Asianet Suvarna News Asianet Suvarna News
breaking news image

ಅಮೃತಧಾರೆ ಫಸ್ಟ್ ನೈಟ್ ಸೀನ್‌ ಪ್ರೋಮೋಗೆ 35 ಲಕ್ಷಕ್ಕೂ ಅಧಿಕ ವೀಕ್ಷಣೆ!

ಅಮೃತಧಾರೆಯಲ್ಲಿ ಡುಮ್ಮ ಸಾರ್, ಚಟ ಪಟ ಪಟಾಕಿ ಭೂಮಿ ಫಸ್ಟ್ ನೈಟ್ ಸೀನ್‌ ಪ್ರೋಮೋವನ್ನು 35 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಸೀರಿಯಲ್ ಈಗ ಭರ್ಜರಿ ಟಿಆರ್‌ಪಿ ಪಡೆಯುವ ಸಾಧ್ಯತೆ ಇದೆ.

nataranga Rajesh chaya singh amruthdhare serial promo of first night getting highest views
Author
First Published Jun 6, 2024, 12:02 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಸದ್ಯ ಫಸ್ಟ್ ನೈಟ್ ಸೀನ್ (Amruthadhare First Night Scene Promo) ಭರ್ಜರಿ ರೆಸ್ಪಾನ್ಸ್ ಪಡ್ಕೊಳ್ತಿದೆ. ಈ ಸೀರಿಯಲ್‌ನ ಪ್ರೊಮೋಕ್ಕೆ 35 ರಿಂದ 40 ಲಕ್ಷ ವೀಕ್ಷಣೆ ಸಿಕ್ಕಿದೆ. ಕೇವಲ ಇನ್ಸ್‌ಸ್ಟಾ ಗ್ರಾಂ ಒಂದರಲ್ಲೇ ಈ ಸೀರಿಯಲ್ ಪ್ರೋಮೋ ವೀಕ್ಷಣೆ 35 ಲಕ್ಷಕ್ಕೂ ಅಧಿಕವಾಗಿದೆ. ಇನ್ನು ಫೇಸ್‌ಬುಕ್ (Facebook), ಯೂಟ್ಯೂಬ್‌ಗಳಲ್ಲೆಲ್ಲ ಲೆಕ್ಕ ಹಾಕಿದರೆ ಇದು 40 ಲಕ್ಷಕ್ಕೂ ಅಧಿಕವಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಸೀರಿಯಲ್‌ಗಳಲ್ಲಿ ಇಂಥ ದೃಶ್ಯಗಳಿಗೆ ಅತ್ಯಧಿಕ ವೀಕ್ಷಣೆ ಸಿಗುತ್ತಿರುತ್ತದೆ. ಮದುವೆ, ಫಸ್ಟ್ ನೈಟ್, ರೊಮ್ಯಾಂಟಿಕ್ ಸೀನ್‌ಗಳಲ್ಲೇ ಈ ಸೀರಿಯಲ್‌ಗಳು ಲಕ್ಷ ಲಕ್ಷ ವೀಕ್ಷಣೆ ದಾಖಲಿಸುತ್ತವೆ. ಈ ಸೀನ್‌ಗಳು ಒಂದು ಚೌಕಟ್ಟಿನಲ್ಲೇ ನಡೆಯುತ್ತವೆ. ಸಿನಿಮಾ ಥರ ಈ ಸೀರಿಯಲ್‌ಗಳಲ್ಲಿ ಅಶ್ಲೀಲ ದೃಶ್ಯಗಳಿಗೆ ಅವಕಾಶ ನೀಡೋದಿಲ್ಲ. ಹೀಗಾಗಿ ಫ್ಯಾಮಿಲಿ ಮಂದಿ ಎಲ್ಲ ಈ ಸೀರಿಯಲ್‌ಗಳನ್ನ ನೋಡ್ತಾರೆ. ಆದರೆ ಈಗ ಸೀರಿಯಲ್‌ಗಿಂತ ಸೀರಿಯಲ್ ಪ್ರೋಮೋನ ನೋಡಿ ತೃಪ್ತಿ ಪಡ್ಕೊಳ್ಳೋರೇ ಹೆಚ್ಚು. ಇನ್‌ಸ್ಟಾ ಫೇಸ್‌ಬುಕ್‌ನಲ್ಲಿ ಇಡೀ ಸೀರಿಯಲ್‌ನ ಕತೆಯೇ ಪ್ರೋಮೋ ರೂಪದಲ್ಲಿ ಬಂದು ಬಿಡುತ್ತೆ. ಹೀಗಾಗಿ ಇದನ್ನು ನೋಡಿ ಜನ ತೃಪ್ತಿ ಪಟ್ಕೊಳ್ತಾರೆ.

