ಏರ್ಪೋರ್ಟಲ್ಲಿ ನಿವೇದಿತಾ ಗೌಡ ಡ್ಯಾನ್ಸ್, ಕಾಮನ್ ಸೆನ್ಸ್ ಇಲ್ವಾ ಕೇಳಿದ ಫ್ಯಾನ್ಸ್!
'ನನ್ನಮ್ಮ ಸೂಪರ್‌ಸ್ಟಾರ್' ಮೂಲಕ ಮನೆಮಾತಾಗಿರುವ ನಟಿ, ನಿರೂಪಕಿ ಜಾನ್ವಿ ರಾಯಲಾ ಜೊತೆ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಏರ್‌ಪೋರ್ಟಲ್ಲಿ ಡ್ಯಾನ್ಸ್ ಮಾಡಿದ್ದು, ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿರುವ ನಟಿಯೆಂದರೆ ಜಾನ್ವಿ ರಾಯಲಾ (Janvi Rayala). ವೃತ್ತಿಯಲ್ಲಿ ದಂತವೈದ್ಯೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುವ ಹಲವು ರಿಯಾಲಿಟಿ ಷೋಗಳಲ್ಲಿ ಈಕೆ ನಿರೂಪಕಿಯಾಗಿ ಜನಮನ ಗೆದ್ದಿದ್ದಾರೆ. 'ಒಂದು ಸಿನಿಮಾ ಕಥೆ' ಶೋನ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ಈ ಬೆಡಗಿ, ನಂತರ 'ರಾಜ ರಾಣಿ ಸೀಸನ್- 2'ರ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ನಂತರ 'ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 2' ನಲ್ಲಿ ನಿರೂಪಕಿಯಾಗಿದ್ದು ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇನ್ನು ನಿವೇದಿತಾ ಗೌಡ ಯಾರೆಂದು ಪರಿಚಯಿಸುವ ಅಗತ್ಯವೇ ಇಲ್ಲ. ಬಿಗ್ ಬಾಸ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟು, ಒಂದಲ್ಲೊಂದು ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿರುವ ನಿವೇದಿತಾ ಸೋಷಿಯಲ್ ಮೀಡಿಯಾ ಮೂಲಕವೂ ಜನರಿಗೆ ಹೆಚ್ಚು ಚಿರಪರಿಚಿತರು.
ಜಾನ್ವಿ ಕೆಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಾಗುತಾ ದೂರ ದೂರ', 'ವಿಷ್ಣು ಸರ್ಕಲ್', 'ಕಾನೂರಾಯಣ', 'ಅವನಲ್ಲಿ ಇವಳಿಲ್ಲಿ, 'ಕೈವ' ಮತ್ತು 'ಮಹಾನ್ ಕಲಾವಿದ' ಈಕೆ ಬಣ್ಣ ಹಚ್ಚಿದ್ದಾರೆ. ದಂತ ವೈದ್ಯೆಯ ಪದವಿ ಮುಗಿಸುತ್ತಿದ್ದಂತೆಯೇ ಸಿನಿ ರಂಗದಲ್ಲಿ ಪರಿಚಯವಾದರು. 'ಊರ್ವಿ' ಸಿನಿಮಾದಲ್ಲಿ ಮೊದಲು ನಟಿಸಿದ ನಟಿ, ನಂತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ (social media) ಸಕತ್ ಆ್ಯಕ್ಟೀವ್ ಆಗಿರುವ ನಟಿ ಜಾನ್ವಿ ಈಗ ಸಕತ್ ಡ್ಯಾನ್ಸ್ ಒಂದಕ್ಕೆ ಸ್ಟೆಪ್ ಹಾಕಿದ್ದು, ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಈ ಡ್ಯಾನ್ಸ್ ಭರ್ಜರಿಯಾಗಿದ್ದರೂ ಟ್ರೋಲಿಗರ ಬಾಯಿಗೆ ಆಹಾರವಾಗುತ್ತಿದೆ. ಬಹುತೇಕ ಎಲ್ಲರೂ ನಟಿಗೆ ಮ್ಯಾನರ್ಸ್ ಪಾಠ ಮಾಡುತ್ತಿದ್ದಾರೆ!
Shrirasthu Shubhamasthu: ಮಾಧವನ ಪ್ರೇಮ ನಿವೇದನೆಗೆ ತುಳಸಿ ಗ್ರೀನ್ ಸಿಗ್ನಲ್ ಕೊಟ್ಟಾಯ್ತು!
