Asianet Suvarna News Asianet Suvarna News

56 weds 33! ಮಂಟಪಕ್ಕೆ ಬಂದ 56ರ ಮದುಮಗ ಅರ್ಬಾಜ್ ಖಾನ್: ಮದ್ವೆಮನೆ ವಿಡಿಯೋ ವೈರಲ್​

56 ವರ್ಷದ ನಟ ಅರ್ಬಾಜ್​ ಖಾನ್​ ಅವರು  33 ವರ್ಷದ ಮೇಕಪ್​ ಕಲಾವಿದೆಯ ಜೊತೆ ಇಂದು ಮದುವೆಯಾಗುತ್ತಿದ್ದಾರೆ. 3ನೇ ಬಾರಿ ಮದುಮಗನಾಗಿ ಮಂಟಪಕ್ಕೆ ಬಂದಿದ್ದು, ವಿಡಿಯೋ ವೈರಲ್​ ಆಗಿದೆ.
 

Actor Arbaaz Khan and make up artist Shura Khan wedding started suc
Author
First Published Dec 24, 2023, 4:19 PM IST

ಇನ್ನು ಕೆಲವೇ ಕ್ಷಣಗಳಲ್ಲಿ, ನಟ ಸಲ್ಮಾನ್​ ಖಾನ್​ ಸಹೋದರ, ನಟಿ ಮಲೈಕಾ ಶರಾವತ್​  ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್​ ಇನ್​ ಪಾರ್ಟನರ್​ ಅರ್ಬಾಜ್​ ಖಾನ್​ ಮೂರನೆಯ ಬಾರಿ ಮದುವೆಯಾಗಲಿದ್ದಾರೆ. ಇಂದು ಮದುವೆ ನಡೆಯುತ್ತಿದ್ದು, ಇದಾಗಲೇ ನಟ ಕಾರಿನಲ್ಲಿ ಮದುವೆಯ ಮಂಟಪಕ್ಕೆ ಹಾಜರಾಗಿದ್ದಾರೆ. ಸಹೋದರಿ ಅರ್ಪಿತಾ ಖಾನ್​ ಶರ್ಮಾ ಅವರ ಮನೆಯಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ 56 ವರ್ಷದ ಅರ್ಬಾಜ್​ ಖಾನ್​ ಅವರು 33 ವರ್ಷದ ಶುರಾ ಖಾನ್​ ಅವರ ಕೈಹಿಡಿಯಲಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ವಾರದ ಹಿಂದಷ್ಟೇ ತಮ್ಮ ಸಂಬಂಧದ ಕುರಿತು ಬಹಿರಂಗಗೊಳಿಸಿದ್ದರು.  2-3 ದಿನಗಳ ಹಿಂದಷ್ಟೇ ಡಿ.24ರಂದು ತಮ್ಮ ಮದುವೆ ಎಂದು ಸುದ್ದಿಯಾಗಿತ್ತೇ ವಿನಾ ಮದುಮಕ್ಕಳು ಈ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಆದರೆ ಕೊನೆಗೂ ಇವರ ಮದುವೆ ಸುದ್ದಿ ನಿಜವಾಗಿದ್ದು, ಇಂದು ಮದುವೆ ಕಾರ್ಯ ನೆರವೇರುತ್ತಿದೆ. 

ಅಂದಹಾಗೆ,  ಅರ್ಬಾಜ್​ ಖಾನ್​ಗೆ ಇದಾಗಲೇ ಎರಡು ಮದ್ವೆಯಾಗಿದ್ದು, ಇದು ಮೂರನೆಯ ಮದುವೆ. ಕುತೂಹಲದ ಸಂಗತಿ ಎಂದರೆ, ಈಗ ಮದ್ವೆಯಾಗುತ್ತಿರುವ ಯುವತಿ ಅರ್ಬಾಜ್​ ಖಾನ್​ ಅವರಿಗಿಂತ 22 ವರ್ಷ ಚಿಕ್ಕವರು! ಅಂದಹಾಗೆ ಈ ಯುವತಿಯ ಹೆಸರು,  ಶುರಾ ಖಾನ್​. ಇವರು ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆ ನಾಡಿದ್ದೇ ಅಂದರೆ ಇದೇ 24ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದೆ.   ಶುರಾ ಖಾನ್ ಮತ್ತು  ಅರ್ಬಾಜ್​ ಖಾನ್​ ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ  ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ.  ಶುರಾ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್  ನೋಡಿದಾಗ, ಅವರು ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಾರೆ ಎನ್ನುವುದು ತಿಳಿಯುತ್ತದೆ. 

