ಬೆಂಗಳೂರು(ಮಾ.  01) ಬಿಗ್ ಬಾಸ್ ಮೇಲಿಂದ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ. ಮೊದಲ ದಿನವೇ ಕೆಲವರಿಗೆ ನಾಮಿನೇಶನ್ ಶಾಕ್ ಸಿಕ್ಕಿದೆ.  ಹದಿನೇಳು ಚೆಂಡುಗಳ ಮೂಲಕ ಬಿಗ್ ಬಾಸ್ ಮನೆಯವರನ್ನು ತಂಡಗಳನ್ನಾಗಿ ಮಾಡಿದರು.  ನಂತರ ಕೆಂಪು ತಂಡಕ್ಕೆ ನಾಯಕತ್ವ ಅವಕಾಶ ನೀಡಿ ಮೊದಲ ಗೇಮ್ ಆಡಿಸಿದರು.

ಬಾಕ್ಸಿಂಗ್  ಗೇಮ್  ಮೂಲಕ ಗೇಮ್ ನಡೆಸಿದಾಗ ನಿಧಿ, ಶುಭಾ, ಧನುಶ್ರೀ,  ಬಾ ಗುರು ಬ್ರೋ ಗೌಡ ಶಮಂತ್, ನಿರ್ಮಲಾ ನಡುವೆ ಸ್ಪರ್ಧೆ ನಡೆದು ಅಂತಿಮವಾಗಿ ಈ ಸಾರಿಯ ಬಿಗ್ ಬಾಸ್ ಮನೆಯ ಮೊದಲ ವಾರದ ಕ್ಯಾಪ್ಟರ್ ಆಗಿ ಶಮಂತ್ ಸೆಲೆಕ್ಟ್ ಆದರು.

ದೊಡ್ಡ ಮನೆಗೆ ಎಂಟ್ರಿ ಕೊಟ್ಟವರ ಸಂಪೂರ್ಣ ಪಟ್ಟಿ

ಇನ್ನೊಂದು ಕಡೆ ಲ್ಯಾಗ್ ಮಂಜ ಮತ್ತು ದಿವ್ಯಾ ಸುರೇಶ್ ನಡುವೆ ಕಹಾನಿ ಆರಂಭವಾದಂತೆ ಕಂಡಿತು. ದಿವ್ಯಾ ಅವರ ಹಿಂದೆಯೇ ಬಿದ್ದು ನಿಮಗೋಸ್ಕರ ಏನು ಬೇಕಾದರೂ ಮಾಡ್ತಿನಿ ಅಂಥ ಲ್ಯಾಗ್ ಮಂಜ ಹೇಳಿದರು.

ಉಳಿದ ತಂಡಗಳ ನಡುವೆ ಗೇಮ್ ನಡೆಸಿ ಲೂಸರ್ ನ್ನು ಸೆಲೆಕ್ಟ್ ಮಾಡಲು ಹೇಳಲಾಯಿತು.  ಅಂತಿಮವಾಗಿ ನಿರ್ಮಲಾ ತಮ್ಮನ್ನು ತಾವೇ ಲೂಸರ್ ಎಂದು ಅಪ್ಪಿಕೊಂಡರು ನಾಮಿನೇಶನ್  ಗೆ ಗುರಿಯಾದರು.

ಪ್ರಶಾಂತ್ ಸಂಬರಗಿ ಮತ್ತು  ತೀರ್ಥಹಳ್ಳಿ ದಿವ್ಯಾ ಮಾತುಕತೆ  ಜೋರಾಗಿದ್ದು. ಟಾಸ್ಕ್ ಗೆದ್ದ ಸಂಭ್ರಮದಲ್ಲಿ ದಿವ್ಯಾ ಅವರಮನ್ನು  ಪ್ರಶಾಂತ್ ಎತ್ತಿಕೊಂಡುನ ಹೋಗಿ ಸೋಫಾ ಮೇಲೆ ಮಲಗಿಸಿದರು.

ನಾಮಿನೇಶನ್ ಶಾಕ್; ಮೊದಲ ವಾರ  ಮನೆಯ ಬಹುತೇಕರು ಶಂಕರ್ ಅಶ್ವಥ್ ಅವರನ್ನು ವಯಸ್ಸಿನ ಕಾರಣ  ನಾಮಿನೇಶನ್ ಮಾಡಿದ್ದರು. ಆದರೆ ನಾಯಕನಿಗೆ ಕೊಟ್ಟ ಅವಕಾಶದಲ್ಲಿ ಅವರ ಮಾರ್ಗದರ್ಶನ ಬೇಕು ಎಂದು ಶಮಂತ್ ಉಳಿಸಿಕೊಂಡರು.

ಓಪನ್  ನಾಮಿನೇಶನ್ ಜೋರಾಗಿಯೇ ಇತ್ತು. ಗೀತಾ ಭಾರತಿ ಭಟ್ ಪ್ರಶಾಂತ್ ಸಂಬರಗಿ ಅವರನ್ನು ನಗುನಗುತ್ತಲೇ ನಾಮಿನೇಟ್ ಮಾಡಿದರು. ಅಂತಿಮವಾಗಿ ಮನೆಯಲ್ಲಿ ಈ ಸಾರಿ ಟಿಕ್ ಟಾಕ್ ಧನುಶ್ರೀ, ಲ್ಯಾಗ್  ಮಂಜು, ನಿಧಿ ಸುಬ್ಬಯ್ಯ, ಪ್ರಶಾಂತ್ಸಂಬರಗಿ ಮತ್ತು ನಿರ್ಮಲಾ ನಾಮಿನೇಟ್ ಆಗಿದ್ದು ಮನೆಯಿಂದ ಯಾರು ಹೊರಬರುತ್ತಾರೆ. ಈ ವಾರ ಯಾವ ಟ್ವಿಸ್ಟ್  ಕಾದಿದೆ ಎಂಬುದನ್ನು ನೋಡಬೇಕಿದೆ.