ಮಗುವಿಗಾಗಿ ಬಾಲ್ಕನಿಗೆ ಸೇಫ್ಟಿ ಮಾಡಿದ ವೈಷ್ಣವಿ ಗೌಡ! ಮನೆಯಲ್ಲಿ ಏನೇನಿವೆ? ಹೋಮ್‌ ಟೂರ್ ವಿಡಿಯೋ ವೈರಲ್

ಸೀತಾರಾಮ ಸೀರಿಯಲ್ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು, ತಮ್ಮ ಮನೆಯ ಟೂರ್‍‌ ಮಾಡಿಸಿದ್ದಾರೆ. ಇವರ ಮನೆಯಲ್ಲಿ ಏನೆಲ್ಲಾ ಇವೆ ನೋಡಿ...
 

Seetarama serial Seetha urf Vaishnavi Gowdas room tour video gone viral suc

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ಸೀತಾ ಅರ್ಥಾತ್‌ ವೈಷ್ಣವಿ ಗೌಡ ಅವರು ಸೋಷಿಯಲ್‌ ಮೀಡಿಯಾದಲ್ಲಿಯೂ ಸಕತ್‌ ಆಕ್ಟೀವ್‌ ಆಗಿದ್ದಾರೆ. ಕೆಲ ದಿನಗಳಿಂದ ಅವರು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಿರಲಿಲ್ಲ. ಇದೀಗ ತಮ್ಮ ಮನೆಯ ಟೂರ್‍‌ ಮಾಡಿಸಿದ್ದಾರೆ. ಇದಕ್ಕೆ ಅವರು ರೂಮ್‌ ಟೂರ್ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಮನೆಯಲ್ಲಿ ಯಾವೆಲ್ಲಾ ವಸ್ತುಗಳನ್ನು ಇಟ್ಟುಕೊಂಡಿದ್ದೇನೆ ಎನ್ನುವುದನ್ನು ಅವರು ಈ ವಿಡಿಯೋದಲ್ಲಿ ತೋರಿಸಿದ್ದಾರೆ, ಜೊತೆಗೆ ತಮ್ಮ ಕೋಣೆಗೆ ಯಾವ ರೀತಿಯ ಡಿಸೈನ್‌ ಮಾಡಲಾಗಿದೆ ಎನ್ನುವುದನ್ನು ತೋರಿಸಿದ್ದಾರೆ. ಎಲ್ಲಕ್ಕಿಂತ ವೈಷ್ಣವಿ ಅವರ ಫ್ಯಾನ್ಸ್‌ ಗಮನ ಹೋದದ್ದು ಬಾಲ್ಕನಿಯ ಮೇಲೆ. ಬಾಲ್ಕನಿಗೆ ಎತ್ತರದ ತಡೆಗೋಡೆ ಹಾಕಿರುವುದನ್ನು ವಿವರಿಸುತ್ತಲೇ ನಟಿ, ಮಗುವಿನ ಸೇಫ್ಟಿಗಾಗಿ ಎಂದು ಹೇಳಿದ್ದಾರೆ. ಇದು ಇವರ ಅಭಿಮಾನಿಗಳ ಕಿವಿಯನ್ನು ನೆಟ್ಟಗಾಗಿಸಿದೆ. ಅಂದರೆ ಮದುವೆಯ ಸುಳಿವು ಕೊಟ್ಟಿದ್ದಾರೆ ನಟಿ ಎನ್ನುವ ಕಮೆಂಟ್ಸ್‌ ಬಂದಿವೆ. ಆದರೆ ಕೊನೆಯಲ್ಲಿ ನಟಿ, ಮಕ್ಕಳು ಬಂದರೆ ಅವರು ಬೀಳಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಿರುವುದಾಗಿ ಹೇಳಿದ್ದಾರೆ.