ಪತ್ನಿಯೂ ಬಿಟ್ಟಳು, ಗರ್ಲ್​ಫ್ರೆಂಡೂ ಕೈಕೊಟ್ಟಳು... ಮಲೈಕಾ ಅರೋರಾ ಮಾಜಿ ಪತಿಗೆ ಕೊನೆಗೂ ಸಿಕ್ಕಳೀ ಹೊಸ ಬೆಡಗಿ?

 ಅರ್ಬಾಜ್​ ಖಾನ್​ ಅವರ ಮೊದಲ ಮದುವೆ ನಡೆದದ್ದು ಹಾಟೆಸ್ಟ್​ ನಟಿ ಮಲೈಕಾ ಅರೋರಾ ಜೊತೆ. ಈ ಜೋಡಿಗೆ 21 ವರ್ಷದ ಮಗ ಅರ್ಹಾನ್​ ಖಾನ್​ ಇದ್ದಾನೆ.  2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್​ ಖಾನ್​ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದಾರೆ ಮಲೈಕಾ.  ಮಲೈಕಾ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್​ ಖಾನ್​ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದೆ.  

ಇದು ಒಂದೆಡೆಯಾದರೆ, ಇತ್ತ ಅರ್ಬಾಜ್​ ಖಾನ್​, ಕೆಲ ವರ್ಷಗಳಿಂದ ಇಟಲಿಯ ನಟಿ ಮತ್ತು ರೂಪದರ್ಶಿಯಾಗಿದ್ದು ಜಾರ್ಜಿಯಾ ಆಂಡ್ರಿಯಾನಿ ಜೊತೆ ಸಂಬಂಧದಲ್ಲಿದ್ದರು. ಅಧಿಕೃತವಾಗಿ ಮದ್ವೆಯಾಗದಿದ್ದರೂ ಪತಿ-ಪತ್ನಿಯಂತೆ ಬಾಳುತ್ತಿದ್ದರು.  2019 ರಲ್ಲಿ ಜಾರ್ಜಿಯಾ ಆಂಡ್ರಿಯಾನಿ ಅವರೊಂದಿಗಿನ ಸಂಬಂಧವನ್ನು ಅರ್ಬಾಜ್​ ಖಾನ್​ ದೃಢಪಡಿಸಿದ್ದರು.  ಸಂಬಂಧ ಮುರಿದ ಬಳಿಕ ಈ ಕುರಿತು ಮಾತನಾಡಿದ್ದ  ಜಾರ್ಜಿಯಾ ಆಂಡ್ರಿಯಾನಿ,  ಈ ಸಂಬಂಧ  ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಮೊದಲಿನಿಂದಲೂ ನಮಗಿಬ್ಬರಿಗೂ ಗೊತ್ತಿತ್ತು. ಏಕೆಂದರೆ ನಾವು ತುಂಬಾ ಭಿನ್ನರು. ಅದು ಇಬ್ಬರಿಗೂ ಗೊತ್ತಿತ್ತು ಆದರೆ ಅದನ್ನು ಒಪ್ಪಿಕೊಳ್ಳುವ ಧೈರ್ಯ ನಮ್ಮಿಬ್ಬರಿಗೂ ಇರಲಿಲ್ಲ ಎಂದಿದ್ದರು. ನಾಲ್ಕು ವರ್ಷಗಳ ಅವಧಿಯಲ್ಲಿ  ನಾವು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೇವೆ, ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿರುತ್ತೇವೆ. ಆ ಸಮಯದಲ್ಲಿ ನಾವು ಸ್ನೇಹಿತರಿಗಿಂತ ಹೆಚ್ಚಾಗಿದ್ದೆವು. ನಾವು ಯಾವಾಗಲೂ ತುಂಬಾ ಹತ್ತಿರವಾಗಿದ್ದೇವೆ.  ಒಟ್ಟಿಗೆ ಮೋಜು ಮಾಡಿ, ಸ್ನೇಹಿತರಿಂದ ಸ್ನೇಹಿತರಾಗಲು ಕಷ್ಟವಾಗಲು ಇದು ಕೂಡ ಒಂದು ಕಾರಣ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಇದೀಗ ಮೂರನೆಯ ಮದುವೆ ನಡೆಯುತ್ತಿದ್ದು, ಇದಾದರೂ ಶಾಶ್ವತವಾಗಿ ನಿಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

ಯುವಕನಂತೆ ಮೇಕಪ್​ ಮಾಡ್ಕೊಂಡು ಸುಸ್ತಾದ್ರಾ ಶಾರುಖ್? ಮುಂದಿನ ಚಿತ್ರದ ಹೇಳಿಕೆಗೆ ಫ್ಯಾನ್ಸ್​ ಬೇಸರ!

 

Follow Us:
Download App:
  • android
  • ios