ಅಮೃತಧಾರೆಯಲ್ಲಿ ಹೆಚ್ಚಾಗ್ತಿದೆ ರೊಮ್ಯಾನ್ಸ್ : ಬರ್ತಾ ಬರ್ತಾ ಡೈರೆಕ್ಟರ್ ಪೋಲಿ ಆಗ್ತಿದ್ದಾರೆಂದ ಫ್ಯಾನ್ಸ್!
ಅಮೃತಧಾರೆ ಸೀರಿಯಲ್ ನಲ್ಲಿ ಕಳೆದ ಕೆಲವು ದಿನಗಳಿಂದ ಅಜ್ಜಿಯ ಶೋಭಾನದ ಮುಹೂರ್ತ, ಗೌತಮ್ -ಭೂಮಿಕಾರ ಫಸ್ಟ್ ನೈಟ್ , ರೋಮ್ಯಾನ್ಸ್ ಇವುಗಳ ಪ್ರೊಮೋನೆ ಬರ್ತಿದೆ. ಇದನ್ನ ನೋಡಿ ಜನ ಏನ್ ಹೇಳ್ತಿದ್ದಾರೆ ಗೊತ್ತಾ?
ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ರಾಜೇಶ್ ಮತ್ತು ಛಾಯಾ ಸಿಂಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರೋ ಅಮೃತಧಾರೆ (Amruthadhare) ಸೀರಿಯಲ್ ನಲ್ಲಿ ಸದ್ಯ ಕಚಗುಳಿ ಇಡುವಂತಹ ಸೀನ್ ಗಳೆ ಪ್ರಸಾರವಾಗ್ತಿವೆ. ಮದುವೆಯಾಗಿ ಇಷ್ಟು ಸಮಯ ಆದ್ರೂ ಇನ್ನೂ ದೈಹಿಕವಾಗಿ ಒಂದಾಗದ ಭೂಮಿಕಾ ಮತ್ತು ಗೌತಮ್ ರನ್ನು ಒಂದು ಮಾಡೋಕೆ ಅಜ್ಜಿ ಏನೇನೋ ಪ್ಲ್ಯಾನ್ ಮಾಡ್ತಾರೆ. ಸದ್ಯ ಇಬ್ಬರ ಪ್ರಸ್ತಕ್ಕೆ ಸಮಯ ಫಿಕ್ಸ್ ಮಾಡಿದ್ದಾರೆ.
ಒಂದು ಕಡೆ ಶಕುಂತಲಾ, ಗೌತಮ್ -ಭೂಮಿ ಇಬ್ಬರನ್ನು ಬೇರೆ ಮಾಡೋದು ಹೇಗೆ ಎಂದು ಯೋಚ್ನೆ ಮಾಡ್ತಾ, ಹನಿಮೂನ್ ಎಂಜಾಯ್ ಮಾಡೋಕೂ ಬಿಡದೆ ಕಾಟ ಕೊಡ್ತಿದ್ರೆ, ಮತ್ತೊಂದೆಡೆ, ಇಬ್ಬರೂ ಇನ್ನೂ ಒಂದಾಗಿಲ್ಲ ಎಂದು ತಿಳಿದ ಅಜ್ಜಿ ಇಬ್ಬರನ್ನು ಒಂದು ಮಾಡೋಕೆ ಇವತ್ತು ಪ್ರಸ್ತ ಆಗ್ಲೇ ಬೇಕು, ಇನ್ನು ದಿನಗಳೇ ಇಲ್ಲ ಎಂದು, ಭೂಮಿ, ಗೌತಮ್ ಇಬ್ಬರನ್ನೂ ಬೇರೆ ಬೇರೆಯಾಗಿ ಕರೆದು, ಇಬ್ಬರಲ್ಲೂ ಸುಳ್ಳು ಹೇಳಿ, ಇಬ್ಬರೂ ಪ್ರಸ್ತಕ್ಕೆ ತಯಾರಾಗೋವಂತೆ ಮಾಡಿದ್ದಾರೆ.
ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬರೋ ಅಮೃತಧಾರೆಯ ಪ್ರೊಮೋದ (Amruthadhare Promo) ತುಂಬೆಲ್ಲಾ ಪ್ರಸ್ತದ ಪ್ಲ್ಯಾನು, ಆನಂದ್ ಕೊಡೋ ಪೊಲೀ ಐಡಿಯಾ, ಗೌತಮ್ ಮತ್ತು ಭೂಮಿಯ ಫಸ್ಟ್ ನೈಟ್ ನ ಸಂಭ್ರಮ, ಇಬ್ಬರ ಪಿಸುಮಾತು, ಪ್ರೀತಿ, ರೋಮ್ಯಾನ್ಸ್ ಇವುಗಳೇ ತುಂಬಿಕೊಂಡಿದೆ. ಇವುಗಳನ್ನು ನೋಡಿ ವೀಕ್ಷಕರು ಏನೇನೋ ಕಾಮೆಂಟ್ ಮಾಡ್ತಿದ್ದಾರೆ.
