ಇನ್ನೇನು ಮಹಿಳಾ ದಿನ ಹತ್ತಿರವಾಗಿದ್ದು, ಮಹಿಳೆಯರ ಕುರಿತು ಅಮೃತಧಾರೆ ಸೀರಿಯಲ್ ಗೌತಮ್‌ ಹೇಳಿರುವ ಮಾತಿಗೆ ನೆಟ್ಟಿಗರು ಖುಷಿಯಾಗಿದ್ದಾರೆ. ಅಷ್ಟಕ್ಕೂ ಆತ ಹೇಳಿದ್ದೇನು?  

ಇನ್ನೇನು ಮಹಿಳಾ ದಿನಾಚರಣೆ ಹತ್ತಿರವಾಗುತ್ತಿದೆ. ಮಾರ್ಚ್‌ 8ರಂದು ನಡೆಯಲಿರುವ ಮಹಿಳಾ ದಿನಕ್ಕೆ, ಇದಾಗಲೇ ಸಕತ ಸಿದ್ಧತೆ ನಡೆಸಲಾಗಿದ್ದು, ಅದರಂತೆ ಸೀರಿಯಲ್‌ಗಳಲ್ಲಿಯೂ ಮಹಿಳಾ ದಿನದ ಸಂಭ್ರಮ ಮನೆಮಾಡುತ್ತಿದೆ. ಇದೀಗ ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಳಾ ದಿನಾಚರಣೆಯನ್ನು ಕಚೇರಿಯ ಸಿಬ್ಬಂದಿಯ ಜೊತೆ ಆಚರಿಸಲು ಗೌತಮ್ ನಿರ್ಧರಿಸಿದ್ದಾನೆ. ಬೆಳ್ಳಂಬೆಳಗೆ ಪತ್ನಿ ಭೂಮಿಕಾಗೆ ಹೂಗುಚ್ಛ ನೀಡುವ ಮೂಲಕ ಮಹಿಳಾ ದಿನದ ಶುಭಾಶಯ ಕೋರಿದ ಗೌತಮ್‌, ಈ ಸಂದರ್ಭದಲ್ಲಿ ಮಹಿಳೆಯರ ಕುರಿತು ಆಡಿಗೆ ಮಾತಿಗೆ ನೆಟ್ಟಿಗರು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಎಷ್ಟು ಸತ್ಯ ಎನ್ನುತ್ತಿದ್ದಾರೆ.

ಅಷ್ಟಕ್ಕೂ ಗೌತಮ್‌ ಹೇಳಿದ್ದು ಏನೆಂದರೆ, ಪ್ರತಿಯೊಬ್ಬ ಗಂಡಿಗೂ ಹೆಣ್ಣು ಬೆನ್ನೆಲುಬು ಇದ್ದಂತೆ. ಆದ್ದರಿಂದ ಮಹಿಳಾ ದಿನಾಚರಣೆಗೆ ಅರ್ಥವಿದೆ ಎಂದಿದ್ದಾನೆ. ಇದನ್ನು ಕೇಳಿದ ಹಲವರು ಹೌದು ಎನ್ನುತ್ತಿದ್ದಾರೆ. ಇದೇ ವೇಳೆ ಗೌತಮ್‌ ಕಂಪೆನಿಯಲ್ಲಿ ಮಹಿಳಾ ದಿನವನ್ನು ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಗೌತಮ್‌ ಗೆಳೆಯ ಆನಂದ್‌ ಮೊದಲಿಗೆ ಭೂಮಿಕಾಳನ್ನು ವೇದಿಕೆ ಮೇಲೆ ಕರೆದ. ಆ ಬಳಿಕ ಹೊಸದಾಗಿ ದಿವಾನ್‌ ಫ್ಯಾಮಿಲಿಗೆ ಎಂಟ್ರಿ ಕೊಟ್ಟಿರೋ ಮಲ್ಲಿಗೆ ಸ್ವಾಗತ ಎನ್ನುತ್ತಿದ್ದಂತೆಯೇ ಜೈದೇವ ಮತ್ತು ಅತ್ತೆ ಶಕುಂತಲಾದೇವಿ ಕೆಂಡಾಮಂಡಲ ಆಗಿದ್ದಾರೆ. ಶಕುಂತಲಾದೇವಿಯ ಪಕ್ಕದಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಮಲ್ಲಿಗೆ. ಹೆದರುತ್ತಲೇ ಪಕ್ಕ ಕುಳಿತುಕೊಂಡಿದ್ದಾಳೆ.