ಹೌದು. ಜಾನ್ವಿ ಹಾಗೂ ನಿವೇದಿತಾ ಗೌಡ ಏರ್ಪೋರ್ಟ್ ಹೊರಗೆ (Public place) ಮಾಡಿದ ಡ್ಯಾನ್ಸ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ಜಾಗ ಎಲ್ಲಿ ಎಂದು ಹೇಳಬಲ್ಲಿರಾ ಎಂದು ಕೇಳಿದ್ದಾರೆ. ಆದರೆ ಇದು ಸಾರ್ವಜನಿಕ ಸ್ಥಳ ಆಗಿರುವ ಕಾರಣ, ಟ್ರೋಲಿಗರು ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದಾರೆ. ಸ್ವಲ್ಪವೂ ಮ್ಯಾನರ್ಸ್ ಬೇಡ್ವಾ ಎಂದು ಪ್ರಶ್ನಿಸುತ್ತಿದ್ದಾರೆ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ಹುಚ್ಚಾಪಟ್ಟೆ ಕುಣಿದು ಅಲ್ಲಿದ್ದವರಿಗೆ ಡಿಸ್ಟರ್ಬ್ ಮಾಡುವುದು ಎಷ್ಟು ಸರಿ, ಕಾಮನ್ ಸೆನ್ಸ್ ಎನ್ನೋದು ಸ್ವಲ್ಪನಾದ್ರೂ ಬೇಡ್ವಾ ಎಂದು ಕೆಲವರು ಪ್ರಶ್ನಿಸಿದ್ದರೆ, ಇಷ್ಟು ದೊಡ್ಡ ನಟಿಗೆ ಮ್ಯಾನರ್ಸ್ ಬಗ್ಗೆ ಬೇಸಿಕ್ ನಾಲೇಜ್ ಕೂಡ ಇಲ್ವಾ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. ಸ್ಲಿಟ್ ಸ್ಕರ್ಟ್ನಲ್ಲಿ ಇಬ್ಬರೂ ಕ್ಯೂಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕೂ ಓರ್ವ ಕಮೆಂಟಿಗ ಟೀಕೆ ಮಾಡಿದ್ದು, ಚಡ್ಡಿನೇ ಹಾಕಿಲ್ವಲ್ಲಾ, ಮರೆತುಹೋದ್ರಾ ಎಂದು ಪ್ರಶ್ನಿಸಿದ್ದಾರೆ. ಇನ್ನೋರ್ವ ಕಮೆಂಟಿಗ ನಮ್ಮ ಗದ್ದೆಯಲ್ಲಿ ಕಳೆ ಕೀಳುವ ಹೆಣ್ಣು ಆಳುಗಳಿಗೂ ಸಾಮಾನ್ಯ ಜ್ಞಾನ ಇರುತ್ತದೆ ನಿಮಗೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಈ ಡ್ಯಾನ್ಸ್ ಫೋಟೋಗೆ ಸುಮಾರು 23 ಸಾವಿರ ಲೈಕ್ಸ್ (likes) ಬಂದಿವೆ. ಅಂದಹಾಗೆ, ಇವರು ನಿರೂಪಕಿಯಾಗಿ ಹಲವರ ಮನಸ್ಸನ್ನು ಕದ್ದಿದ್ದಾರೆ. ನಿರೂಪಕಿಯಾಗಿ ಆಯ್ಕೆಯಾದ ಬಳಿಕ ಈ ಹಿಂದೆ ಅವರಿಗೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ನಟಿ, ಕಲಿಯುವುದಕ್ಕೆ, ಬೆಳೆಯುವುದಕ್ಕೆ ಉತ್ತಮ ವೇದಿಕೆ ದೊರೆತಿದೆ. ನಿರೂಪಣೆ ನೋಡುವುದಕ್ಕೆ ಸುಲಭ ಎನಿಸಬಹುದು. ಆದರೆ ತುಂಬಾ ಕಷ್ಟದ ಕೆಲಸ. ಸಾಕಷ್ಟು ಸಮಯ ನಿಂತೇ ಇರಬೇಕು. ಸತತವಾಗಿ 15 ಗಂಟೆವರೆಗೆ ಕೆಲಸ ಮಾಡಲೇಬೇಕಾಗುತ್ತದೆ. ಪರಿಶ್ರಮ ಸಾಕಷ್ಟಿದೆ. ಆದರೆ ಅನುಭವ ತುಂಬಾ ಚೆನ್ನಾಗಿದೆ. ಜನಪ್ರಿಯ ಕಾರ್ಯಕ್ರಮಕ್ಕೆ ನನ್ನನ್ನು ನಿರೂಪಕಿಯಾಗಿ ಆಯ್ಕೆ ಮಾಡಿದ್ದು ನನ್ನ ಅದೃಷ್ಟ ಎಂದಿದ್ದರು. ಆದರೆ ಸಾರ್ವಜನಿಕ ಸ್ಥಳದಲ್ಲಿನ ಡ್ಯಾನ್ಸ್ ಮಾತ್ರ ವೀಕ್ಷಕರಿಗೆ ಯಾಕೋ ಹಿಡಿಸಲಿಲ್ಲ.