ಭೂಮಿ -ಗೌತಮ್ ರನ್ನು ಜೊತೆಯಾಗಿಸೋಕೆ ಸುಳ್ಳು ಹೇಳಿ ಪ್ರಸ್ತದ ಪ್ಲ್ಯಾನ್ ಮಾಡಿರೋ ಅಜ್ಜಿಯ ನಟನೆಗೆ ಜನರು ಸೋತಿದ್ದಾರೆ. ಎಲ್ಲರಿಗೂ ಇದೇ ತರ ಅಜ್ಜಿ ಸಿಕ್ಕಿದ್ರೆ, ಜೀವನ ಸೂಪರ್ ಆಗಿರುತ್ತೆ ಎಂದಿದ್ದಾರೆ. ಅಲ್ಲದೇ ಅಜ್ಜಿ ಸೂಪರ್, ಸಿಕ್ಕಾಪಟ್ಟೆ ಸ್ಮಾರ್ಟ್ ಇದ್ದಾರೆ. ಅಜ್ಜಿದು ಏನು ಆಕ್ಟಿಂಗ್ ಗುರು ಎಂದಿದ್ದಾರೆ.
ಇನ್ನೂ ಕೆಲವರು ಈ ಗೌತಮ್ ಇಂಥ ವಿಷ್ಯದಲ್ಲಿ ಝಿರೋ, ಇರ್ಲಿ ಬಿಡಿ ನಮ್ ಭೂಮಿ ಎಲ್ಲವನ್ನೂ ಸರಿ ಮಾಡ್ತಾರೆ ಅಂದ್ರೆ, ಮತ್ತೆ ಕೆಲವರು ಗೌತಮ್ ಮತ್ತು ಭೂಮಿಕ ಆಕ್ಟಿಂಗ್ ಎಕ್ಸ್ಟ್ರಾ ಆರ್ಡಿನರಿಯಾಗಿದೆ. ನಾವೇ ಉಸಿರು ಮೇಲೆ ತೆಗೆದುಕೊಂಡು ಮುಖದಲ್ಲಿ ಮುಗುಳು ನಗೆ ಬಂದು ಕಣ್ಣಲ್ಲಿ ಕನಸುಗಳು ಕಟ್ಟಿಟ್ಟ ಹಾಗಿದೆ. ವಾವ್ ಡೈರೆಕ್ಟ್ ಸರ್, ಸೂಪರ್ ನೀವು 90ಕಿಡ್ಸ್ ಅಥವಾ 80ಕಿಡ್ಸ್ ಇರಬೇಕು, ಹಾಗೆ ತಲೆ ಓಡ್ಸಿ ಮಾಡಿದ್ದೀರಿ ಎಂದಿದಾರೆ.
ಮತ್ತೊಂದಿಷ್ಟು ಜನ ಈ ಎಪಿಸೋಡ್ ಫುಲ್ ರೊಮ್ಯಾಂಟಿಕ್, ಬರ್ತಾ ಬರ್ತಾ ಪೋಲಿ ಸೀರಿಯಲ್ ಆಗ್ತಿದೆ ಅನಿಸ್ತಿದೆ ಅಂದ್ರೆ, ಇನ್ನೊಂದಿಷ್ಟು ಜನ ವಾವ್ ಫೈನಲಿ ಫಸ್ಟ್ ನೈಟ್ ಆಗ್ತಿದೆ ಅಂದ್ರೆ, ಮತ್ತೊಬ್ರು ಮುಜುಗರ ಉಂಟುಮಾಡದೆ,ಬೇಸರ ತರಿಸದೆ ಕಿರುತೆರೆಯಲ್ಲಿ ಮೂಡಿಬರುತ್ತಿರುವ ಸುಂದರ ಪ್ರೇಮಕಾವ್ಯ ಅಂದರೆ ತಪ್ಪಿಲ್ಲ ಎಂದೆನಿಸುತ್ತದೆ ಎಂದಿದ್ದಾರೆ.
ಅಭಿಮಾನಿಗಳು ಇಬ್ಬರ ಮಿಲನದ ಎಪಿಸೋಡ್ ನಿಂದ ಖುಷಿಯಾಗಿದ್ದು, ಈ ಸೀರಿಯಲ್ ಗೆ ಯಾವಾಗ ಇವರಿಬ್ಬರನ್ನು ಹಾಕಿದ್ರೋ, ಆವಾಗ್ಲೆ ಸೀರಿಯಲ್ ಗೆದ್ದಿದೆ ಅಂದಿದ್ದಾರೆ. ಅಲ್ಲದೇ ಕಡಲಂಚಿನಲಿ ಭುವಿ ಭಾನು ಒಂದಾದಂತಿದೆ ನಮ್ಮ ಭೂಮಿಕಾ ಗೌತಮರ ಸಮ್ಮಿಲನ, ನಮ್ಮ ಕಂಗಳಿಗೆ ಇದು ರಸದೌತಣ ಅನ್ನೋರು ಇದ್ದಾರೆ. ನಮ್ಮ ಹಾರ್ಟ್ ಬೀಟ್ ಜಾಸ್ತಿ ಆಗ್ತಿದೆ ಅಂತಾನು ಅಂದಿದ್ದಾರೆ ಜನ, ಅಷ್ಟೇ ಅಲ್ಲ ಇವತ್ತಿನ TRP ಟಾಪ್ ಅಲ್ಲಿ ಇರುತ್ತೆ ಅಂದಿದ್ದಾರೆ ಫ್ಯಾನ್ಸು.