 ಅಮೃತಧಾರೆಯಲ್ಲಿ ಹೆಚ್ಚಾಗ್ತಿದೆ ರೊಮ್ಯಾನ್ಸ್ : ಬರ್ತಾ ಬರ್ತಾ ಡೈರೆಕ್ಟರ್ ಪೋಲಿ ಆಗ್ತಿದ್ದಾರೆಂದ ಫ್ಯಾನ್ಸ್!

ಇನ್ನು ಅಮೃತಧಾರೆ ಸೀರಿಯಲ್‌ ವಿಷಯಕ್ಕೆ ಬಂದರೆ ಡುಮ್ಮ ಸಾರ್ ಎಂದೇ ಖ್ಯಾತಿ ಪಡೆದಿರೋ ಗೌತಮ್ ದಿವಾನ್, ನಾಯಕಿ ಭೂಮಿಕಾ ಎಲ್ಲರ ಬಲು ಮೆಚ್ಚಿನ ಜೋಡಿ. ಗುಂಡು ಗುಂಡಗೆ ದಪ್ಪಗಿರೋ ಬಿಲಿಯನೇರ್ ಗೌತಮ್‌, ಸಣಕಲಾಗಿರೋ ಮಿಡಲ್ ಕ್ಲಾಸ್ ಹೆಣ್ಣು ಮಗಳು ಭೂಮಿಕಾ ಅಂದರೆ ಬಹಳ ಜನಕ್ಕೆ ಇಷ್ಟ. ಇಲ್ಲಿ ಮಿಡಲ್‌ ಕ್ಲಾಸ್ ಮೌಲ್ಯಗಳಿಗೇ ಒತ್ತನ್ನೂ ನೀಡಲಾಗಿದೆ. ಹೀಗಾಗಿ ಹೆಚ್ಚು ಜನರಿಗೆ ಈ ಸೀರಿಯಲ್ ಕನೆಕ್ಟ್ ಆಗುತ್ತೆ. ಗೌತಮ್ ದಿವಾನ್ ಆಗಿ ಜನಪ್ರಿಯ ನಟ ರಾಜೇಶ್ ನಟರಂಗ, ನಾಯಕಿ ಭೂಮಿ ಆಗಿ ಒಂದು ಕಾಲದ ಹೀರೋಯಿನ್ ಛಾಯಾ ಸಿಂಗ್ ಜೀವ ತುಂಬಿ ನಟಿಸಿದ್ದಾರೆ. ಇವರ ನಟನೆ ಎಷ್ಟು ಸಹಜವಾಗಿದೆ ಎಂದರೆ ಜನ ಬಹಳ ಇಷ್ಟಪಟ್ಟು ಈ ಸೀರಿಯಲ್‌ ಅನ್ನು ನೋಡುತ್ತಿದ್ದಾರೆ.

ಇನ್ನು ಈ ಸೀರಿಯಲ್‌ನಲ್ಲಿ ಆಗಲೇ ಹೇಳಿದಂತೆ ಫಸ್ಟ್ ನೈಟ್ ದೃಶ್ಯಗಳು ನಡೆಯುತ್ತಿವೆ. ಉಳಿದ ಸೀರಿಯಲ್‌ಗಳಲ್ಲಿ ಇರುವಂತೆ ಇಲ್ಲಿ ಹೈ ಡ್ರಾಮಾ ಕ್ರಿಯೇಟ್ ಮಾಡಿಲ್ಲ. ಈ ಅಂಶ ವೀಕ್ಷಕರಿಗೆ ಇಷ್ಟವಾಗಿದೆ.

ನನ್​ ಸನಿಹ ಬಂದ್ರೆ ನಿಮ್ಗೆ ಏನೂ ಅನಿಸಲ್ವಾ..? ಭೂಮಿಯ ಮೆಲ್ಲುಸುರಿಗೆ ಡುಮ್ಮ ಸರ್​ ಫ್ಲ್ಯಾಟ್​- ಮುಂದೆ?

