Kannadathi : ಬದಲಾದ ಸಾನಿಯಾ ಕಂಡು ದಂಗಾದ ಹರ್ಷ, ವರೂ ಕೊಟ್ಳು ಬಿಗ್ ಶಾಕ್!
ಕನ್ನಡತಿ ಸೀರಿಯಲ್‌ನ ಕೊನೆಯ ಎಪಿಸೋಡ್ ಇಂದು ಮತ್ತು ನಾಳೆ ಪ್ರಸಾರವಾಗಲಿದೆ. ಇದೀಗ ಹರ್ಷ ಭುವಿಗೆ ಶಾಕ್ ಕೊಡ್ತಿದ್ದಾರೆ ಇಬ್ಬರು ವಿಲನ್ ಗಳು. ಒಂದು ಕಡೆ ಬದಲಾದ ಸಾನಿಯಾ ಕಂಡು ಹರ್ಷ ದಂಗಾದರೆ ಇನ್ನೊಂದು ಕಡೆ ವರೂ ಹೊಸ ವರಸೆ ಕಂಡು ಭುವಿ, ಮನೆಯವರೆಲ್ಲ ಬೆಚ್ಚಿಬಿದ್ದಿದ್ದಾರೆ.
ಕನ್ನಡತಿ ಸೀರಿಯಲ್ ಕೊನೆಯ ಹಂತ ಪ್ರವೇಶಿಸಿದೆ. ಇದೀಗ ಪ್ರಸಾರವಾಗ್ತಿರೋ ಕೊನೆ ಕೊನೆಯ ಎಪಿಸೋಡ್‌ಗಳು ಹೆಚ್ಚು ಇಂಟರೆಸ್ಟಿಂಗ್ ಆಗಿವೆ. ಜನ ಇದನ್ನು ನೋಡಿ ಬಗೆ ಬಗೆಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕನ್ನಡತಿ ಸೀರಿಯಲ್ ಆರಂಭದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಹರ್ಷ ಭುವಿಯ ಪ್ರೀತಿ ಪ್ರೇಮದ ಕಥೆಯೇ ಮೊದಲಾದರೂ ಇಂಟೆರೆಸ್ಟಿಂಗ್ ಆಗಿರುವ ಇತರ ವಿಚಾರಗಳೂ ಇವೆ. ಕನ್ನಡ ಪದಗಳ ಸರಿ ರೂಪ ತೋರಿಸುವ ಪ್ರಯತ್ನ ಅದರಲ್ಲೊಂದು. ಕನ್ನಡ ಟೀಚರ್ ಭುವಿ ಅಪಭ್ರಂಶಗೊಂಡು ಬಳಕೆಯಲ್ಲಿರುವ ಕನ್ನಡ ಮತ್ತು ಶುದ್ಧ ಕನ್ನಡದ ಬಗ್ಗೆ ವಿವರಿಸುತ್ತಾಳೆ. ಇದನ್ನು ನೋಡಿ ಶುದ್ಧ ಕನ್ನಡ ಕಲಿತವರೂ ಇದ್ದಾರೆ. ಈ ಕಾಲದಲ್ಲಿ ಇಂಥದ್ದನ್ನೆಲ್ಲ ಯಾರು ನೋಡ್ತಾರೆ ಅನ್ನೋ ಗೊಣಗಾಟದ ನಡುವೆಯೇ ಶುರುವಾದ ಕನ್ನಡತಿ ಕಥೆ ಇದೀಗ ಯಶಸ್ವಿಯಾಗಿ ಕೊನೆಗೊಳ್ಳುತ್ತಿದೆ. ಕೊನೆಯಲ್ಲಿ ಹ್ಯಾಪಿ ಎಂಡಿಂಗ್‌ನ ಎಲ್ಲ ಲಕ್ಷಣ ಕಾಣುತ್ತಿದೆ.
ಹ್ಯಾಪಿ ಎಂಡಿಂಗ್‌ನ ಭಾಗವಾಗಿ ಸಾನಿಯಾ ಬದಲಾಗಿದ್ದಾಳೆ. ಆಸ್ತಿ ಪೇಪರ್ ಅನ್ನು ಪ್ರಾಮಾಣಿಕವಾಗಿ ನೀಡುವುದಷ್ಟೇ ಅಲ್ಲ, ಅಮ್ಮಮ್ಮನ ಕಾಫಿ ಅಂಗಡಿಗೆ ತಗಾದೆ ತೆಗೆದವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಬೆಳವಣಿಗೆ ಕಂಡು ಹರ್ಷ ದಂಗಾಗಿದ್ದಾನೆ. ಸಾನಿಯಾ ನಿಜಕ್ಕೂ ಬದಲಾಗಿದ್ದಾಳಾ ಅಂತ ಭುವಿಯನ್ನು ಪ್ರಶ್ನಿಸುತ್ತಾಳೆ. ಭುವಿ ಅದಕ್ಕೆ ತನ್ನ ಎಂದಿನ ಶೈಲಿಯಲ್ಲಿ ಸಮಾಧಾನದ ಉತ್ತರ ನೀಡುತ್ತಾಳೆ. ಪರಿಸರ, ಕೆಲವು ನೋವಿನ ಘಟನೆಗಳು ನಮ್ಮ ಮೇಲೆ ಪ್ರಭಾವ ಬೀರಿ ಒಬ್ಬ ಸಾನ್ಯಾ, ಒಬ್ಬ ವರೂಧಿನಿ ತಯಾರಾಗ್ತಾರೆ ಅಂತಾಳೆ. ಅದಕ್ಕೆ ಭಿನ್ನವಾಗಿ ಹರ್ಷ ಒಬ್ಬ ಭುವಿಯೂ ಸಿಗುತ್ತಾಳೆ ಅನ್ನುತ್ತಾನೆ.
