Asianet Suvarna News Asianet Suvarna News

ಬಿಗ್​ಬಾಸ್ ಬಿಗ್​ ಸರ್​ಪ್ರೈಸ್​: ಅಮ್ಮಂದಿರ ಎಂಟ್ರಿ- ವಿನಯ್​ಗೆ ವಿಲನ್​ ಎಂದ ವರ್ತೂರು ತಾಯಿ- ಕಣ್​ ಸನ್ನೆ ಮಾಡಿದ ಸಂತೋಷ್​!

ಬಿಗ್​ಬಾಸ್​ ಮನೆಗೆ ನಮ್ರತಾ ಮತ್ತು ವರ್ತೂರು ಸಂತೋಷ್​ ಅವರ ಅಮ್ಮಂದಿರು ಎಂಟ್ರಿ ಕೊಟ್ಟಿದ್ದರು. ಆಗ ಮನೆಯಲ್ಲಿ ಏನೇನಾಯ್ತು? ಇಲ್ಲಿದೆ ಡಿಟೇಲ್ಸ್​
 

Namrata and Varthur Santhoshs mothers entered the Bigg Boss Kannada house suc
Author
First Published Dec 26, 2023, 6:26 PM IST

ಬಿಗ್​ಬಾಸ್​ ದಿನೇ ದಿನೇ ವಿಶಿಷ್ಠ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್​ಬಾಸ್​ ಮುಗಿಯಲಿದ್ದು, ಈ ಸಂದರ್ಭದಲ್ಲಿ ಟಾಸ್ಕ್​ಗಳ ಭರಾಟೆಯೂ ಜೋರಾಗಿದೆ. ಜೊತೆಗೆ ತಾವೇ ಬಿಗ್​ಬಾಸ್​ ಕಿರೀಟ ಪಡೆಯಬೇಕು ಎಂದು ಎಲ್ಲಾ ಸ್ಪರ್ಧಿಗಳು ಹಂಬಲಿಸುತ್ತಿದ್ದು, ಟಾಸ್ಕ್​ ಗೆಲ್ಲಲು ಶತಾಯುಗತಾಯು ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆಯೇ ಬಿಗ್​ಬಾಸ್​ ತನ್ನ ಸ್ಪರ್ಧಿಗಳಿಗೆ ಆಗಾಗ್ಗೆ ಸರ್​ಪ್ರೈಸ್​ ನೀಡುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಮನೆ ಅಡುಗೆಯನ್ನು ಸವಿಯುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಇದೀಗ ಇಬ್ಬರು ಅಮ್ಮಂದಿರ ಎಂಟ್ರಿಯಾಗಿದೆ. 

ಇಬ್ಬರು ಅಮ್ಮಂದಿರು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.  ಪಾಸ್​ ಕೊಟ್ಟು ಬಿಗ್ ಬಾಸ್​ ಮಂದಿಗೆ ಕ್ರಿಸ್​ಮಸ್​ ಗಿಫ್ಟ್​ ನೀಡಿದ್ದಾರೆ. ಅವರೆಂದರೆ ನಮ್ರತಾ ಗೌಡ ಹಾಗೂ ವರ್ತೂರು ಸಂತೋಷ್​ ಅವರ ತಾಯಿ. ಈ ಇಬ್ಬರೂ ಅಮ್ಮಂದಿರು ಬರುವ ಸುದ್ದಿ ಕೇಳಿ ಕುಣಿದಾಡಿದ್ದಾರೆ. ಇದರ ಪ್ರೊಮೋ ಅನ್ನು ಬಿಗ್​ಬಾಸ್​ ರಿಲೀಸ್​ ಮಾಡಿದೆ.   ನಮ್ರತಾ ಗೌಡ ತಾಯಿ ಮೊದಲ ಬಾರಿಗೆ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರೆ, ವರ್ತೂರು ಸಂತೋಷ್​ ಅವರ ಅಮ್ಮ ಎರಡನೆಯ ಬಾರಿ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಹುಲಿಯುಗುರು ಪ್ರಕರಣದಲ್ಲಿ ವರ್ತೂರು ಅವರು ಜೈಲಿಗೆ ಹೋಗಿ ಬಂದ ನಂತರ, ತಾವು ಬಿಗ್​ಬಾಸ್​ ಆಡುವುದಿಲ್ಲ ಎಂದು ವರ್ತೂರು ಹೈಡ್ರಾಮಾ ಮಾಡಿದ್ದರು. ಮನೆಗೆ ಹೋಗುವುದಾಗಿ ಹಠ ಹಿಡಿದಿದ್ದ ಕಾರಣ, ಅವರ ಅಮ್ಮನ ಎಂಟ್ರಿ ಆಗಿತ್ತು. ಅಮ್ಮ ಬಂದು ಸಮಾಧಾನ ಪಡಿಸಿದ್ದರು. ಇದೀಗ ಎರಡನೆಯ ಬಾರಿ ಎಂಟ್ರಿ ಕೊಟ್ಟಿದ್ದಾರೆ. 

