Asianet Suvarna News Asianet Suvarna News

ಕಾಲಿಗೆ ಹಗ್ಗ ಕಟ್ಟಿಕೊಂಡು ಆಡುವ ಭರದಲ್ಲಿ ಕಾಲ್ತುಳಿತ, ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ ಸ್ಪರ್ಧಿಗಳು!

ಬಿಗ್​ಬಾಸ್​ ಮನೆಯಲ್ಲಿ ಹಗ್ಗದ ಆಟ ಶುರುವಾಗಿದ್ದು, ಇದು ಸ್ಪರ್ಧಿಗಳ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದೇನು?
 

Rope game fighting inside Bigg Boss Kannada house contestant injured suc
Author
First Published Nov 29, 2023, 2:55 PM IST

ಬಿಗ್​ಬಾಸ್​​ ಮನೆಯಲ್ಲಿ ಇದೀಗ ಆಟದ ಭರಾಟೆ ಜೋರಾಗಿಯೇ ನಡೆದಿದೆ. ಆಟ ಎಂದ ಮೇಲೆ ತಾವು ಗೆಲ್ಲಬೇಕು ಎನ್ನುವುದು ಎಲ್ಲ ಸ್ಪರ್ಧಿಗಳ ಬಯಕೆ ಸಹಜವೇ. ಆದರೆ ಆಟದ ಹೆಸರಿನಲ್ಲಿ ಇದಾಗಲೇ ಬಿಗ್​ಬಾಸ್​ ಮನೆಯೊಳಕ್ಕೆ ಈ ಹಿಂದೆಯೂ ದೊಡ್ಡ ದೊಡ್ಡ ಜಗಳಗಳೇ ನಡೆದು ಹೋಗುವೆ. ಬಿಗ್​ಬಾಸ್​ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಇದೇ ಕಾರಣಕ್ಕೆ ಟಿಆರ್​ಪಿ ಕೂಡ ಹೆಚ್ಚಾಗುತ್ತದೆ. ಅದೇ ರೀತಿ ಕನ್ನಡದ ಬಿಗ್​ಬಾಸ್​ನಲ್ಲಿ ಕೂಡ ಹೊಡಿಬಡಿ ಮಿತಿ ಮೀರುತ್ತಲೇ ಸಾಗಿದೆ. ಇದಾಗಲೇ ಇಬ್ಬರ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ.  ಒಬ್ಬರು ಫ್ಯಾಷನ್‌ ಮಾಡೆಲ್‌ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಅವಿನಾಶ್ ಶೆಟ್ಟಿ. ಇದರ ಬೆನ್ನಲ್ಲೇ ಬಿಗ್​ಬಾಸ್​ ಸ್ಪರ್ಧಿಗಳಿಗೆ ಆಟದ ಟಾಸ್ಕ್​ ಒಂದರ ಮೇಲೊಂದರಂತೆ ನೀಡಲಾಗುತ್ತಿದ್ದು,  ಇದು ಹೊಡೆದಾಟ, ಬಡಿದಾಟಕ್ಕೂ  ಕಾರಣವಾಗ್ತಿದೆ. ಇದೀಗ ಕಾಲ್ತುಳಿತವೂ ಆಗಿದ್ದು, ಒಬ್ಬರ ಮೇಲೊಬ್ಬರು ಸ್ಪರ್ಧಿಗಳು ಬಿದ್ದು ಒದ್ದಾಡಿದ್ದಾರೆ. 

ಒಬ್ಬರ ಕಾಲಿಗೆ ಇನ್ನೊಬ್ಬರು ಹಗ್ಗವನ್ನು ಕಟ್ಟಿಕೊಂಡು ಆಡುವ ಆಟ ಇದಾಗಿದೆ. ಎರಡು ತಂಡಗಳನ್ನುಮಾಡಲಾಗಿದ್ದು, ಅವರು ಕುಂಟುತ್ತಾ ಹೋಗಬೇಕು. ಅಲ್ಲಿದ್ದ ಚೆಂಡುಗಳನ್ನು ಎತ್ತಿ ತಮ್ಮ ತಂಡಕ್ಕೆ  ಮೀಸಲು ಇರಿಸಿದ ಡಬ್ಬದಲ್ಲಿ ಹಾಕಬೇಕು. ಈ ಸಂದರ್ಭದಲ್ಲಿ ಪ್ರತಾಪ್​ ಸೇರಿದಂತೆ ಸ್ಪರ್ಧಿಗಳೆಲ್ಲಾ ಒಬ್ಬರ ಮೇಲೊಬ್ಬರಂತೆ ಬಿದ್ದು ಒದ್ದಾಡಿದ್ದಾರೆ. ವಿನಯ್​ ಉಗ್ರರೂಪ ತಾಳಿ ಹೀಗೆ ಏಟು ಮಾಡಿಕೊಂಡು ಆಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಆಗ ನಮ್ರತೆ ಕಣ್ಣಲ್ಲಿ ಜೋರಾಗಿ ಕಣ್ಣೀರು ಸುರಿದಿದೆ. ನಮಗೂ ಏಟಾಗಿದೆ, ನಮ್ಮ ಮೇಲೂ ಬಿದ್ದಿದ್ದಾರೆ. ನಮಗೂ ಏಟಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. 

