ಹನುಮಂತು ಪರ ನಿಂತಿದ್ದಾರಾ ಸುದೀಪ್?; ಬಿಗ್ ಬಾಸ್ ಟ್ರೋಫಿ ಹಿಂದಿರುವ ಕಾಣದ ಕೈಗಳು ಅಂತಿದ್ದಾರೆ ನೆಟ್ಟಿಗರು
ಯಾಕೆ ಹನುಮಂತುನ ಸಿಕ್ಕಾಪಟ್ಟೆ ಹೈಲೈಟ್ ಮಾಡುತ್ತಿದ್ದಾರೆ ಬಿಗ್ ಬಾಸ್ ಟೀಂ.... ? ಜನರ ಕಾಮೆಂಟ್‌ಗಳನ್ನು ಸೇರಿಸಿಕೊಂಡು ಮಾಡಿರುವ ಸುದ್ದಿ ಇದು...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ ಈ ವರ್ಷ ಸಿಕ್ಕಾಪಟ್ಟೆ ಟಫ್ ಕಾಂಪಿಟೇಷನ್ ಇದೆ. 17 ಸ್ಪರ್ಧಿಗಳ ಜೊತೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು. ಒಟ್ಟು 20 ಮಂದಿಯಲ್ಲಿ ಇದ್ದ ಮನೆಯಲ್ಲಿ ಈಗ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಪ್ರತಿಯೊಬ್ಬರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ ಆದರೆ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಮಾತ್ರ ಸ್ವಇಚ್ಛೆಯಿಂದ ಹೊರ ನಡೆದರು. ಉಳಿದುಕೊಂಡಿರುವ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಮತ್ತು ಹನುಮಂತು ಈಗ ಫಿನಾಲೆ ವಾರಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಸೈಲೆಂಟ್ ಆಗಿ ತನ್ನ ಆಟ ಶುರು ಮಾಡಿರುವ ಹನುಮಂತು ಅಯ್ಯೋ ಪಾಪ ಅಮಾಯಕ ಏನೂ ಗೊತ್ತಾಗುವುದಿಲ್ಲ ಎಂದು ಇಡೀ ಮನೆ ಸಪೋರ್ಟ್ ಮಾಡಿದ್ದರು. ಯಾವಾಗ ಹನುಮಂತು ಟಿಕೆಟ್ ಟು ಫಿನಾಲೆ ವಾರಕ್ಕೆ ಕಾಲಿಟ್ಟನೋ ಆಗ ತಿಳಿಯಿತ್ತು ಅವನಷ್ಟು ಸ್ಮಾರ್ಟ್ ಈ ಮನೆಯಲ್ಲಿ ಯಾರೂ ಇಲ್ಲವೆಂದು. 'ಅಯ್ಯೋ ಸರ್ ನಾನು ಆಟ ಶುರು ಮಾಡಿ ತುಂಬಾ ವಾರ ಆಯ್ತು ಆದರೆ ಮನೆ ಮಂದಿಗೆ ಈಗ ಗೊತ್ತಾಗಿದೆ' ಎಂಬ ಮಾತು ಹನುಮಂತು ಬಾಯಲ್ಲಿ ಬಂದಿದ್ದು ನಿಜಕ್ಕೂ ಶಾಕ್. ತೀರಾ ಉಡಾಫೆಯಲ್ಲಿ ಹನುಮಂತು ಟಾಸ್ಕ್ ಅಡುತ್ತಿದ್ದಾನೆ ಅಂದಾಗಲೂ ಸುದೀಪ್ ಎಚ್ಚರಿಕೆ ನೀಡಲಿಲ್ಲ ಅಥವಾ ಇನ್ನಿತರ ಸ್ಪರ್ಧಿಗಳಿಗೆ ಬೈಯುವ ರೀತಿಯಲ್ಲಿ ಬೈಯಲಿಲ್ಲ. ಹೀಗಾಗಿ ಸುದೀಪ್ ಹನುಮಂತುಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಭವ್ಯಾ ಹನುಮಂತುನ ಹೊಡೆದಿದ್ದು ಹೈಲೈಟ್ ಮಾಡಿದ ಸುದೀಪ್‌ಗೆ ಮಂಜು ಹೊಡೆದಿದ್ದು ಕಾಣಿಸಿಲ್ವಾ?; ವೀಕ್ಷಕರು ಗರಂ
