ಬಿಗ್ ಬಾಸ್ ಕನ್ನಡ ಸೀಸನ್ 10; ಮೊದಲ ಸ್ಪರ್ಧಿಯಾಗಿ ಕಾಲಿಟ್ಟ ನಟಿ ಅಮೃತಾ ಗೌಡ
ಬಿಗ್ ಬಾಸ್ ಕನ್ನಡ ಸೀಸನ್ 10-ನ ಮೊದಲ ಸ್ಪರ್ಧಿಯಾಗಿ ನಮೃತಾ ಗೌಡ ಕಾಲಿಟ್ಟಿದ್ದಾರೆ. 'ಪುಟ್ಟಗೌರಿ ಮದುವೆ' ಸೀರಿಯಲ್ ಖ್ಯಾತಿಯ ನಟಿ ನಮೃತಾ ಗೌಡ ಅದಕ್ಕೂ ಮೊದಲು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ನಟಿಸಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 10-ನ ಮೊದಲ ಸ್ಪರ್ಧಿಯಾಗಿ ನಮೃತಾ ಗೌಡ ಕಾಲಿಟ್ಟಿದ್ದಾರೆ. 'ಪುಟ್ಟಗೌರಿ ಮದುವೆ' ಸೀರಿಯಲ್ ಖ್ಯಾತಿಯ ನಟಿ . ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ನಟಿ ಅಮೃತಾ ಗೌಡ, ಯಾವ ರೀತಿಯಲ್ಲಿ ಬಿಗ್ ಬಾಸ್ ವೀಕ್ಷಕರನ್ನು ರಂಜಿಸಲಿದ್ದಾರೆ, ಹೇಗೆ ಗೇಮ್ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ನಮ್ರತಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನಲ್ಲಿ ಜನಿಸಿರುವ ನಟಿ ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು. ಇದೀಗ ಬಿಗ್ ಬಾಸ್‌ಗೆ ಕಾಲಿಟ್ಟು ಸಮಸ್ತ ಕನ್ನಡಿಗರ ಮನ ಗೆಲ್ಲಲು ಪ್ರಯತ್ನನಡೆಸಿದ್ದಾರೆ ಎನ್ನಬಹುದು.
'ಊರಿಗೊಬ್ಳೆ ಪದ್ಮಾವತಿ' ಹಾಡಿನ ಮೂಲಕ ನಮೃತಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ಬಿಗ್ ಬಾಸ್ ಮನೆ ಪ್ರವೇಶಿಸಿದ ನಮೃತಾ ಗೌಡ, ಮನೆ ಒಳಗೆ ಹೋಗಿ ಸಖತ್ ಥ್ರಿಲ್ ಅನುಭವಿಸಿದ್ದಾರೆ. ಇನ್ಮುಂದೆ ನಟಿ ನಮೃತಾ ಗೌಡ ಹೇಗೆಲ್ಲಾ ಆಡುತ್ತ ಬಿಗ್ ಬಾಸ್ ಪ್ರಿಯರನ್ನು ರಣಜಿಸಲಿದ್ದಾರೆ ಎಂದು ಕಾದು ನೋಡಬೇಕು.
ಬಿಗ್ ಬಾಸ್ ಕನ್ನಡದ 9 ಸೀಸನ್ ಈಗಾಗಲೇ ಮುಗಿದಿದ್ದು, ಇದೀಗ 10ನೇ ಸೀಸನ್ ಪ್ರಾರಂಭವಾಗಿದೆ. ಈ ಮೊದಲಿನ ಎಲ್ಲಾ ಶೋಗಳನ್ನು ಹೋಸ್ಟ್ ಮಾಡಿರುವ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಈ ಸೀಸನ್ ಕೂಡ ನಡೆಸಿಕೊಡುತ್ತಿದ್ದಾರೆ. ಈ ಮೂಲಕ ಎಲ್ಲಾ ಭಾಷೆಗಳು ಸೇರಿದಂತೆ ನಟ ಸುದೀಪ್ ಮಾತ್ರ ಎಲ್ಲಾ ಬಿಗ್ ಬಾಸ್ ಸೀಸನ್‌ಗಳನ್ನು ಹೊಟ್ಸ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10, ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30 ರಿಂದ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 9.00 ರಿಂದ ಪ್ರಸಾರವಾಗಲಿದೆ.