ಮನೆಯ ಒಳಗಡೆ ಮ್ಯಾನಿಫೆಸ್ಟೇಷನ್ ಮಾಡುವ ಹಲವು ಸಾಧನಗಳನ್ನು ನಟಿ ಇರಿಸಿಕೊಂಡಿದ್ದಾರೆ. ಯೋಗ, ಧ್ಯಾನವನ್ನೂ ಇವರು ಮಾಡುವ ಕಾರಣ ಅಂಥ ಸಾಧನಗಳನ್ನು ಇವರ ಕೊಠಡಿಗಳಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ನಟಿ, ಈ ಹಿಂದಿನ ವಿಡಿಯೋಗಳಲ್ಲಿ ನಾವು ಅಂದುಕೊಂಡದ್ದು ಆಗಬೇಕು ಎಂದರೆ ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆಯೇ, ಒಂದು ಡಬ್ಬದಲ್ಲಿ ತಮ್ಮ ಕನಸುಗಳನ್ನು ಬರೆದು ಇಟ್ಟಿರುವುದನ್ನು ಕೂಡ ನಟಿ ತೋರಿಸಿದ್ದಾರೆ. ತಾವು ಎಲ್ಲಿಗೆ ಹೋಗುವುದಾದರೂ ಕೆಟ್ಟ ದೃಷ್ಟಿ, ನೆಗೆಟಿವ್​ ಎನರ್ಜಿ ಬಳಿಗೆ ಸುಳಿಯಬಾರದು ಎನ್ನುವ ಕಾರಣಕ್ಕೆ, ಲವಂಗ, ಏಲಕ್ಕಿ ಹಾಗೂ ಚಕ್ಕೆಯ ಚೂರುಗಳನ್ನು ಚಿಕ್ಕ ಪರ್ಸ್​ನಲ್ಲಿ ಇಟ್ಟುಕೊಂಡು ಹೋಗುವುದಾಗಿ ಈ ಹಿಂದೆ ಅವರು ಹೇಳಿದ್ದರು.  ಇದರ ಮಹತ್ವವನ್ನೂ ಅವರು ತಿಳಿಸಿಕೊಟ್ಟಿದ್ದರು.

ಸೀತಾರಾಮ ಸೀತಾ ಮದ್ವೆ ಯಾವಾಗ? ಹುಡುಗ ಯಾರು? ಸಂಪೂರ್ಣ ಡಿಟೇಲ್ಸ್​ ಕೊಟ್ಟ ನಟಿ ವೈಷ್ಣವಿ ಗೌಡ
 
ಇದರ ಜೊತೆ ವಿಶೇಷವಾದ ಎಲೆಯ ಪರಿಚಯ ಅವರು ಮಾಡಿಸಿದ್ದರು.  ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುವ ಪಲಾವಿನ ಎಲೆ ಇದು. ಬೇ ಲೀಫ್​ ಎಂದು ಇಂಗ್ಲಿಷ್​ನಲ್ಲಿ ಕರೆಯಲಾಗುತ್ತದೆ. ಅದರ ಮೇಲೆ ತನಗೆ ಏನು ಆಗಬೇಕು ಎನ್ನುವ ವಿಷ್​ಗಳನ್ನು ಬರೆದು, ಒಂದು ಪ್ಲೇಟ್​ನಲ್ಲಿ ಅವುಗಳಿಗೆ ಬೆಂಕಿ ಹಚ್ಚಿ ಬೂದಿ ಮಾಡಿ, ಅದನ್ನು ಗಾಳಿಯಲ್ಲಿ ಬಿಡುವಂತೆ ಹೇಳಿದ್ದರು. ಇದರಿಂದ ಯಾವುದೋ ರೂಪದಲ್ಲಿ ವಿಷ್​ ನೆರವೇರುವುದಾಗಿ ಹೇಳಿದ್ದರು. ಇದರ ಜೊತೆಗೆ ಉಗುರುಬೆಚ್ಚಗಿನ ನೀರಿನಲ್ಲಿ ಕಲ್ಲು ಉಪ್ಪು ಹಾಕಿಕೊಂಡು ಒಂದು ಬಕೆಟ್​ನಲ್ಲಿ ಸ್ವಲ್ಪ ಸಮಯ ಕಾಲನ್ನು ಹಾಕಿ ಕುಳಿತುಕೊಂಡರೆ ನೆಗೆಟಿವ್​ ಎನರ್ಜಿ ಹೋಗುವುದಾಗಿ ಹೇಳಿದ್ದರು. ಅದರಂತೆಯೇ ಆ ಎಲ್ಲಾ ಸಾಮಗ್ರಿಗಳನ್ನು ಹೆಚ್ಚಾಗಿ ಇವರ ಮನೆಯಲ್ಲಿ ಅದರಲ್ಲಿಯೂ ಇವರ ಕೋಣೆಯಲ್ಲಿ ನೋಡಬಹುದಾಗಿದೆ.  
  
