ಗಟ್ಟಿ ಮೇಳ ಧಾರವಾಹಿಯ ಮೂಲಕ ಎಲ್ಲರ ಮನ ಗೆದ್ದಿರುವ ರೌಡಿ ಬೇಬಿ ಈಗ ಎಲ್ಲೆಡೆ ಫೇಮಸ್. ನಿರೂಪಣೆ, ಬ್ಯಾಕ್‌ಗ್ರೌಂಡ್ ಡ್ಯಾನ್ಸ್ ಮಾಡುತ್ತಿದ್ದ ನಿಶಾ ಸದ್ಯ ಗಟ್ಟಿ ಮೇಳ ಸೀರಿಯಲ್ ಮೂಲಕ ಫೇಮಸ್ ಆಗಿದ್ದಾರೆ.

ನಟಿ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿ ಬಾಯಲ್ಲಿ ಪೆನ್ಸಿಲ್ ಇಟ್ಟು ನಿಶಾ ಅವರ ಫೋಟೋ ನೋಡಿ ಡ್ರಾಯಿಂಗ್ ಮಾಡೋ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಬ್ಯಾಕ್ ಡ್ಯಾನ್ಸರ್ ಆಗಿದ್ದ ನಿಶಾ ಈಗ ಗಟ್ಟಿಮೇಳದ ರೌಡಿ ಬೇಬಿ

ಬ್ಯಾಕ್ ಡ್ಯಾನ್ಸರ್ ಆಗಿದ್ದ ನಿಶಾ ಈಗ ಗಟ್ಟಿಮೇಳದ ರೌಡಿ ಬೇಬಿ. ಇದು ಝಮೀರ್ ಮಾಡಿದ ಚಿತ್ರ. ಹ್ಯಾಟ್ಆಫ್ ಝಮೀರ್. ಗಾಡ್‌ ಬ್ಲೆಸ್ ಯು ಎಂದಿದ್ದಾರೆ. ವಿಡಿಯೋ ಶೇರ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.

ಬದುಕಲ್ಲಿ ಏನೇ ಏರು ಪೇರಾದರೂ ಮುಂದುವರಿಯಿರಿ, ಇನ್ನಷ್ಟು ಸಕ್ಸಸ್ ಸಿಗಲಿ ಎಂದು ಹಾರೈಸಿದ್ದಾರೆ ನಟಿ. ಫೋಟೋ ನೋಡಿ ಮೆಚ್ಚಿಕೊಂಡಿದ್ದಾರೆ ನಿಶಾ ಅಭಿಮಾನಿಗಳು. ವಿಡಿಯೋ ಅಂದವಾಗಿ ಮೂಡಿ ಬಂದಿದೆ.

 
 
 
 
 
 
 
 
 
 
 
 
 
 
 

A post shared by Zameer Ghori (@zameerarts)