ಪ್ರೇಮ ಲೋಕ-2ಗೆ ಡೇಟ್​ ಫಿಕ್ಸ್​! ಹೊಸಬರಿಗೂ ಭರ್ಜರಿ ಆಫರ್​: ಕ್ರೇಜಿಸ್ಟಾರ್​ ಹೇಳಿದ್ದೇನು?

ಇದರ ಪ್ರೊಮೋ ರಿಲೀಸ್‌ ಆಗಿದೆ. ಜೈದೇವ ಪತ್ನಿಯ ಮೇಲೆ ಕೈಮಾಡಿದ್ದಾಗಿ ಭೂಮಿಕಾ ಜೈದೇವನ ವಿರುದ್ಧ ತಿರುಗಿ ಬಿದ್ದಿದ್ದಳು. ಭೂಮಿಕಾ ಹೆಸರನ್ನು ಕೆಡಿಸಲು ಆಕೆಯ ಹೆಸರು ಹೇಳಿ ಖುದ್ದು ಜೈದೇವನೇ ತನ್ನ ಮೇಲೆ ಕೇಸು ದಾಖಲು ಮಾಡಿಕೊಂಡು ಭೂಮಿಕಾ ವಿರುದ್ಧ ಎಲ್ಲರ ದೃಷ್ಟಿಯಲ್ಲಿ ಆರೋಪಿ ಮಾಡಿದ್ದಾನೆ. ಇದು ಭೂಮಿಕಾಗೆ ತಿಳಿದಿದೆ. ಜೈದೇವನಿಗೆ ಚಾಲೆಂಜ್‌ ಹಾಕಿದ್ದಾಳೆ. ತನ್ನ ಮದುವೆ ಸಿಂಧುವೇ ಅಲ್ಲ ಎಂದಿದ್ದ ಜೈದೇವ. ಅಷ್ಟಕ್ಕೆ ಸುಮ್ಮನಾಗದ ಭೂಮಿಕಾ ಇಬ್ಬರ ಮದುವೆಯನ್ನು ನೋಂದಣಿ ಮಾಡಿಸಿಬಿಟ್ಟಿದ್ದಾಳೆ. ಇನ್ನು ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. ಕಂಪೆನಿಯ ಕಾರ್ಯಕ್ರಮದಲ್ಲಿಯೂ ಮಲ್ಲಿಯನ್ನು ಕರೆತಂದಿದ್ದು, ಜೈದೇವನನ್ನು ಮತ್ತಷ್ಟು ಉರಿಸಿದ್ದಾಳೆ. 

ಮತ್ತೆ ಮತ್ತೆ ಭೂಮಿಕಾ ವಿರುದ್ಧ ಜೈದೇವ ಕೊತಕೊತ ಕುದಿಯುವಂತಿಆಗಿದೆ. ಅದೇ ಇನ್ನೊಂದೆಡೆ ಅಪ್ಪಿ ಮತ್ತು ಪಾರ್ಥನ ಲವ್‌ಸ್ಟೋರಿ ಭೂಮಿಕಾಗೆ ತಿಳಿದಿದೆ. ಆದರೆ ಅಪ್ಪಿಯ ಮೇಲೆ ಕಣ್ಣುಹಾಕಿದವ ಜೈದೇವ. ಇನ್ನು ಆಕೆ ಮದುವೆಯಾಗಿ ಅದೇ ಮನೆಗೆ ಬಂದರೆ ಮುಗಿಯಿತು ಕಥೆ. ಜೈದೇವನ ವಿರುದ್ಧ ಯಾರೂ ಮಾತನ್ನು ಕೇಳಲು ಇಷ್ಟಪಡುವುದಿಲ್ಲ, ಒಂದೆಡೆ ಮಲ್ಲಿಯ ಜವಾಬ್ದಾರಿ ವಹಿಸಿಕೊಂಡಿರುವ ಭೂಮಿಕಾ, ಈಗ ಅಪ್ಪಿಯ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಏನೇನು ಆಗುತ್ತದೆಯೋ ನೋಡಬೇಕು. 

ಅಂಚೆ ಅಣ್ಣನ ಜೊತೆ ಸಿಹಿ ಮಾತುಕತೆ ಸಕ್ಸಸ್‌: ಪುಟಾಣಿ ನೋಡ್ತಿದ್ದಂತೆಯೇ ರಾಮ್‌ಗೆ ಬಂತು ಜೀವ...

View post on Instagram