ಪೋಸ್ಟ್‌ಮ್ಯಾನ್‌ ಸಹಾಯ ಕೋರಿದ್ದಾಳೆ ಸಿಹಿ. ಅಂತೂ ಅವನನ್ನು ಒಪ್ಪಿಸುವಲ್ಲಿ ಸಕ್ಸಸ್‌ ಆಗಿ ರಾಮ್‌ ಮನೆ ತಲುಪಿದ್ದಾಳೆ. ಮುಂದೇನು?  

ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿರೋ ರಾಮ್‌ ಮನೆಗೆ ಸೇರಿದ್ದಾನೆ. ಆತನನ್ನು ನೋಡಲು ಸಿಹಿ ಚಡಪಡಿಸುತ್ತಿದ್ದಳು.. ಅಮ್ಮ ಸೀತಾಳಿಗೆ ಹೇಳಿದರೆ ಮತ್ತೆ ಕರೆದುಕೊಂಡು ಹೋಗುವುದಿಲ್ಲ ಎನ್ನುವ ಭಯ. ಆದರೆ ಏನಾದರೂ ಮಾಡಿ ರಾಮ್‌ನನ್ನು ನೋಡಲೇಬೇಕು ಎನ್ನುವ ಛಲ ಹೊತ್ತಿದ್ದಳು. ಅದಕ್ಕಾಗಿ ಹೇಗಾದರೂ ಮಾಡಿ ರಾಮ್‌ನ ಮನೆಗೆ ಹೋಗುವ ಪ್ಲ್ಯಾನ್‌ ಮಾಡಿದ್ದಳು ಸಿಹಿ. ಆದರೆ ಆಕೆಗೆ ದಾರಿ ಗೊತ್ತಿಲ್ಲ. ಶಾಲೆಗೆ ಹೋಗಬೇಕಿದ್ದ ಸಿಹಿ ಯಾರಿಗೂ ಹೇಳದೇ ಶಾಲೆ ತಪ್ಪಿಸಿ ರಾಮ್‌ನನ್ನು ಹುಡುಕಿ ಹೊರಟಿದ್ದಳು. ದಾರಿಯಲ್ಲಿ ಸಿಗುವ ಡೆಲವರಿ ಬಾಯ್‌ಗೆ ಅಡ್ರೆಸ್‌ ಕೇಳಿದ್ದಳು. ಆದರೆ ಆತ ತನಗೆ ಗೊತ್ತಿಲ್ಲ ಎಂದಿದ್ದ.

ಇದೀಗ ಸಿಹಿ ಅಂತೂ ಸಕ್ಸಸ್‌ ಆಗಿದ್ದಾಳೆ. ಅಂಚೆಯಣ್ಣನ ನೆರವು ಪಡೆದುಕೊಂಡಿದ್ದಾಳೆ. ಆರಂಭದಲ್ಲಿ ಹೀಗೆ ಬಾಲಕಿಯನ್ನು ಕರೆದುಕೊಂಡು ಹೋಗುವುದು ಸರಿಯಲ್ಲ ಎಂದು ಅಂಚೆಯಣ್ಣ ಹೇಳಿದರೂ ಕೊನೆಗೆ ಸಿಹಿಯ ಒತ್ತಾಯಕ್ಕೆ ಮಣಿದು ತನ್ನ ಗಾಡಿಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಕೊನೆಗೂ ಸಿಹಿ ರಾಮ್‌ನನ್ನು ತಲುಪಿದ್ದಾಳೆ. ಇದಾಗಲೇ ಎರಡು ಬಾರಿ ಸಿಹಿ ಕಿಡ್ನಾಪ್‌ ಆಗಿದ್ದರಿಂದ ಮತ್ತೆಲ್ಲಿ ಅವಳನ್ನು ಅಪಹರಣ ಮಾಡಿಬಿಡುವ ಸೀನ್‌ ಬರುತ್ತದೆಯೋ ಎಂದು ಗಾಬರಿಯಲ್ಲಿ ಅಭಿಮಾನಿಗಳಿಗೆ ಈಗ ಧೈರ್ಯ ಬಂದಿದೆ.

