ದಾರೆ. 

'ಯಾಕೆ ನಿನಗೆ ಊಟದಲ್ಲಿ ಏನೋ ಹಾಕಲು ಹೇಳಿದ್ದು?' ಎಂದು ಕೇಳಿದ ತಾರಾಗೆ ಪ್ರತಾಪ್ 'ನಾನು ದುಡ್ಡು ಮಾಡಿದೀನಿ, ಡ್ರೋನ್ ಬಗ್ಗೆ ಏನೇನೋ ಮಾತಾಡಿದೀನಿ..ಅಂತ' ಎಂದಿದ್ದಾನೆ. ತಾರಾ ಮುಂದೆ ಮಾತನಾಡಿರುವ ಡ್ರೋನ್ ಪ್ರತಾಪ್ ಕೊನೆಯಲ್ಲಿ ಬೇಸರದಿಂದ ಕಣ್ಣೀರಾಗಿದ್ದಾನೆ. ಆದರೆ, 'ಡ್ರೋನ್ ಪ್ರತಾಪ್ ದುಡ್ಡು ಮಾಡಿದ್ದಕ್ಕೆ ಮನೆಯವರು ಬೇಸರಗೊಂಡಿದ್ದು ನಿಜವೇ' ಎಂಬುದು ಹಲವರಿಗೆ ಪ್ರಶ್ನೆಯಾಗಿ ಕಾಡುತ್ತಿದೆ. 

ಏಕೆಂದರೆ, 'ದುಡ್ಡು ಮಾಡಿಲ್ಲ ಅಂತ ಮನೆಯವರು ಬೇಸರ ಮಾಡಿಕೊಳ್ಳುವುದು ಹೆಚ್ಚಿನ ಮನೆಗಳಲ್ಲಿ ಸಾಮಾನ್ಯ ಸಂಗತಿ. ದುಡ್ಡು ಮಾಡಿಕೊಂಡರೆ ಬೇಸರ ಯಾಕೆ ಮಾಡಿಕೊಂಡಿರಬಹುದು' ಎಂಬ ಹಲವರ ಪ್ರಶ್ನೆಗೆ ಪ್ರತಾಪ್ ಅಥವಾ ಆತನ ಮನೆಯವರು ಉತ್ತರ ಸರಿಯಾಗಿ ಉತ್ತರ ಕೊಡಬೇಕಷ್ಟೇ! ಯಾರಿಗೆ ಗೊತ್ತು, ಬೇರೆ ಬೇರೆ ಮನೆಗಳಲ್ಲಿ ಮನೆಯ ಸದಸ್ಯರ ಮೆಂಟಾಲಿಟಿ ಬೇರೆಯೇ ಇರಬಹುದು ಎನ್ನಬಹುದು. ಪ್ರತಾಪ್ ಹಾಗೂ ಅವರ ಮನೆಯವರ ಬಗ್ಗೆ ನಮಗೇನು ಗೊತ್ತು ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಮೆಂಟ್ ಮಾಡಿದ್ದಾರೆ. 

Bigg Boss Kannada: ನಿನ್ನನ್ನು ಪರಿಚಯಿಸಲು ನಿನ್ನಪ್ಪ ಯಾಕೆ ಬಂದಿಲ್ಲ, ನಂಗೊತ್ತು ಆ ಗುಟ್ಟು ಎಂದ ಸುದೀಪ್

ಒಟ್ಟಿನಲ್ಲಿ ನಟಿ ತಾರಾ ಬಿಗ್ ಬಾಸ್ ಮನೆಯಲ್ಲಿ ಹಲವರನ್ನು ಮಾತನಾಡಿಸಿದ್ದಾರೆ. ಡ್ರೋನ್ ಪ್ರತಾಪ್ ಮಾತುಗಳನ್ನು ತಮ್ಮ ಆಫೀಸಿಯಲ್ ಇನ್‌ಸ್ಟಾಗ್ರಾಂನಲ್ಲಿ ಪ್ರೊಮೋ ಆಗಿ ಹರಿಯಬಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ಯಾರುಯಾರು ಏನೇನು ಮಾತನಾಡಿದ್ದಾರೆ ಎಂದು ತಿಳಿಯಲು 'jioCinema'24 ಗಂಟೆಗಳ ನಿರಂತರ ಹಾಗೂ  ಉಚಿತ ಪ್ರಸಾರವನ್ನು ವೀಕ್ಷಿಸಬಹುದು. 

ಬಿಗ್ ಬಾಸ್ ಕನ್ನಡ: ದೊಡ್ಮನೆಯಲ್ಲಿ ಫೈರ್ ಕ್ಯಾಂಪ್, ಹಲವು ಕತೆಗಳು ಕಣ್ಣೀರಾಗಿ ಹರಿದವು!

ಬಿಗ್ ಬಾಸ್ ಮನೆಯಲ್ಲಿ ಏನೇನು ಆಗುತ್ತಿದೆ ಎಂದು ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ 24 ಗಂಟೆ ಉಚಿತ ನೇರಪ್ರಸಾರವನ್ನು ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು 'Colors Kannada'ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು. 

Follow Us:
Download App:
  • android
  • ios