Asianet Suvarna News Asianet Suvarna News

ವಿನಯ್​ ಗೌಡಗೆ ಬಿಗ್​ಶಾಕ್​ ನೀಡಿದ ನಮ್ರತಾ: ಬದುಕಿನ ಸತ್ಯ ಈಗ ಅರ್ಥ ಆಯ್ತು ಎಂದ ವಿನಯ್​!

ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಯಾರನ್ನು ಇಡುತ್ತೀರಿ ಎನ್ನುವ ಪ್ರಶ್ನೆಗೆ ನಮ್ರತಾ ವಿನಯ್​ ಹೆಸರು ಹೇಳಿದ್ದು, ಇದು ಹಲವರ ಅಚ್ಚರಿಗೆ ಕಾರಣವಾಗಿದೆ.
 

Namrata took Vinays name when Bigg Boss asked Who do you keep out of captainship suc
Author
First Published Nov 30, 2023, 5:26 PM IST

ಬಿಗ್​ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹೊಸಹೊಸ ವಿಷಯಗಳು ನಡೆಯುತ್ತಿವೆ. ವಿನಯ್ ಗೌಡ ಬಿಗ್ ಬಾಸ್ ಮನೆಗೆ ಬಂದ ಕೆಲವೇ ವಾರಗಳಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಇದು ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು. ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ನಮ್ರತಾ ಗೌಡ ವಿನಯ್​ ಅವರಿಗೆ ಬಿಗ್​ ಶಾಕ್​ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಾಡೆಲ್​ಗಳಾದ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಬಂದ ಮೇಲೆ ಬಿಗ್​ಬಾಸ್​ ಮನೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಹೊರಗೆ ನಡೆದ ಅನೇಕ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.  ನೀವು ಇನ್ನೂ ವಿನಯ್ ಅವರ ನೆರಳಲ್ಲೇ ಇದ್ದೀರಿ ಎಂದು ಪವಿ  ನಮ್ರತಾಗೆ ಕಿವಿಮಾತು ಹೇಳಿದ್ದು, ಅದನ್ನು  ನಮ್ರತಾ ಗಂಭೀರವಾಗಿ ಸ್ವೀಕರಿಸಿದಂತೆ ಇದೆ.

ಇದೀಗ ನಮ್ರತಾ ವಿನಯ್​ ಅವರನ್ನು ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಇಡುವ ಮಾತನಾಡಿ ಅವರಿಗೆ ಶಾಕ್​ ನೀಡಿದ್ದಾರೆ. ನಮ್ರತಾ, ವಿನಯ್, ಸ್ನೇಹಿತ್ ಈ ಮೂವರು  ಒಬ್ಬರನ್ನ ಬಿಟ್ಟು ಒಬ್ಬರು  ಇರ್ತಿರಲಿಲ್ಲ. ಏನೇ ಸವಾಲು ಬಂದರೂ ಒಟ್ಟಿಗೇ ಎದುರಿಸುತ್ತಿದ್ದರು.  ಆದರೆ ಪ್ರತಾಪ್​ ಎಂಟ್ರಿ ಆಗುತ್ತಿದ್ದಂತೆಯೇ  ನಮ್ರತಾಗೆ  ಇಲ್ಲಿ ಯಾರು ನಮ್ಮವರಲ್ಲ ಎಂಬುದು ಅರ್ಥವಾಗ್ತಿದೆ. ಇದೇ ಕಾರಣಕ್ಕೆ  ವಿನಯ್ ಅವರನ್ನು ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಇಡುವ ಮಾತನಾಡಿದ್ದಾರೆ.

ಕಾಲಿಗೆ ಹಗ್ಗ ಕಟ್ಟಿಕೊಂಡು ಆಡುವ ಭರದಲ್ಲಿ ಕಾಲ್ತುಳಿತ, ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ ಸ್ಪರ್ಧಿಗಳು!

ಬಿಗ್​ಬಾಸ್ ನಮ್ರತಾ ಅವರಿಗೆ ಈ ಪ್ರಶ್ನೆ ಕೇಳಿತ್ತು. ಈ ವಾರ ಕ್ಯಾಪ್ಟನ್​ಷಿಪ್​ನಿಂದ ಯಾರನ್ನು ಹೊರಕ್ಕೆ ಇಡಲು ಬಯಸುವಿರಿ ಎಂದು. ಅದಕ್ಕೆ ನಮ್ರತಾ ವಿನಯ್​ ಹೆಸರು ಹೇಳಿದ್ದಾರೆ. ಇವರಿಗೆ ಕೋಪ ಬಂದಾಗ ಏನನ್ನೂ ನೋಡುವುದಿಲ್ಲ. ಕೋಪದಲ್ಲಿ ಯಾರಿಗೆ ಹರ್ಟ್​ ಮಾಡುತ್ತೇನೆ ಎನ್ನುವುದೇ ಗೊತ್ತಾಗುವುದಿಲ್ಲ. ಆದ್ದರಿಂದ ಅವರನ್ನು ಕ್ಯಾಪ್ಟನ್​ಷಿಪ್​ನಿಂದ ಹೊರಕ್ಕೆ ಇಡಲು ಬಯಸುತ್ತೇನೆ ಎಂದರು. ಇದರಿಂದ ಸಹಜವಾಗಿ ವಿನಯ್​ ಅವರಿಗೆ ಕೋಪ ಬಂದಿದೆ. ಈ ಒಂದು ಜರ್ನಿಯಲ್ಲಿ ಯಾರೂ ನಮ್​ ಜೊತೆ ಯಾರೂ ಬರಲ್ಲ. ಈ ಒಂದು ಸತ್ಯ ಅರ್ಥ ಆಗಿದೆ ಈಗ ಎಂದರು. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. 

ನಮ್ರತಾ ಮಾತು ವಿನಯ್​ಗೆ ಮಾತ್ರವಲ್ಲದೇ ಹಲವರನ್ನು ಅಚ್ಚರಿಕೆ ತಳ್ಳಿದೆ. ಏಕೆಂದರೆ ವಿನಯ್​ ಹೆಸರನ್ನು ನಮ್ರತಾ ತೆಗೆದುಕೊಳ್ಳಬಹುದು ಎಂದು ಯಾರೂ ಊಹಿಸಿದಂತೆ ಇರಲಿಲ್ಲ. ನಮ್ರತಾ ಅವರು ವಿನಯ್​ ಹೆಸರನ್ನು ಬೇಸರದಿಂದಲೇ ಹೇಳಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ರತಾ ನಿರ್ಧಾರ  ಸ್ನೇಹಿತ್‌ ಅವರಿಗೂ ಬೇಸರ ತರಿಸಿದ್ದನ್ನು ಪ್ರೊಮೋದಲ್ಲಿ ನೋಡಬಹುದು. ಇನ್ನು ಕಮೆಂಟ್​ ಸೆಕ್ಷನ್​ನಲ್ಲಿ ನಮ್ರತಾ ವಿರುದ್ಧವಾಗಿ ಹಲವರು ಮಾತನಾಡಿದ್ದಾರೆ. 

ಆಟದ ಹೆಸರಲ್ಲಿ ಭಾರಿ ಹೊಡೆದಾಟ! ವೈಲ್ಡ್​ ಕಾರ್ಡ್​ ಎಂಟ್ರಿ ಆಗ್ತಿದ್ದಂತೆಯೇ ಬಿಗ್​ಬಾಸ್​ ಮನೆಯಲ್ಲಿ ಇದೇನಿದು?

Follow Us:
Download App:
  • android
  • ios