View post on Instagram

ಚಾಂದನಿ ಜೊತೆ ಸೀತಾ ಚೈಯಾ ಚೈಯಾ... ಅವ್ಳು ಒಳ್ಳೆಯವಳಲ್ಲ ಕಣೇ ಹುಷಾರ್ ಎಂದ ಫ್ಯಾನ್ಸ್​...

ಸಿಹಿ, ರಾಮ್‌ನನ್ನು ತಲುಪುತ್ತಿದ್ದಂತೆಯೇ ರಾಮ್‌ಗೆ ಜೀವ ಬಂದಂತಾಗಿದೆ. ಮಾತನಾಡಲು ತೊಂದರೆಪಡುತ್ತಿದ್ದ ರಾಮ್‌ ಈಗ ಸರಿಯಾಗಿ ಮಾತನಾಡಲು ಶುರು ಮಾಡಿದ್ದಾನೆ. ಇದನ್ನು ನೋಡಿ ಅಶೋಕ್‌ ಮತ್ತು ತಂಗಿಗೆ ಅಚ್ಚರಿಯಾಗಿದೆ. ರಾಮ್‌ಗೆ ಏನಿದ್ದರೂ ಸಿಹಿಯೇ ಮದ್ದು ಎನ್ನುತ್ತಿದ್ದಾರೆ ಫ್ಯಾನ್ಸ್‌. 

ಅಷ್ಟಕ್ಕೂ ಇವರಿಬ್ಬರ ಸಂಬಂಧವೇ ಅಂಥದ್ದು. ಈ ಮುದ್ದು ಸಂಬಂಧಕ್ಕೆ ಸ್ನೇಹದ ಹೆಸರು ಕೊಟ್ಟಿದ್ದರೂ, ಅದು ಅದಕ್ಕಿಂತಲೂ ಮಿಗಿಲಾದುದು. ಅಪ್ಪ-ಮಗಳ ಸಂಬಂಧಕ್ಕಿಂತಲೂ ಬಹುದೊಡ್ಡ ಸಂಬಂಧವದು. ಫ್ರೆಂಡ್‌ ಫ್ರೆಂಡ್‌ ಅನ್ನುತ್ತಲೇ ರಾಮ್‌ನ ಮನದಲ್ಲಿ ನೆಲೆಯೂರಿಬಿಟ್ಟಿದ್ದಾಳೆ ಮುದ್ದು ಕಂದ. ಇನ್ನು ಸಿಹಿಗೋ ರಾಮ್‌ನನ್ನು ಬಿಟ್ಟುಬಿಡಲಾಗದ ಅನುಬಂಧ. ಈಗ ಮುಂದೇನು ಎನ್ನುವ ಕುತೂಹಲ. ಶಾಲೆ ತಪ್ಪಿಸಿ ರಾಮ್‌ ಮನೆಗೆ ಹೋಗಿರುವ ಸಿಹಿಯ ಬಗ್ಗೆ ತಿಳಿದು ಸೀತಾ ಏನು ಹೇಳುತ್ತಾಳೊ? ಮನೆಗೆ ಬರದ ಮಗಳನ್ನು ನೋಡಿ ಎಲ್ಲರೂ ಗಾಬರಿಯಾಗುತ್ತಾರೋ ಅಥವಾ ಎಲ್ಲವೂ ಸಲೀಸಾಗಿ ನಡೆಯುತ್ತದೆಯೋ ಎನ್ನುವ ಪ್ರಶ್ನೆ ಈಗ. ಅದೇ ಇನ್ನೊಂದೆಡೆ ಮಾಜಿ ಪ್ರೇಯಸಿಯ ಕಾಟದಿಂದ ರಾಮ್‌ಗೆ ಏನು ಅನಾಹುತ ಆಗುವುದೋ ಎನ್ನುವ ಭಯ. 

ದೇವ್ರೆ ನನಗೆ ಜನ್ಮದಲ್ಲಿ ಮದ್ವೆನೇ ಬೇಡ ಅನ್ನಿಸ್ತಿದೆ ಅಂತಿದ್ದಾರೆ ಸೀರಿಯಲ್‌ ಫ್ಯಾನ್ಸ್‌!

View post on Instagram