Asianet Suvarna News Asianet Suvarna News

BBK8: ಟಿಕ್‌ಟಾಕ್‌ ಮಾಡೋದೇ ಟ್ಯಾಲೆಂಟ್‌, ಹಿಗ್ಗಾಮುಗ್ಗ ಟ್ರೋಲ್‌ ಆಗುತ್ತಿರುವ ಸ್ಪರ್ಧಿಗಳು!

ಸೀಸನ್‌ 8 ಯಾರಿಗೋಸ್ಕರ ನೋಡಬೇಕು? ಗೊತ್ತಿರುವವರು, ಗೊತ್ತಿಲ್ಲದವರನ್ನು ಒಟ್ಟಿಗೆ ನೋಡಬೇಕಾ? ಇoದೊಂದು ಜಾತ್ರೆ ಎಂದ ಟ್ರೋಲಿಗರು....
 

Netizens criticize colors Kannada Bigg boss 8 celebrity selection vcs
Author
Bangalore, First Published Mar 2, 2021, 4:22 PM IST

ಬಿಗ್‌ ಬಾಸ್‌ ಸೀಸನ್‌ 8ಕ್ಕೆ ಸ್ಪರ್ಧಿಗಳಾಗಿ ಆಯ್ಕೆ ಆಗಿರುವ ಕೆಲವು ವ್ಯಕ್ತಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ ಪೇಜ್‌ಗಳಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿವೆ. ವಾಹಿನಿಯವರಿಗೆ ಕೆಲವೊಂದು ಪ್ರಶ್ನೆಗಳ ಸವಾಲ್ ಹಾಕಿದ್ದಾರೆ ನೆಟ್ಟಿಗರು. 

ಮೊದಲ ದಿನವೇ ಯಾರಿಗೆಲ್ಲ ನಾಮಿನೇಶನ್ ಶಾಕ್, ದಿವ್ಯಾ ಎತ್ತಿಕೊಂಡ ಸಂಬರಗಿ! 

ಬಿಗ್‌ಬಾಸ್‌ ಸೀಸನ್‌ 1 ಆರಂಭದಿಂದಲೂ ಸಿನಿಮಾ ತಾರೆಯರಿಗೆ ಅಥವಾ ಶ್ರೀಸಾಮಾನ್ಯನಿಗೆ ಪ್ರವೇಶವಿತ್ತು. ಕಾಮನ್ ಮ್ಯಾನ್ ಆಗಿದ್ದರೂ ಜೀವನದಲ್ಲಿ ಏನಾದರೂ ಸಾಧನೇ ಮಾಡಿರಬೇಕು. ಇಲ್ಲವಾದರೆ ಯಾವುದಾದರೂ ಒಂದು ಗುರಿ ಹೊಂದಿರಬೇಕು. ಒಂದು ಸೀಸನ್‌ ಸೆಲೆಬ್ರಿಟಿಗಳಿಗೆ ಮೀಸಲಿಟ್ಟರೆ, ಮತ್ತೊಂದು ಸೀಸನ್‌ ಸೆಲೆಬ್ರಿಟಿ ವಿತ್ ಕಾಮನ್ ವ್ಯಕ್ತಿಗಳು ಇರುತ್ತಾರೆ. ಆದರೆ ಈಗ ಬಂದಿರುವ ಸ್ಪರ್ಧಿಗಳೆಲ್ಲಾ ಸೆಲೆಬ್ರಿಟಿಗಳೇ......

Netizens criticize colors Kannada Bigg boss 8 celebrity selection vcs

ಆದರೆ, ನೆಟ್ಟಿಗರಿಗೆ ಬೇಸರವಾಗಿರುವುದು ಏನೆಂದರೆ ಕೇವಲ ಒಂದು ಆ್ಯಪ್‌ ಬಳಸಿ ಹೆಸರು ಮಾಡಿದವರನ್ನು ನಿಜವಾದ ಟ್ಯಾಲೆಂಟ್‌ ಎಂದು ಕರೆದು ಮನೆಯೊಳಗೆ ಸೇರಿಸಿಕೊಳ್ಳಲಾಗಿದೆ. ಹೌದು! ಟಿಕ್‌ಟಾಕ್‌ ಆಗಲಿ ಅಥವಾ ಇನ್‌ಸ್ಟಾಗ್ರಾಂ ಆಗಲಿ ಇದರಲ್ಲಿ ಅಬ್ಬಬ್ಬಾ ಅಂದ್ರೆ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿ ಕೊಂಡಿರುತ್ತಾರೆ. ಯಾರೋ ಹೇಳಿರುವ ಡೈಲಾಗ್‌ಗೆ ಲಿಪ್‌ ಸಿಂಕ್ ಮಾಡಿರುತ್ತಾರೆ. ಅವರಿಗೆ ಇಂತಹ ದೊಡ್ಡ ಅವಕಾಶ ಕೊಟ್ಟರೆ, ನಿಜವಾದ ಟ್ಯಾಲೆಂಟ್‌ಗೆ ಬೆಲೆ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ. 

BBK8: ಮೊದಲ ದಿನವೇ ದಿವ್ಯಾ ಸುರೇಶ್ ಪ್ರೀತಿಯ ಬಲೆಗೆ ಬಿದ್ದ ಲ್ಯಾಗ್ ಮಂಜು! 

Netizens criticize colors Kannada Bigg boss 8 celebrity selection vcs

ಸೋಷಿಯಲ್ ಮೀಡಿಯಾದಲ್ಲಿ ಕೆಲವೊಬ್ಬರು ಇದನ್ನು ನೋಡಿ ಜಾತ್ರೆ ಮನೆ ಎಂದೂ ಕರೆಯುತ್ತಿದ್ದಾರೆ.  ಇನ್‌ಸ್ಟಾಗ್ರಾಂ ಮೂಲಕ ಹೆಸರು ಮಾಡಿರುವ ವ್ಯಕ್ತಿಗಳನ್ನು ಬೆಳೆಸಿರುವುದು ಟ್ರೋಲ್ ಪೇಜ್‌ಗಳು, ಸಿನಿಮಾ ಪ್ರಚಾರ ಹೆಸರು ಮಾಡಬೇಕು ಅಂದ್ರೆ ಮೊದಲು ಟ್ರೋಲ್ ಪೇಜ್‌ ಹುಡುಕುತ್ತೀರಾ? ಆದರೆ ಯಾರಾದರೂ ಒಬ್ಬ ಟ್ರೋಲ್‌ ಅಡ್ಮಿನ್‌ನ ಕರೆಯಬೇಕಿತ್ತು ಎಂದು ಬರೆದು ಕೊಂಡಿದ್ದಾರೆ.  ಸೀಸನ್‌ 5ರಲ್ಲಿ ನಿವೇದಿತಾ ಗೌಡ ಕಾಮನ್ ವ್ಯಕ್ತಿಗಳ ಸಾಲಲ್ಲಿ ಎಂಟ್ರಿ ಕೊಟ್ಟಿದ್ದರು. ಆದರೆ ಈ ಸಲ ಟಿಕ್‌ಟಾಕ್‌ ಮಾಡುವವರನ್ನೂ ಸೆಲೆಬ್ರಿಟಿಗಳು ಎಂದು ಪರಿಗಣಿಸಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಆದರೂ, ಮನೆಯೊಳಗೆ ಬಂಧಿಯಾಗಿರುವವರು ಹೇಗೆ ಆಟ ಆಡುತ್ತಾರೋ ನೋಡಬೇಕು.

Follow Us:
Download App:
  • android
  • ios