ಉಗ್ರಂ ಮಂಜು ಮತ್ತು ಇತರ ಸ್ಪರ್ಧಿಗಳು ಆಟವಾಡುವಾಗ ಒಬ್ಬರಿಗೊಬ್ಬರು ಹೊಡೆದುಕೊಳ್ಳುವುದು ಜಗಳ ಮಾಡಿದಾಗ ಶಿಕ್ಷೆ ಕೊಡದ ಬಿಗ್ ಬಾಸ್ ಯಾಕೆ ಭವ್ಯಾ ಗೌಡ ಹನುಮಂತುಗೆ ಹೊಡೆದಿದ್ದು ಹೈಲೈಟ್ ಮಾಡಿದ್ದಾರೆ? ಹನುಮಂತುಗೆ ಹೊಡೆದಿದ್ದು ತಪ್ಪು ಎಂದು ಒಂದು ರಾತ್ರಿ ಜೈಲು ಶಿಕ್ಷೆ ಕೊಡಿಸಿದ್ದಾರೆ ಸುದೀಪ್. ವೈಲ್ಡ್ ಕಾರ್ಡ್ ಸ್ಪರ್ಧಿ ಟಿಕೆಟ್ ಟು ಫಿನಾಲೆ ಪಡೆಯುವುದಲ್ಲದೆ ಸೈಲೆಂಟ್ ಆಗಿ ಗೇಮ್ ಶುರು ಮಾಡಿರುವುದು, ಮತ್ತೊಬ್ಬ ಸ್ಪರ್ಧಿ ಜೊತೆ ವರ್ತಿಸುವ ರೀತಿ ಪ್ರತಿಯೊಂದಕ್ಕೂ ಸುದೀಪ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ವಾರ ವಾರವೂ ಟ್ರೋಲ್ ಅಥವಾ ಕಾಮಿಡಿ ವಿಡಿಯೋ ಹಾಕುವಾಗ ಹನುಮಂತು ಮತ್ತು ಧನರಾಜ್‌ರನ್ನು ಹೈಲೈಟ್ ಮಾಡುತ್ತಾರೆ ಯಾಕೆ ಅನ್ನೋ ಪ್ರಶ್ನೆ ಕೂಡ ಇದೆ.
ಸುದೀಪ್‌ರವರು ಹನುಮಂತುನ ಮಾತ್ರ ಸಪೋರ್ಟ್ ಮಾಡುತ್ತಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷಿ ಇಲ್ಲ ಆದರೂ ನೆಟ್ಟಿಗರು ಸುಮ್ಮನೆ ಕಾಮೆಂಟ್ ಮಾಡಿ ವಾದ ಮಾಡುತ್ತಿದ್ದಾರೆ. ಈ ಹಿಂದೆ ಟಾಸ್ಕ್ ಒಂದರಲ್ಲಿ ಹನುಮಂತು ಕೇರ್‌ಲೆಸ್ ಆಗಿದ್ದಕ್ಕೆ ಸ್ವತಃ ಸುದೀಪ್ ವಾರ್ನಿಂಗ್ ಕೊಟ್ಟಿದ್ದರು ಹೀಗಿರುವಾಗ ಎಲ್ಲಿಂದ ಫೇವರಿಸಮ್ ಮತ್ತು ಸಪೋರ್ಟ್ ಅನ್ನಬೇಕು? ಈಗಾಗೆಲ ಹನುಮಂತು ಒಂದೆರಡು ಶೋ ಗೆದ್ದಿದ್ದಾನೆ ಈ ಶೋ ಕೂಡ ಯಾಕೆ ಗೆಲ್ಲಬೇಕು ಅನ್ನೋ ದೃಷ್ಠಿಯಲ್ಲಿ ನೆಟ್ಟಿಗರು ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ ಅಂದ್ರೆ ತಪ್ಪಾಗದು. ಬಿಗ್ ಬಾಸ್ ಟ್ರೋಫಿ ಹಿಂದೆ ಕಾಣದ ಕೈಗಳು ಇದೆ ಇಲ್ಲಿ ವೋಟಿಂಗ್ ಪ್ರಕಾರ ಹೋಗುತ್ತಿಲ್ಲ ಹಾಗೆ ಹೀಗೆ ಎಂದು ಇತರ ಸ್ಪರ್ಧಿಗಳ ಫ್ಯಾನ್ಸ್ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಭವ್ಯಾ ಗೌಡ ಹಳೆ ಫೋಟೋಗಳು ವೈರಲ್; ಹೇರ್‌ಸ್ಟೈಲ್ ಕರಾಬು ಎಂದು ಕಾಲೆಳೆದ ನೆಟ್ಟಿಗರು