ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಮೀರಾ ಪಾತ್ರದಲ್ಲಿ ಮಿಂಚುತ್ತಿರುವ ಅಂಕಿತಾ ಸಿಂಪಲ್ & ಕ್ಯೂಟ್ ಹುಡುಗಿ. ಇವರು ನಟನೆಯಷ್ಟೇ ಪ್ರಾಮುಖ್ಯತೆಯನ್ನು ಬೇರೆ ವಿಚಾರಗಳಿಗೂ ಕೊಡ್ತಾರೆ.

ನಟಿಯ ಡ್ಯಾನ್ಸ್ ಮಾಡೋದರಲ್ಲಿ ಮತ್ತು ಹಾಡೋದರಲ್ಲಿಯೂ ಎತ್ತಿದ ಕೈ. ಸುಶ್ರಾವ್ಯವಾಗಿ ಹಾಡುತ್ತಾರೆ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನೃತ್ಯವನ್ನೂ ಮಾಡುತ್ತಾರೆ ಈಕೆ. ಈಕೆಯ ಇತ್ತೀಚಿನ ವಿಡಿಯೋ ವೈರಲ್ ಅಗಿದೆ.

ಬಾಯಲ್ಲೇ ಗಟ್ಟಿಮೇಳದ ರೌಡಿ ಬೇಬಿ ಚಿತ್ರ ಬಿಡಿಸಿದ ಅಭಿಮಾನಿ

ಇತ್ತೀಚಿನ ನಟಿಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅಶ್ವತ್‌ಪುರ ಸಂಕೀರ್ತನೆ ಎಂಬ ಕ್ಯಾಪ್ಶನ್ ಅಡಿಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್ ಪೇಜ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ.

ಇದರಲ್ಲಿ ತಂಡದ ಸದಸ್ಯರು ಸುಶ್ರಾವ್ಯವಾಗಿ ಹಾಡುತ್ತಾ,  ತಾಳ ಹಾಕುತ್ತಿದ್ದರೆ ಮೀರಾ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಿದ್ದನ್ನು ಕಾಣಬಹುದು. ನೀಲಬಣ್ಣದ ಸೀರೆಯಲ್ಲಿ ಅಂದವಾಗಿ ಕಾಣಿಸಿದ್ದಾರೆ ಅಂಕಿತಾ.