ಇಲ್ಲಿ ಕ್ಷಮಾ ಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟು ಹೋದಾಗ ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತು, ತನ್ನ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸಾಕಿ ಬೆಳೆಸುತ್ತಾಳೆಯೇ, ಸಮಾಜ ಕೂಡ ಒಂಟಿ ಹೆಣ್ಣಿಗೆ ಸ್ವತಂತ್ರವಾಗಿ ಬದುಕುವ ಅವಕಾಶ ಕೊಡುತ್ತದೆಯೇ ಎಂಬ ಕತೆ ಈ ಧಾರಾವಾಹಿಯದು. ಕ್ಷಮಾ ಪಾತ್ರದಲ್ಲಿ ಶ್ವೇತಾ ರಾವ್ ನಟಿಸುತ್ತಿದ್ದಾರೆ. ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ, ಮಾಲತಿ ಮೈಸೂರು ಇತರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.