ಕೈಯಲ್ಲಿ ದುಡ್ಡಿರದೇ ರಸ್ತೆ ಬದಿಯ ಬಟ್ಟೆ ತೊಟ್ಟು ಮಿಸ್​ ಇಂಡಿಯಾ ಗೆದ್ದ ಸುಷ್ಮಿತಾ ಸೇನ್​: ರೋಚಕ ಸ್ಟೋರಿ ಇಲ್ಲಿದೆ

ಅದೇ ಇನ್ನೊಂದೆಡೆ,   ನಮ್ರತಾ ಗೌಡ  ತಾಯಿ ಬಂದ ಖುಷಿಯಲ್ಲಿ ಕಣ್ಣೀರು ಹಾಕಿದ್ದರು.  ಕೆಲ ಸಮಯ ಮಗಳ ಜೊತೆ ಇದ್ದ ನಮ್ರತಾ ಅಮ್ಮ, ಕೆಲ ಕಾಲ ಕಳೆದು ಬಿಗ್ ಬಾಸ್​ ಮನೆಯಿಂದ ಹೊರಕ್ಕೆ ಬಂದಿದ್ದಾರೆ.  ಮನೆಯವರ ಜೊತೆ ಕೂಡ ನಮ್ರತಾ ತಾಯಿ ಮಾತಾಡಿದರು.   ಬಿಗ್ ಬಾಸ್ ಸ್ಪರ್ಧಿಗಳಿಗೆ ಇದೇ ವೇಳೆ ವರ್ತೂರು ಸಂತೋಷ್ ತಾಯಿ ಸಲಹೆ ನೀಡಿದ್ದಾರೆ. ಮನೆಯಲ್ಲಿ ಯಾರು ಅಳಬಾರದು ಎಂದಿದ್ದಾರೆ. ಸಂಗೀತಾ ನೀನು ತುಂಬಾ ಅಳ್ತೀಯಾ ಇನ್ಮೇಲೆ ಅಳಬೇಡ ಎಂದಿದ್ದಾರೆ.

ಜೊತೆಗೆ, ವಿನಯ್​ ಅವರನ್ನು ಕುರಿತು ವರ್ತೂರು ಸಂತೋಷ್​ ಅವರ ತಾಯಿ  ವಿಲನ್ ರೀತಿ ಆಟ ಎಂದಿದ್ದಾರೆ. ಈ ಮನೆಯಲ್ಲಿ ನಾನೊಬ್ಬನೇ ವಿಲನಾ ಎಂದು ಆಗ ವಿನಯ್ ಪ್ರಶ್ನೆ ಮಾಡಿದ್ದಾರೆ. ಅಮ್ಮ ಬೇಡ ಸುಮ್ನೆ ಇರು ಎಂದು ವರ್ತೂರು ಸಂತೋಷ್​ ಸನ್ನೆ ಮಾಡಿದ್ದಾರೆ. ಇದನ್ನೂ ನೋಡಿ ಮನೆಯವರು ಕೂಡ ನಕ್ಕಿದ್ದಾರೆ. ಈ ದಿನಕ್ಕಾಗಿ ಕಾಯ್ತಿದ್ದ ಸ್ಪರ್ಧಿಗಳು ಮನೆ ಮಂದಿಯನ್ನೆಲ್ಲಾ ಕಂಡು ಫುಲ್ ಖುಷ್​ ಆಗಿದ್ದಾರೆ. ಮತ್ತೆ ಯಾವೆಲ್ಲ ಸದಸ್ಯರ ಮನೆಯವರು ಬಿಗ್ ಬಾಸ್ ಮನೆಯೊಳಗೆ ಭೇಟಿ ಕೊಟ್ಟಿದ್ದಾರೆ? ಮನೆಯವರನ್ನು ನೋಡಿ ಸದಸ್ಯರ ರಿಯಾಕ್ಷನ್ ಹೇಗಿತ್ತು ಎಂಬುದನ್ನು ಬಿಗ್​ಬಾಸ್​ನಲ್ಲಿಯೇ ನೋಡಬೇಕು.

56 weds 33! ಮಂಟಪಕ್ಕೆ ಬಂದ 56ರ ಮದುಮಗ ಅರ್ಬಾಜ್ ಖಾನ್: ಮದ್ವೆಮನೆ ವಿಡಿಯೋ ವೈರಲ್​

Follow Us:
Download App:
  • android
  • ios