Karthik Mahesh Birthday: ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅಕ್ಟೋಬರ್ 7ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ನಮ್ರತಾ ಗೌಡ ಶೇರ್ ಮಾಡಿರುವ ಸ್ಪೆಷಲ್ ಬರ್ತ್ ಡೇ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಜನ ಈವಾಗ ಗುಟ್ಟೆಲ್ಲಾ ರಟ್ಟಾಯ್ತು ಎನ್ನುತ್ತಿದ್ದಾರೆ. ಹಾಗಿದ್ರೆ ಅಂತದ್ದೇನಿದೆ ವಿಡಿಯೋದಲ್ಲಿ?

ಕಾರ್ತಿಕ್ ಮಹೇಶ್ ಹುಟ್ಟುಹಬ್ಬಕ್ಕೆ ನಮ್ರತಾ ಗೌಡ ಸ್ಪೆಷಲ್ ವಿಶ್

ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಇಂದು ಅಂದರೆ ಅಕ್ಟೋಬರ್ 7ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ನಮ್ರತಾ ಗೌಡ, ತಮ್ಮ ಆತ್ಮೀಯ ಸ್ನೇಹಿತನಿಗೆ ವಿಶ್ ಮಾಡಿ, ಸ್ಪೆಷಲ್ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು, ಕೊನೆಗೂ ಇಷ್ಟು ದಿನ ಮುಚ್ಚಿಟ್ಟಿದ್ದ ಗುಟ್ಟು ರಟ್ಟಾಗಿದೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ?

ಸ್ಪೆಷಲ್ ಹ್ಯೂಮನ್ ಗೆ ಹ್ಯಾಪಿ ಬರ್ತ್ ಡೇ

ಕಾರ್ತಿಕ್ ಮಹೇಶ್ ಅವರ ಮುದ್ದಾದ ಕ್ಷಣಗಳು ಹಾಗೂ ಫನ್ನಿಯಾಗಿರುವ ವಿಡಿಯೋಗಳನ್ನು ಕಲೆಕ್ಟ್ ಮಾಡಿ, ಒಂದು ವಿಡಿಯೋ ಮಾಡಿ ಹಂಚಿಕೊಂಡಿರುವ ನಮ್ರತಾ ಅದಕ್ಕೆ Happy happy birthday favourite human… ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ವಿದೇಶ ಟ್ರಾವೆಲ್ ವಿಡಿಯೋಗಳು, ವಿಡಿಯೋ ಕಾಲ್ ಗಳ ವಿಡಿಯೋ, ಜೊತೆಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ವಿಡಿಯೋ, ತಂಗಿ ಮಗುವಿನ ಜೊತೆ ಕಾರ್ತಿಕ್ ಎಂಜಾಯ್ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದು, ಎಲ್ಲಾ ವಿಡೀಯೋಗಳನ್ನು ನಮ್ರತಾ ಖುದ್ದಾಗಿ ಮಾಡಿದ್ದಾರೆ. ಹಾಗಾಗಿ ಅಭಿಮಾನಿಗಳು, ಅಂದರೆ ಇಷ್ಟು ದಿನ ನಿಮ್ಮ ಎಲ್ಲಾ ವಿದೇಶ ಟ್ರಿಪ್, ನೀವು ಹೋದ ಕಡೆಗಳಲ್ಲೆಲ್ಲಾ ನಿಮ್ಮ ಜೊತೆ ಇದ್ದಿದ್ದು ಕಾರ್ತಿಕ್ ಮಹೇಶ್ ಅವರೆ ಅಲ್ವಾ? ವಾವ್ ತುಂಬಾ ಸುಂದರವಾದ ವಿಡಿಯೋ, ಯಾರ ದೃಷ್ಟಿಯೂ ಬೀಳದೇ ಇರಲಿ. ದೇವರಲ್ಲಿ ಪ್ರಾರ್ಥಿಸುತ್ತೇನೆ, ಆದಷ್ಟು ಬೇಗ ನಿಮ್ಮಿಬ್ಬರಿಗೂ ಮೂರು ಗಂಟು ಬೀಳಲಿ. 2027ಗೆ ನಿಮ್ಮಿಬ್ಬರ ಕನಸುಗಳೆಲ್ಲ ನನಸಾಗಲಿ. ನಿಮಗೆ ಉತ್ತಮ ಪ್ರಾಜೆಕ್ಟ್‌ಗಳು ಸಿಗಲಿ, ಜೀವನದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ. ದೇವರು ನಿಮ್ಮಿಬ್ಬರನ್ನೂ ಸದಾ ಆಶೀರ್ವದಿಸಲಿ. ಮತ್ತೊಮ್ಮೆ ಶುಭಾಶಯಗಳು! ಎಂದು ಸಹ ಶುಭ ಹಾರೈಸಿದ್ದಾರೆ.

ಬಿಗ್ ಬಾಸ್ ಬಳಿಕ ಶುರುವಾದ ರೂಮರ್ಸ್

ಬಿಗ್ ಬಾಸ್ ಬಳಿಕ ಇಬ್ಬರು ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ನಮ್ರತಾ ಗೌಡ ಹಾಗೂ ಕಾರ್ತಿಕ್‌ ಮಹೇಶ್‌ ಲವ್‌ನಲ್ಲಿದ್ದಾರೆ ಎಂದು ಎರಡು ವರ್ಷಗಳಿಂದ ಗಾಸಿಪ್ ಕೇಳಿ ಬರುತ್ತಿದೆ. ಆದರೆ ಇವರಿಬ್ಬರು ಮಾತ್ರ, ನಾವು ಫ್ರೆಂಡ್ಸ್‌ ಎಂದು ಹೇಳುತ್ತಲೇ ಇದ್ದರು. ಹಿಂದೊಮ್ಮೆ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ““ನನ್ನ ರಿಲೇಶನ್‌ಶಿಪ್‌ ಸ್ಟೇಟಸ್, ಮದುವೆಯ ಬಗ್ಗೆ ಸಾಕಷ್ಟು ವದಂತಿ ಹರಡುತ್ತಿರೋದು ನಾನು ಗಮನಿಸುತ್ತಿದ್ದೇನೆ. ನಾನೊಂದು ಮಾತು ಹೇಳ್ತೀನಿ ಕೇಳಿ, ಒಂದು ವೇಳೆ ನಾನು ಮದುವೆಯಾಗುತ್ತಿದ್ದರೆ, ಈ ವಿಷಯವನ್ನು ಗುಟ್ಟಾಗಿಡಲು ನಾನೇ ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದೆನು” ಎಂದು ನಟಿ ನಮ್ರತಾ ಗೌಡ ಹೇಳಿದ್ದರು. ಆದರೆ ಇದೀಗ ವಿಡೀಯೋ ನೋಡಿ ಇವರಿಬ್ಬರ ನಡುವೆ ಪ್ರೀತಿ ಇರುವುದು ಕನ್ಫರ್ಮ್ ಎನ್ನುತ್ತಿದ್ದಾರೆ ಫ್ಯಾನ್ಸ್.

View post on Instagram