ಫಿನಾಲೆ ವಾರಕ್ಕೆ ಟಿಕೆಟ್ ಪಡೆದ 1st ವೈಲ್ಡ್ ಕಾರ್ಡ್ ಸ್ಪರ್ಧಿ ಹನುಮಂತು; ಹಳ್ಳಿ ಹೈದಾನೇ ವಿನ್ನರ್ ಅಂತಿದ್ದಾರೆ ವೀಕ್ಷಕರು
ವಾರದ ವಿನ್ನರ್ ಯಾರು ಎಂದು ನಿರೀಕ್ಷೆ ಮಾಡಿದ ವೀಕ್ಷಕರು. ಹನುಮಂತು ಗೆಲ್ಲಲ್ಲೇ ಬೇಕು ಅಂತಿದ್ದಾರೆ ............
ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಟಿಕೆಟ್ ಟು ಫಿನಾಲೆ ವಾರದಲ್ಲಿ ಹನುಮಂತು ಯಶಸ್ವಿಯಾಗಿ ಕ್ಯಾಪ್ಟನ್ ಆಗಿ ಟಿಕೆಟ್ ಪಡೆದುಕೊಂಡಿದ್ದಾರೆ.
ಬಿಗ್ ಬಾಸ್ ಇಷ್ಟೂ ಸೀಸನ್‌ಗಳಲ್ಲಿ ಫಿನಾಲೆ ವಾರಕ್ಕೆ ಕಾಲಿಡುತ್ತಿರುವ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿನೇ ಹನುಮಂತು. ಹೀಗಾಗಿ ಹನುಮಂತು ಮೇಲೆ ವೀಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿದೆ.
ಕಾಮಿಡಿಯಲ್ಲೂ ಸೈ ದೋಸ್ತಿಯಲ್ಲೂ ಸೈ ಟಾಸ್ಕ್‌ಗಳಲ್ಲೂ ಸೈ ಅನಿಸಿಕೊಂಡಿರುವ ಹನುಮಂತು ಹೆಸರಿನಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿದೆ. ಅಲ್ಲದೆ ಜನರ ನಿರೀಕ್ಷೆ ಪ್ರಕಾರ ಹನುಮಂತುನೇ ವಿನ್ನರ್ ಎನ್ನಲಾಗುತ್ತಿದೆ.
ಕಳೆದ ಮೂರ್ನಾಲ್ಕು ವಾರಗಳಿಂದ ಹನುಮಂತು ಅತಿ ಹೆಚ್ಚು ವೋಟ್‌ಗಳನ್ನು ಪಡೆದು ಮೊದಲು ಸೇಫ್ ಆಗುತ್ತಿದ್ದಾರೆ. ಅಲ್ಲದೆ ಹನುಮಂತುಯಿಂದ ಧನರಾಜ್ ನಸೀಬ್ ಕೂಡ ಬದಲಾಗಿದೆ ಅಂತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಹನುಮಂತು ವಿನ್ನರ್ ಆಗಿದ್ದ. ಅಲ್ಲದೆ ಒಂದೆರಡು ಸಲ ದೊಡ್ಡ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾನೆ.
ಈಗಾಗಲೆ ಯಶಸ್ಸಿನ ರುಚಿ ನೋಡಿರುವ ಹನುಮಂತುಗೆ ಬಿಗ್ ಬಾಸ್ ಟ್ರೋಫಿ ಗೆಲ್ಲುವುದು ತುಂಬಾನೇ ಸುಲಭ ಅಂತಿದ್ದಾರೆ. ಈಗಾಗಲೆ ಅಪಾರ್ಟ್ಮೆಂಟ್‌ವೊಂದನ್ನು ಬಹುಮಾನವಾಗಿ ಪಡೆದಿದ್ದರು.