Lakshana serial: ನಕ್ಷತ್ರನೇ ಆರ್ ಜೆ ಸಖಿ, ಶ್ವೇತಾಗೆ ಛೀಮಾರಿ ಹಾಕಿದ ಭೂಪತಿ
ಇನ್ನೊಂದೆಡೆ ಅಮ್ಮಮ್ಮನ ಕಾಫಿ ಅಂಗಡಿ ಸೊಗಸಾಗಿ ತಯಾರಾಗಿದೆ. ಅಚ್ಚ ಕನ್ನಡ ಸಂಸ್ಕೃತಿ ಇಲ್ಲಿದೆ. ಅನೇಕ ಕನ್ನಡ ಪುಸ್ತಕಗಳು, ಎಲ್ಲೆಡೆ ಹಚ್ಚ ಹಸಿರಿನ ವಾತಾವರಣ ಕಂಡ ಭುವಿಯ ಕಣ್ಣಲ್ಲಿ ನೀರೇ ಬರುತ್ತಿದೆ. ಆಕೆಯ ಕಣ್ಣೀರು ಕಂಡು ಹರ್ಷ ಅವಳನ್ನು ಪ್ರಶ್ನೆ ಮಾಡುತ್ತಲೇ ಇದ್ದಾನೆ. ಭುವಿ ಆ ಕಾಫಿ ಅಂಗಡಿ ಬಗ್ಗೆ ಕೆಲವು ಪ್ರಶ್ನೆಗಳನ್ನೂ ಕೇಳಿದ್ದಾರೆ.
ಇನ್ನೊಂದೆಡೆ ವರೂಧಿನಿ ಕಡೆಯಿಂದ ಬಿಗ್ ಶಾಕ್(Shock) ಎದುರಾಗುತ್ತಿದೆ. ಆಕೆ ಹರ್ಷ ಮತ್ತು ಭುವಿಗೆ ಡಿವೋರ್ಸ್(Divorce) ಕೊಡಿಸಲು ಮುಂದಾಗಿದ್ದಾಳೆ. ಇತ್ತ ಡಿವೋರ್ಸ್ ಕೊಡಿಸೋ ಲಾಯರ್(Lawyer)ಗೆ ಆಕೆಯ ಮೇಲೆ ಪ್ರೀತಿ ಆಗಿದೆ. ಆದರೆ ವರೂ ತನಗೆ ಹರ್ಷನೇ ಹೀರೋ ಅನ್ನುತ್ತಿದ್ದಾಳೆ. ಏನು ಮಾಡಿದರೂ ಆಕೆ ತನ್ನ ಪಟ್ಟು ಬಿಡುತ್ತಿಲ್ಲ. ಸಂಚಿಕೆಯ ಕೊನೆಯಲ್ಲಿ ಆಕೆಯ ಕೈಯಲ್ಲಿ ಎರಡು ಹೂ ಹಾರಗಳಿವೆ. ಆಕೆ ತನ್ನ ಎಂದಿನ ಶೈಲಿಯಲ್ಲಿ ಕಟುವಾಗಿ ಮಾತಾಡುತ್ತ ತಾನೊಂದು ವಿಚಾರ ರಿವೀಲ್ ಮಾಡಲು ಹೊರಟಿರೋದಾಗಿ ಹೇಳಿದ್ದಾಳೆ. ಆ ವಿಚಾರ ಏನು ಅನ್ನೋದು ನಾಳಿನ ಅಂದರೆ ಕೊನೆಯ ಸಂಚಿಕೆಯಲ್ಲಿ ರಿವೀಲ್ ಆಗಿದೆ.
ಅಂದಹಾಗೆ ಈ ಸೀರಿಯಲ್‌ನ ಹರ್ಷನ ಪಾತ್ರದಲ್ಲಿ ಕಿರಣ್‌ರಾಜ್ ಮಿಂಚುತ್ತಿದ್ದಾರೆ. ಭುವಿಯ ಪಾತ್ರದಲ್ಲಿ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಅಮ್ಮಮ್ಮನಾಗಿ ಚಿತ್ಕಲಾ ಬಿರಾದಾರ್, ಸಾನ್ಯಾ ಪಾತ್ರದಲ್ಲಿ ಆರೋಹಿ ನೈನಾ, ವರೂಧಿನಿ ಪಾತ್ರದಲ್ಲಿ ಸಾರಾ ಅಣ್ಣಯ್ಯ ನಟಿಸಿದ್ದಾರೆ. ಯಶವಂತ್ ಪಾಂಡು ನಿರ್ದೇಶನದ ಈ ಸೀರಿಯಲ್‌ಗೆ(Serial) ವಿಕಾಸ್ ನೇಗಿಲೋಣಿ ಸಂಭಾಷಣೆ ಇದೆ. ಕಥೆ ಪರಮೇಶ್ವರ ಗುಂಡ್ಕಲ್ ಅವರದು.
ಅಮ್ಮಮ್ಮನ ಕಾಫಿ ಅಂಗಡಿ ರೆಡಿ ಆಯ್ತು! ಕನ್ನಡತಿ ಕೊನೆ ಹೇಗಿರುತ್ತೆ?