ಪ್ರಮೋದಲ್ಲಿ ಮೊದಲ ರಾತ್ರಿಯ ಸುಂದರ ಕ್ಷಣಗಳ ಝಲಕ್‌ ಕಾಣಿಸಿದೆ. ಕೊಠಡಿಗೆ ಮದುಮಗಳಾಗಿ ಭೂಮಿಕಾ ಕೈಯಲ್ಲಿ ಹಾಲು ಹಿಡಿದು ಪ್ರವೇಶಿಸುತ್ತಾಳೆ. ಆದರೆ, ಗೌತಮ್‌ 'ಭೂಮಿಕಾ ನಿಮಗೆ ಇದೆಲ್ಲ ಇಷ್ಟವಾಗದು. ಇಬ್ಬರ ನಡುವೆ ಬಾಂಡ್‌ ಬೆಳೆಯಬೇಕು. ಮೊಗ್ಗು ಹೂವಾಗಬೇಕು,' ಎಂದು ಹೇಳುತ್ತಾನೆ. ಒಬ್ಬರನೊಬ್ಬರನ್ನು ಅರ್ಥ ಮಾಡಿಕೊಂಡು ಮೊಗ್ಗು ಹೂವಾಗಲು ಸಾಕಷ್ಟು ಸಮಯ ಬೇಕಾಗಬಹುದು. ನೀವು ಹಾಸಿಗೆ ಮೇಲೆ ಮಲಗಿ. ನಾನು ಕೆಳಗೆ ಚಾಪೆ ಮೇಲೆ ಮಲಗ್ತಿನಿ ಎನ್ನುತ್ತಾನೆ ಗೌತಮ್. ಆಗ ಭೂಮಿಕಾ ಗೌತಮ್‌ರ ಕೈ ಹಿಡಿದು, ನಿಮಗೆ ನಾನು ಇಷ್ಟ ಇಲ್ವಾ, ನನ್ನನ್ನು ಪತ್ನಿಯಾಗಿ ಸ್ವೀಕರಿಸಿಲ್ವ ಎಂದು ಕೇಳುತ್ತಾಳೆ.

ಆಮೇಲೆ ಊಹೆಯಲ್ಲಿ ಫಸ್ಟ್ ನೈಟ್ ಮುಂದುವರಿಯುತ್ತದೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಗೌತಮ್‌ ಮತ್ತು ಭೂಮಿಕಾ ಮದುವೆಯಾಗಿ ವರ್ಷಗಳಾಗುತ್ತಿದೆ. ಆದರೆ, ಇವರಿಬ್ಬರ ಫಸ್ಟ್‌ ನೈಟ್‌ ಇಂದು ನಡೆಯುತ್ತಿದೆ. ಇವರಿಬ್ಬರು ಸ್ನೇಹಿತರಂತೆ ಇಷ್ಟು ದಿನ ಇದ್ರು. ಸದ್ಯ ಅಜ್ಜಮ್ಮನ ಪ್ಲಾನ್‌ನಿಂದ ಇವರಿಬ್ಬರ ಮಿಲನೋತ್ಸವ ನಡೆದಿದೆ. ಇನ್ನೊಂದಡೆ ಶಕುಂತಲಾದೇವಿ ಈ ಮಿಲನೋತ್ಸವ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದರು. ಹೀಗಾಗಿ ಇವರಿಬ್ಬರು ಒಂದಾಗುವುದನ್ನು ತಪ್ಪಿಸಲು ಅವರಿಂದ ಸಾಧ್ಯವಾಗಿಲ್ಲ. ಇದೀಗ ಮನೆಗೆ ಬಂದು ಬೆಳವಣಿಗೆ ನೋಡಿ ಶಾಕ್ ಆಗೋದು ಗ್ಯಾರಂಟಿ.

ಸೋ ಸದ್ಯಕ್ಕಂತೂ ಜೀ ಕನ್ನಡದ ಪ್ರೋಮೋದಲ್ಲೆಲ್ಲ ಭೂಮಿ ಗೌತಮ್ ಫಸ್ಟ್ ನೈಟ್ ಸೀನ್‌ಗಳೇ ಹೈಯೆಸ್ಟ್ ವೀಕ್ಷಣೆ ಪಡೆದು ಮೆಚ್ಚುಗೆ ಪಡೆದಿವೆ.

Latest Videos
Follow Us:
Download App:
  • android
  • ios