ಆಟದ ಹೆಸರಲ್ಲಿ ಭಾರಿ ಹೊಡೆದಾಟ! ವೈಲ್ಡ್​ ಕಾರ್ಡ್​ ಎಂಟ್ರಿ ಆಗ್ತಿದ್ದಂತೆಯೇ ಬಿಗ್​ಬಾಸ್​ ಮನೆಯಲ್ಲಿ ಇದೇನಿದು?

ಮೊನ್ನೆ ಕೂಡ ಆಟದ ಹೆಸರಲ್ಲಿ ಭಾರಿ ಗಲಾಟೆ ನಡೆದಿತ್ತು.  ಬಿಗ್​ಬಾಸ್​ ಕೊಟ್ಟಿರೋ ಈ ಆಟದಲ್ಲಿ,  ಒಂದು ಬಕೆಟ್​ ನೀರನ್ನು ತುಂಬಿಸಿಕೊಂಡು ನಂತರ ಅದನ್ನು ಒಂದು ಪೈಪ್​ ಮೂಲಕ ಒಳಗೆ ಹಾಕಬೇಕು. ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್​ ಆದಂತೆ. ಆದರೆ ಇದೇ ವೇಳೆ ನೀರನ್ನು ಒಳಗಡೆ ಹಾಕಲು ಬರುವ ಸದಸ್ಯರನ್ನು ಉಳಿದವರು ತಡೆಯಬೇಕು. ಇದು ರೂಲ್ಸ್​. ಆದರೆ ಆಟದ ಹೆಸರಿನಲ್ಲಿ ನಡೆದಿರುವ ಈ ಆಟ ಕಾದಾಟವಾಗಿ ಮಾರ್ಪಟ್ಟಿತ್ತು. ಇದು ಆಟವಲ್ಲದೇ ಸ್ಪರ್ಧಿಗಳ ನಡುವೆ ಸೇಡು-ಪ್ರತಿ ಸೇಡಿಗೆ ಕಾರಣವಾಗಿತ್ತು. ತುಕಾಲಿ ಸಂತೋಷ್​ ಮತ್ತು ಸ್ನೇಹಿತ್​ ನಡುವೆ ಗುದ್ದಾಟ ಶುರುವಾಗಿದ್ದು,  ನಂತರ ವಿನಯ್​ ಕೂಡ ತುಕಾಲಿ ಸಂತೋಷ್​ ಜೊತೆ ಜಗಳವಾಡಿದ್ದರು. ಒಬ್ಬರನ್ನು ಒಬ್ಬರು ಬಲವಾಗಿ ತಳ್ಳಿದ್ದು, ಸೇಡಿಗೆ ಪ್ರತಿಸೇಡು ತೀರಿಸಿಕೊಂಡಿದ್ದರು.  

ಒಟ್ಟಿನಲ್ಲಿ ಬಿಗ್​ಬಾಸ್​ನಲ್ಲಿ ಹೆಚ್ಚು ಜಗಳವಾದರೆ, ಅದರ ಮಜ ತೆಗೆದುಕೊಳ್ತಿರೋ ವೀಕ್ಷಕರು ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸುವಂತೆ ಸೋಷಿಯಲ್​ ಮೀಡಿಯಾದಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಸಂಗೀತಾ ಅವರ ಪರವಾಗಿ ಸೋಷಿಯಲ್​ ಮೀಡಿಯಾದಲ್ಲಿ ಸ್ವಲ್ಪ ಹೆಚ್ಚಿನ ಜನರು ಒಲವು ತೋರುತ್ತಿದ್ದರೆ, ಡ್ರೋನ್​ ಪ್ರತಾಪ್​ ಮತ್ತು ವಿನಯ್​ ಪರವಾಗಿಯೂ ಸಾಕಷ್ಟು ಮಂದಿ ಬ್ಯಾಟಿಂಗ್​ ಬೀಸುತ್ತಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲಿ ನೊಂದವರ ಸಂಘ: ಯಾರು ಯಾರಿಗೆ ಯಾವ್ಯಾವ ಪೋಸ್ಟ್? ಬಿದ್ದೂ ಬಿದ್ದೂ ನಕ್ಕ ಕಿಚ್ಚ ಸುದೀಪ್​!

 

Follow Us:
Download App:
  • android
  • ios