ಈ ಹಿಂದೆ, ಟ್ಯಾರೋ ಕಾರ್ಡ್ ಓದುವಿಕೆ ಮೂಲಕ ರೀಡರ್‍‌ ಜಯಶ್ರೀ ಅವರಿಂದ ತನ್ನ  ಮದುವೆಯ ಬಗ್ಗೆ ಕೇಳಿದ್ದರು ವೈಷ್ಣವಿ.  ತಮ್ಮ ಮದುವೆ, ಹುಡುಗ ಯಾರ ರೀತಿ ಇರ್ತಾನೆ ಇತ್ಯಾದಿಗಳ ಬಗ್ಗೆ ಕೇಳಲು ಉತ್ಸುಕರಾಗಿದ್ದರು. ಆದರೆ ಈ ಬಗ್ಗೆ ಜಯಶ್ರೀ ಅವರು ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡರಲಿಲ್ಲ. ಭವಿಷ್ಯದಲ್ಲಿ ಯಾರಿಗಾದ್ರೂ ಏನಾದರೂ ಸಹಾಯ ಮಾಡುವುದಿದ್ದರೆ ಯೋಚನೆ ಮಾಡಿ ಮಾಡಬೇಕು. ನಿಮಗೆ ಕಾಲೆಳೆಯುವವರೇ ಜಾಸ್ತಿ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ. ಏನಾದ್ರೂ ಹೊಸತು ಮಾಡುವುದಿದ್ದರೆ, ಯಾರಿಗೂ ಹೇಳಬೇಡಿ ಎಂದಿದ್ದರು. ರಿಲೇಷನ್​ಷಿಪ್​ಗೆ ತುಂಬಾ ಟೈಂ ಕೊಡಿ. ಮೊದಲು ನಿಮ್ಮ ಮನಸ್ಸನ್ನು ನೀವು ಬ್ಯಾಲೆನ್ಸ್​ ಮಾಡಬೇಕು. ಆಮೇಲೆ ಮುಂದುವರೆಯಬೇಕು ಎಂದು ಮದುವೆಯ ಬಗ್ಗೆ ಅವರು ಎಚ್ಚರಿಕೆ ಕೊಟ್ಟಿದ್ದರು. ಮದುವೆ, ರಿಲೇಷನ್​ಷಿಪ್​ಗೆ ಇಂತಿಷ್ಟೇ ಟೈಂ ಎಂದು ಇಟ್ಟುಕೊಳ್ಳಬೇಡಿ. ಯಾರ ಜೊತೆಗಾದರೂ ಒಂದೇ ಸಲಕ್ಕೆ ಡಿಸೈಡ್​ ಮಾಡಬೇಡಿ. ಒಂದಷ್ಟು ದಿನ ತೆಗೆದುಕೊಂಡು, ಆ ವ್ಯಕ್ತಿ ನಿಮಗೆ ಸರಿ ಎನ್ನಿಸಿದರೆ ನೀವು ಮುಂದುವರೆಯಬೇಕು. ಆದರೆ ಅದಕ್ಕೂ ಮೊದಲು ಮನಸ್ಸಿನ ಮೇಲೆ ಸಾಕಷ್ಟು ಸಂಯಮ ಸಾಧಿಸಬೇಕು. ಎಲ್ಲರನ್ನೂ ನಮ್ಮವರು ಎಂದುಕೊಳ್ಳಬಾರದು ಎಂದಿದ್ದರು. ಇದರ ನಡುವೆಯೇ ಈಗ ಮಗುವಿನ ಬಗ್ಗೆ ಮಾತನಾಡಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸಿದೆ. 

ನಟಿ ಸುಮಲತಾ ಅಂಬರೀಶ್‌ಗೆ ಬ್ಯೂಟಿ ಕ್ವೀನ್‌ ಕಿರೀಟ: ಕುತೂಹಲದ ಮಾಹಿತಿ ಶೇರ್ ಮಾಡಿದ ಸಂಸದೆ

Latest Videos
Follow Us:
Download App:
  • android
  • ios